World Forest Day ಅರಣ್ಯ ಮತ್ತು ಜಲ ಇವು ಒಂದಕ್ಕೊಂದು ಹೊಂದಿಕೊಂಡಿವೆ. ನಾವು ದಿನನಿತ್ಯ ಇವುಗಳ ಮೇಲೆ ಅವಲಂಬಿತವಾಗಿದ್ದೇವೆ. ಆದರೆ ಅದು ದಿನೇ ದಿನೇ ಒಂದು ಕಡೆಯಲ್ಲಿ ಅರಣ್ಯ ನಾಶ ಆಗುತ್ತಿದೆ. ಅದೇ ಅರಣ್ಯದ ಮೇಲೆ ಅವಲಂಬಿತವಾದ ನದಿಗಳು ಸಹ ಬತ್ತಿ ಹೋಗುತ್ತಿವೆ. ಜೊತೆಗೆ ನಗರದ ಎಲ್ಲಾ ತ್ಯಾಜ್ಯಗಳನ್ನು ನದಿಗೆ ಬಿಡುವುದರಿಂದ ಇರುವ ನೀರು ಮಲೀನವಾಗುತ್ತಿದೆ ಇಂತಹ ಸಮಸ್ಯೆಗಳಿಗೆ ಸಮುದಾಯವೇ ಪರಿಹಾರ ಕಂಡುಕೊಳ್ಳಬೇಕು ಎಂದು ಪ್ರೊ. ಶೇಖರ್ ಗೌಳೇರ್ ಹೇಳಿದರು.
ವಿಶ್ವ ಅರಣ್ಯ ದಿನ 2024 ರ ಅಂಗವಾಗಿ ಕುವೆಂಪು ಶತಮಾನೋತ್ಸವ ಬಿ,ಎಡ್ ಕಾಲೇಜ್ ನಲ್ಲಿ ಕರ್ನಾಟಕ ರಾಜ್ಯ ಮಾನ್ಯ ನಿಯಂತ್ರಣ ಮಂಡಳಿ ಶಿವಮೊಗ್ಗ ಪರಿಸರ ಅಧ್ಯಯನ ಕೇಂದ್ರ ಶಿವಮೊಗ್ಗ ಅಭಿಯಾನ ಶಿವಮೊಗ್ಗ ರೇಡಿಯೋ ಶಿವಮೊಗ್ಗ 90.8 ಇದರ ಸಂಯುಕ್ತ ಆಶ್ರಯದಲ್ಲಿ ಜರುಗಿದ ನಾವು ನಮ್ಮ ಅರಣ್ಯ ಎಂಬ ವಿಷಯದ ಮೇಲಿನ ಸಂವಾದ ಕಾರ್ಯಕ್ರಮವನ್ನು ಉದ್ಘಟಿಸಿ ಅವರು ಮಾತನಾಡಿದರು.
World Forest Day ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ನಿವೃತ್ತ ಉಪ ಸಂರಕ್ಷಣಾಧಿಕಾರಿ ಮಂಜುನಾಥ ಮಾತನಾಡಿ, ಅರಣ್ಯದ ಮೇಲೆ ಅಭಿವೃದ್ಧಿಯ ಒತ್ತಡ ದಿನೇ ದಿನೇ ಹೆಚ್ಚಾಗುತ್ತಿದ್ದು ನಾವು ನಮ್ಮ ಅಗತ್ಯಕ್ಕಿಂತ ಹೆಚ್ಚಾಗಿ ಸಂಪನ್ಮೂಲಗಳನ್ನ ಬಳಸುತ್ತಿರುವುದೇ ಅರಣ್ಯ ನಾಶಕ್ಕೂ ಕಾರಣವಾಗಿದೆ ಅರಣ್ಯ ನಮ್ಮ ಜೀವನದ ಶೇಕಡ 50ರಷ್ಟು ಅಗತ್ಯಗಳನ್ನು ಪೂರೈಸುತ್ತದೆ. ಅದೇ ನಾವು ಅತಿಯಾಗಿ ಈ ನೈಸರ್ಗಿಕ ಸಂಪನ್ಮೂಲಗಳನ್ನು ಅರಿವೇ ಇಲ್ಲದೆ ಬಳಸುತ್ತಿರುವುದು ಹಾಗೂ ನಮ್ಮ ಜೀವನ ಶೈಲಿಯ ಬದಲಾವಣೆಯಿಂದ ಅರಣ್ಯಗಳು ಬರಿದಾಗುತ್ತಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಪರಿಸರ ಅಧ್ಯಯನ ಕೇಂದ್ರದ ದಿನೇಶ್ ಹೊಸನಗರ ಮಾತನಾಡಿದರು.