Ayanur Manjunath ಈ ಬಾರಿ ಮೋದಿ ಅಲೆ ಕಾಣ್ತಿಲ್ಲ. ಶಿವಮೊಗ್ಗದಲ್ಲಿ ಐದು ಜಿಲ್ಲೆ ಕಾರ್ಯಕರ್ತರ ಸೇರಿ ಸಮಾವೇಶ ನಡೆಸಲಾಯ್ತು. ಜನರ ಪ್ರವಾಹವೇ ಹರಿದು ಬರುತ್ತದೆ ಅಂತಿದ್ರು ಅದೆಲ್ಲಾ ಹುಸಿಯಾಗಿದೆ. ಕಳೆದ ಬಾರಿ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯೇ ಸಾಕ್ಷಿಯಾಗಿದೆ.
ರಾಜ್ಯದಲ್ಲಿ ಯಾವುದೇ ಮೋದಿ ಅಲೆ ಇಲ್ಲ ಎಂದು ಆಯನೀರು ಮಂಜುನಾಥ ಕುಟುಕಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,
ಈಶ್ವರಪ್ಪ ಸ್ಪರ್ಧೆ ವಿಚಾರ
ನನಗೆ ಈಗಲೂ ಈಶ್ವರಪ್ಪ ಪಕ್ಷೇತರ ಸ್ಪರ್ಧೆ ಮಾಡುವ ವಿಶ್ವಾಸ ಇಲ್ಲ. ಈಶ್ವರಪ್ಪ ಯಾವಾಗಲೂ ಕೊನೆಯವರೆಗೆ ಹೋರಾಟ ಮಾಡಲ್ಲ. ಈಶ್ವರಪ್ಪ ಅವರಿಗೆ ಕೊನೆಯವರೆಗೆ ಹೋರಾಟ ಮಾಡುವ ಗಂಡೆದೆ ಇಲ್ಲ ಎಂದರು.
ಈಶ್ವರಪ್ಪ ಒಂದು ವೇಳೆ ಸ್ಪರ್ಧಿಸಿದ್ದೆ ಆದರೆ ನನ್ನ ಮತ ಅವರಿಗೆ ಹಾಕ್ತೇನೆ ಎಂದರು.
ಈಶ್ವರಪ್ಪ ಹಾಗೂ ರಾಘವೇಂದ್ರ ಗೆಲ್ಲುವ ಲೆಕ್ಕಾಚಾರ ಹಾಕಿಕೊಂಡಿದ್ದಾರೆ ಅದು ಸಾಧ್ಯವಿಲ್ಲ. ಇಬ್ಬರ ನಡುವೆ ನಮ್ಮ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುತ್ತಾರೆ. ಈಶ್ವರಪ್ಪ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡ್ತಿದ್ದಾರೆ. ಆದರೆ ಅವರೇ ಮಗನಿಗೆ ಟಿಕೇಟ್ ಸಿಗಲಿಲ್ಲ ಅಂತಾ ಸ್ಪರ್ಧೆ ಮಾಡ್ತಿದ್ದಾರೆ ಎಂದರು.
ಮಗನಿಗೆ ಟಿಕೇಟ್ ಸಿಗಲಿಲ್ಲ ಅಂತಾ ಸ್ಪರ್ಧೆ ಮಾಡೋದು ಎಷ್ಟು ಸರಿ? ಕುಟುಂಬದ ವಿಚಾರ ಬಿಟ್ಟು ಧ್ವನಿ ಎತ್ತಿದ್ದರೆ ಅವರಿಗೆ ಗೌರವ ಇರುತಿತ್ತು. ಬಿಜೆಪಿ ಒಡೆದ ಮನೆಯಲ್ಲ ಚೂರು ಚೂರಾದ ಮನೆಯಾಗಿದೆ. ನಾನು ಪಕ್ಷ ಬಿಟ್ಟಾಗ ಯಾರು ಮಾತನಾಡಲಿಲ್ಲ.ಈಗ ಅವರ ಬುಡಕ್ಕೆ ಬಂದಾಗ ಎಲ್ಲಾ ಮಾತನಾಡ್ತಿದ್ದಾರೆ ಎಂದರು.
Ayanur Manjunath ಪಕ್ಷ ಶುದ್ದೀಕರಣ ಮಾಡಬೇಕು ಅಂತಿದ್ದಾರೆ. ನನಗೂ ಕೂಡಾ ಸಾಕಷ್ಟು ನೋವಿತ್ತು. ನಾನು ಸಹ ನೋವಿನಿಂದಲೇ ಪಕ್ಷದಿಂದ ಹೊರ ಬಂದೆ ಎಂದು ಹೇಳಿದರು.