Friday, November 22, 2024
Friday, November 22, 2024

KLive Special Article ಪ್ರಹ್ಲಾದವ್ಯಾಸ ಮುನೀಂದ್ರ ಶ್ರೀರಾಘವೇಂದ್ರ

Date:

ಲೇ: ಎನ್.ಜಯಭೀಮ ಜೊಯಿಸ್.
ಶಿವಮೊಗ್ಗ.

KLive Special Article ಚತುರ್ಮುಖ ಬ್ರಹ್ಮದೇವರ ಶಾಪದಂತೆ ಶಂಕುಕರ್ಣನು
ಅಸುರರಾಜನಾದ ಹಿರಣ್ಯಕಶಿಪು ಮತ್ತು ಕಯಾದುವಿನ
ಮಗ ಪ್ರಹ್ಲಾದರಾಜರಾಗಿ ಜನ್ಮ ತಾಳುತ್ತಾರೆ.

ದೈತ್ಯ ಸಾಮ್ರಾಟನಾದ ಹಿರಣ್ಯಕಶಿಪು ಬ್ರಹ್ಮದೇವರನ್ನು ಕುರಿತು ಕಠಿಣ ತಪಸ್ಸನ್ನು ಮಾಡಲು ಮಂದರಾಚಲಕ್ಕೆ ತೆರಳುತ್ತಾನೆ.
ಅವನು ತಪಸ್ಸಿಗೆ ಹೋದಾಗಲೂ ಶ್ರೀಹರಿಯ ಪರಮ ದ್ವೇಷಿಯಾದ ಅವನಿಗೆ ಅಲ್ಲಿ ಕಲವಂಕ(ಗುಬ್ಬಿ)ಪಕ್ಷಿಗಳು
“ಓಂ ನಮೋ ನಾರಾಯಣಾಯ”ಎಂದು ಹರಿನಾಮಸ್ಮರ
ಣೆ ಮಾಡಿದವು.ಕೋಪಬಂದ ಹಿರಣ್ಯಕಶಿಪುವು ಅವನೂ
ಮೆಲ್ಲಗೆ ನಾರಾಯಣ ಎನ್ನುತ್ತಿರುವಾಗ ಅವನ ಮನಸ್ಸು
ಅವನಿಗರಿವಿಲ್ಲದಂತೆಯೇ ಪ್ರಶಾಂತವಾಗಿತ್ತು.ಇದೇ ಸಮಯವನ್ನು ನಿರೀಕ್ಷಿಸುತ್ತಿದ್ದ ಶಂಕುಕರ್ಣನು ಅವನ ದೇಹದಲ್ಲಿ ಸೇರಿಬಿಡುತ್ತಾನೆ.

ಹಿರಣ್ಯಕಶ್ಯಪ ತನ್ನ ದ್ವೇಷಿಯಾದ ಹರಿಯ ಹೆಸರನ್ನು ಕೇಳಿ ತಪಸ್ಸುಮಾಡಲು ವಿಘ್ನವಾಯಿತು ಎಂದು ವಾಪಸ್ ಅರಮನೆಗೆ ಹಿಂದಿರುಗಿ ಬಿಡುತ್ತಾನೆ.ಕಯಾದು
ತಪಸ್ಸು ಮಾಡದೇ ವಾಪಾಸ್ ಬಂದವನನ್ನು ಉಪಚರಿಸಿ
ಸೇವಾ ಮಾಡುತ್ತಾಳೆ.

ಇವನು ತಪಸ್ಸು ಮಾಡದೇ ವಾಪಸ್ ಬಂದ ಕಾರಣವನ್ನು
ಹೇಳುತ್ತಾನೆ.ತಾನು ತಪಸ್ಸಿಗೆ ಕೂಡುತ್ತಿದ್ದಂತೆಯೇ ಎರಡು ಗುಬ್ಬಿ ಪಕ್ಷಿಗಳು “ಓಂನಮೋನಾರಾಯಣಾಯ”ಎಂದು
ಮೂರುಬಾರಿ ಉಚ್ಚರಿಸಿ ಹಾರಿಹೋದವು,ನನ್ನ ಶತೃವಾದ ಹರಿಯನಾಮವನ್ನು ಕೇಳಿದ್ದರಿಂದ ಅಪಶಕುನವೆಂದು ಭಾವಿಸಿ ನಾನು ಮರಳಿ ಅರಮನೆಗೆ
ಬಂದೆನು ಎಂದು ಕಯಾದುಬಳಿ ತಿಳಿಸುತ್ತಾನೆ.

