Amit Shah ಪೌರತ್ವ ತಿದ್ದುಪಡಿ
ಕಾಯ್ದೆಯನ್ನು
ಯಾವುದೇ
ಕಾರಣಕ್ಕೂ ವಾಪಸ್
ಪಡೆಯುವುದಿಲ್ಲ
ಎಂದು ಕೇಂದ್ರ ಗೃಹ
ಸಚಿವ ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ.
ಸಿಎಎ ಸಂವಿಧಾನ ನಿಬಂಧನೆಗಳನ್ನು
ಉಲ್ಲಂಘಿಸುವುದಿಲ್ಲ. ಇದು ದೇಶದಲ್ಲಿ
ಭಾರತೀಯ ಪೌರತ್ವವನ್ನು ಖಾತ್ರಿಪಡಿಸಿ
ಕೊಳ್ಳಲು ಇರುವ ಸಾರ್ವಭೌಮ ಹಕ್ಕಾಗಿದೆ.
ಕಾಯಿದೆ ವಿಚಾರದಲ್ಲಿ ರಾಜಿ ಪ್ರಶ್ನೆಯೇ
ಇಲ್ಲ, ಅದನ್ನು ಹಿಂಪಡೆಯುವುದಿಲ್ಲ.’
ಎಂದು ಹೇಳಿದ್ದಾರೆ.
ಇದೇ ವೇಳೆ ಕಾಯ್ದೆ ಜಾರಿಗೊಳಿಸು
ವುದಿಲ್ಲ ಎಂದು ಹೇಳಿರುವ ಹಲವು ರಾಜ್ಯ
ಗಳಿಗೆ ತಿರುಗೇಟು ನೀಡಿರುವ ಅವರು,ಪೌರತ್ವಕ್ಕೆ ಸಂಬಂಧಿಸಿದ ಕಾನೂನುಗಳನ್ನು
ಜಾರಿಗೊಳಿಸಲು ಕೇಂದ್ರ ಸರಕಾರಕ್ಕೆ ಮಾತ್ರ
ಅಧಿಕಾರವಿದೆ,ಎಂದು ಪ್ರತಿಪಾದಿಸಿದ್ದಾರೆ.
Amit Shah ಸುದ್ದಿಸಂಸ್ಥೆಯೊಂದಕ್ಕೆ
ನೀಡಿದ
ಸಂದರ್ಶನದಲ್ಲಿ ಗೃಹ ಸಚಿವರು, ಕಾಯಿದೆ
ಅಸಂವಿಧಾನಿಕ ಎಂದು ಟೀಕಿಸುತ್ತಿರುವ ಪ್ರತಿ
ಪಕ್ಷಗಳ ನಾಯಕರ ವಿರುದ್ಧ
ಹರಿಹಾಯ್ದಿದ್ದಾರೆ.