Saturday, December 6, 2025
Saturday, December 6, 2025

KS Eshwarappa ಮಾಜಿ ಸಚಿವ ಈಶ್ವರಪ್ಪ ಟೆಂಪಲ್ ರನ್ ಶುರು

Date:

KS Eshwarappa ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ರವರು ತಮ್ಮ ಬೆಂಬಲಿಗರೊಂದಿಗೆ ತಾಲೂಕಿನ ಬಿಳಿಕಿ ಹಿರೇಮಠ, ಗೋಣಿಬೀಡು ಶೀಲ ಸಂಪಾದನಾ ಮಠ ಹಾಗೂ ಎಂ.ಸಿ. ಹಳ್ಳಿಯ ಭದ್ರಗಿರಿಯ ಶಿವಸುಬ್ರಮಣ್ಯ ಸ್ವಾಮಿ ಆಶ್ರಮಕ್ಕೆ ಸೋಮವಾರ ಭೇಟಿ ನೀಡಿ ಶ್ರೀಗಳಿಂದ ಆಶಿರ್ವಾದ ಪಡೆದುಕೊಂಡರು.
ಬಿಳಿಕಿ ಹಿರೇಮಠಕ್ಕೆ ತೆರಳಿದ ಈಶ್ವರಪ್ಪ ರವರಿಗೆ ಅವರ ಪುಣ್ಯದ ಫಲವೆಂಬಂತೆ ಶ್ರೀ ಮಠಕ್ಕೆ ಆಗಮಿಸಿದ್ದ ಯಡಿಯೂರು ಶ್ರೀಗಳಿಂದಲೂ ಆಶೀರ್ವಾದ ಪಡೆದುಕೊಂಡು ನಂತರ ಬಿಳಿಕಿಯ ರಾಚೋಟೇಶ್ವರ ಶಿವಾಚಾರ್ಯರ ಸ್ವಾಮೀಜಿಗಳ ಆಶೀರ್ವಾದ ಪಡೆದರು. ಶಿವಮೊಗ್ಗದ ಮಹಾಲಿಂಗ ಶಾಸ್ತ್ರಿಗಳು ಫೋನಾಯಿಸಿ ಕಾಶಿ ಶ್ರೀಗಳಿಗೆ ನೀಡಿದ ಮೇರೆಗೆ ಈಶ್ವರಪ್ಪ ಶ್ರೀಗಳೊಂದಿಗೆ ಮಾತನಾಡಿ ಫೋನಿನಲ್ಲಿಯೇ ಕೃಪಾಶೀರ್ವಾದ ಪಡೆದರು. ಅಲ್ಲಿಂದ ಗೋಣಿಬೀಡಿನ ಶೀಲಸಂಪಾದನಾ ಮಠಕ್ಕೆ ತೆರಳಿ ಶ್ರೀಗಳಿಂದ ಆಶೀರ್ವಾದ ಪಡೆದು ನಂತರ ಎಂ.ಸಿ.ಹಳ್ಳಿಯ ಭದ್ರಗಿರಿ ಶಿವ ಸುಬ್ರಮಣ್ಯಸ್ವಾಮಿ ದೇವಾಲಯಕ್ಕೆ ತೆರಳಿ ಅಲ್ಲಿನ ಶ್ರೀ ಮುರುಗೇಶ್ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದುಕೊಂಡರು.
ಈ ಸಂದರ್ಭದಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಈಶ್ವರಪ್ಪ ರವರು ನಿಜವಾದ ಹಿಂದು ಭಕ್ತರನ್ನು ರಕ್ಷಿಸಲು, ನಿಷ್ಟಾವಂತ ಪಕ್ಷದ ಕಾರ್ಯಕರ್ತರ ಹಿತಕ್ಕಾಗಿ ಹಾಗೂ ಅಪ್ಪ ಮಕ್ಕಳ ಕಪಿಮುಷ್ಟಿಯಿಂದ ಪಕ್ಷವನ್ನು ಕಾಪಾಡುವುದು ನಮ್ಮ ಗುರಿಯಾಗಿರುವುದರಿಂದ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ಖಚಿತ. ಗೆದ್ದ ತಕ್ಷಣ ಶ್ರೀರಾಮ ಜನ್ಮಭೂಮಿಗೆ ತೆರಳಿ ಭಗವಂತನ

ದರ್ಶನ ಪಡೆದು ಅಲ್ಲಿಂದ ಪ್ರಧಾನಿ ಮೋದಿ ಅವರನ್ನು ಭೇಟಿಯಾಗುವುದೇ ನಮ್ಮ ಗುರಿಯಾಗಿದೆ ಎಂದರು.
ಈಶ್ವರಪ್ಪ ರವರನ್ನು ಬೆಂಬಲಿಸಿ ಬಿಜೆಪಿ ಮಾಜಿ ಅಧ್ಯಕ್ಷ ಪ್ರಭಾಕರ್, ವಿಹೆಚ್‌ಪಿಯ ಹಾ.ರಾಮಪ್ಪ, ಮಂಜುನಾಥ,

KS Eshwarappa ಬಿ.ಎಸ್.ನಾರಾಯಣಪ್ಪ, ಸಿದ್ದಾಪುರ ಮಂಜುನಾಥ್, ರಂಗೋಜಿರಾವ್, ದೊಡ್ಡಮನೆ ನಾರಾಯಣಪ್ಪ, ಸೋಮಶೇಖರ್, ಆರ್.ಸತೀಶ್, ರಾಮನಾಥರಾವ್ ಬರ್ಗೆ, ಪುಟ್ಟಲಿಂಗಯ್ಯ, ಕರಿಬಸವ, ರಮೇಶ್ ಸಿದ್ದಾಪುರ, ಕಮಲಶೇಖರ್, ರಾಜಣ್ಣ, ವಸಂತ ಮುಂತಾದವರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Bangalore Television Centre ಕಲಾತ್ಮಕ ಧಾರಾವಾಹಿ ನಿರ್ಮಾಣ & ಫೋಕ್ ರಿಯಾಲಿಟಿ ಶೋ ನಲ್ಲಿ ಭಾಗವಹಿಸಲು ಅರ್ಜಿ ಆಹ್ವಾನ

Bangalore Television Centre ಬೆಂಗಳೂರು ದೂರದರ್ಶನ ಕೇಂದ್ರವು ನಿರ್ಮಿಸಲಿರುವ ಕಲಾತ್ಮಕ ಧಾರಾವಾಹಿಯನ್ನು...

ಭಗವದ್ಗೀತೆ ಪಠ್ಯದಲ್ಲಿ ಅಳವಡಿಸಲು ಸಚಿವ ಕುಮಾರಣ್ಣ ಬರೆದ ಪತ್ರಕ್ಕೆ ಅಶೋಕ ಜಿ.ಭಟ್ ಕೃತಜ್ಞತೆ

ಶಿವಮೊಗ್ಗದಲ್ಲಿ ಇತ್ತೀಚೆಗೆ ಭಗವದ್ಗೀತಾ ಅಭಿಯಾನವು ಅತ್ಯಂತ ಯಶಸ್ವಿಯಾಗಿ ನೆರವೇರಿತು.ರಾಜ್ಯಮಟ್ಟದ ಬೃಹತ್ಸಮಾರಂಭದಲ್ಲಿ ವಿವಿಧ...

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...