ಅರಮನೆಗೆ ಮರಳಿದ ಪತಿದೇವನನ್ನು ಕಂಡ ಕಯಾದುವಿಗೆ ಬಹಳ ಸಂತೋಷವಾಗುತ್ತದೆ.
ಮತ್ತೆ ಕೆಲವು ಕಾಲ ಮುಗಿದ ಮೇಲೆ ಹಿರಣ್ಯಕಶಿಪು ವರವನ್ನು ಪಡೆಯಲು ಗರ್ಭಿಣಿಯಾದ ಕಯಾದುವನ್ನು
ಬಿಟ್ಟು ಮಂದರಾಚಲಕ್ಕೆ ಹೋಗುತ್ತಾನೆ.
ಹಿರಣ್ಯಕಶಿಪು ತಪಸ್ಸಿಗೆಂತ ಹೊರಟ ಕೂಡಲೇ ಇಂದ್ರನು
ದೇವತೆಗಳಿಂದೊಡಗೂಡಿ ದೈತ್ಯರಾಜ್ಯವನ್ನು ಆಕ್ರಮಿಸಿ ,ದೈತ್ಯರನ್ನು ಅಲ್ಲಿಂದ ಓಡಿಸಿ ಹಿರಣ್ಯಕಶಿಪುವಿನ ರಾಣಿ ಕಯಾದು ಗರ್ಭಿಣಿಯಾಗಿರುವುದನ್ನು ತಿಳಿದು ಶತೃಶೇಷವನ್ನು ಉಳಿಸಬಾರದೆಂದು ಕಯಾದುವಿನ ಗರ್ಭವನ್ನು ನಾಶಪಡಿಸಲಿಚ್ಛಿಸಿ ,ಕಯಾದುವನ್ನು ಸೆರೆಹಿಡಿದು ಕರೆದು
ಕೊಂಡು ಹೋಗುತ್ತಾನೆ.ಅದೇ ವೇಳೆಗೆ ದೈವಯೋಗದಿಂದ ನಾರದರು ಭಗವನ್ನಾಮ ಸಂಕೀರ್ತನೆ ಮಾಡುತ್ತಾ ಅಲ್ಲಿಗೆ ಬರುತ್ತಾರೆ.ಇಂದ್ರನು ಕಯಾದುವನ್ನು
ಸೆರೆ ಹಿಡಿದಿರುವುದನ್ನು ತಿಳಿದ ನಾರದಮಹರ್ಷಿಗಳು
ಇಂದ್ರನಿಗೆ ಬುದ್ಧಿಹೇಳಿ ಕಯಾದುವಿನ ಗರ್ಭದಲ್ಲಿ ವಾಯ್ವಾವೇಶಯುಕ್ತನಾದ ,ಮಹಾಭಾಗವತೋತ್ತಮನಿರುವುದರಿಂದ ಅವನನ್ನು ಸಂಹರಿಸಲು ಯಾರೂ ಸಮರ್ಥರಲ್ಲ.ಆ ಶ್ರೀಹರಿ ಭಕ್ತನಿಂದಲೇ ದೇವತೆಗಳ ಮತ್ತು ಸಮಸ್ತ ಜಗತ್ತಿನ ಕಲ್ಯಾಣವಾಗುವುದು ಎಂದು ಮುಂತಾಗಿ ಉಪದೇಶಿಸಿ ಕಯಾದುವಿನ ಗರ್ಭವನ್ನು ರಕ್ಷಿಸಿದರು.

ದೇವೇಂದ್ರನು ಜ್ಞಾನದೃಷ್ಟಿಯಿಂದ ನಾರದಮುನಿಗಳ
ಮಾತಿನ ಸತ್ಯತೆಯನ್ನರಿತು ಕಯಾದುವಿನ ಗರ್ಭದಲ್ಲಿರುವ ಉದರಸ್ಥ ವಾಯುದೇವರಿಗೆ ನಮಿಸಿ
ಹೋಗುತ್ತಾನೆ.
ಕಯಾದುವು ಸಂತೋಷದಿಂದ ನಾರದಮಹರ್ಷಿಗಳಿಗೆ
“ಸ್ವಾಮೀ,ಕರುಣಾಳುಗಳಾದ ನೀವು ಸಕಾಲದಲ್ಲಿ ಬಂದು
ನನ್ನನ್ನೂ ,ನನ್ನ ಗರ್ಭದಲ್ಲಿರುವ ಮಗುವನ್ನು ಕಾಪಾಡಿದಿರಿ.,ನಿಮಗೆನನ್ನಅನಂತನಮಸ್ಕಾರಗಳು”ಎಂದು ತನ್ನ ಗೌರವವನ್ನು ವ್ಯಕ್ತ ಪಡಿಸಿದಳು.ನಾರದರು ಪುತ್ರಿ ನಿನ್ನ ವಿಪತ್ತು ದೂರಾಯಿತು.ಚಿಂತಿಸಬೇಡ “ನಿನ್ನ ಪತಿಯು ತಪಸ್ಸಿನಿಂದ ಹಿಂದಿರುಗುವವರೆಗೂ ನೀನು ನನ್ನ ಆಶ್ರಮದಲ್ಲಿ ಶಾಂತತೆಯಿಂದ,ಭಗವತ್ ಚಿಂತನೆಯನ್ನು ಮಾಡುತ್ತಾಇರಮ್ಮ”ಎಂದು ಹೇಳಿ ಅವಳನ್ನು ತಮ್ಮ ಆಶ್ರಮಕ್ಕೆ ಕರೆದೊಯ್ದರು.
ನಾರದ ಮಹರ್ಷಿಗಳ ಆಶ್ರಮದಲ್ಲಿಕಯಾದುದೇವಿಯು ಬಹಳಸಂತೋಷದಿಂದಕಾಲಾಯಾಪನೆಮಾಡತೊಡಗಿದಳು.ಆಶ್ರಮದಲ್ಲಿ ಋಷಿಪತ್ನಿಯರ ಸಹವಾಸದಲ್ಲಿ ಅವಳ ಮನಸ್ಸು ಅರಮನೆಯ ಭೋಗಾದಿಗಳನ್ನು ತೊರೆದು ಆಶ್ರಮದಲ್ಲಿನಜೀವನದಲ್ಲಿಸಂತೋಷಕಾಣತೊಡಗಿದಳು.ಋಷಿಪತ್ನಿಯರುಬೇಡಬೇಡವೆಂದರೂನಾರದರಆಹ್ನಿಕ-ಪೂಜಾದಿಗಳಿಗೆಬೇಕಾದ ಸಮಸ್ತ ಸಾಮಗ್ರಿಗಳನ್ನೂ ಅಣಿಮಾಡಿಡುತ್ತಿದ್ದಳು.ಸ್ವಲ್ಪವೂ ಬೇಸರವಿಲ್ಲದೆ ಶ್ರೀಹರಿಯ ಸೇವೆಯಲ್ಲಿ ಭಾಗಿಯಾಗಿ ಪುಣ್ಯಸಂಪಾದನೆ
ಮಾಡಿಕೊಳ್ಳತೊಡಗಿದಳು.ಕಯಾದುವಿನನಿರ್ಮಲವಾದ ಮನಸ್ಸು ಶ್ರದ್ಧಾ ಭಕ್ತಿ ಸೇವೆಗಳನ್ನುಕಂಡುಸ್ವಯಂನಾರದ ಮಹರ್ಷಿಗಳು ಮುಗ್ಧರಾಗುತ್ತಿದ್ದರು.ಹೀಗೆ ಕಯಾದುವು ನಾರದರ ಆಶ್ರಮದಲ್ಲಿಸದಾಚಾರಸದ್ಭಾವನಾಭರಿತಳಾಗಿ ಕಾಲಕಳೆಯುತ್ತಿದ್ದಳು.ಬ್ರಹ್ಮದೇವರು ಘೋರವಾದ ತಪಸ್ಸನ್ನು ಮಾಡುತ್ತಿದ್ದ ಹಿರಣ್ಯಕಶಿಪುವಿಗೆ ವರವನ್ನು ಕೊಡಲು ಮಂದರಪರ್ವತಕ್ಕೆ ಬರುತ್ತಾನೆ.
ಹಿರಣ್ಯಕಶಿಪುವಿನ ತಪಸ್ಸು ಎಷ್ಟು ಘೋರವಾಗಿತ್ತೆಂದರೆ
ಅವನಶರೀರವೆಲ್ಲಾಬಿದಿರುಹುಲ್ಲುಗಳಿಂದಮುಚ್ಚಿಹೋಗಿ ,ದೇಹದ ಸುತ್ತಲೂ ಹುತ್ತ ಬೆಳೆದು ಇರುವೆಹುಳಗಳಿಂದ ತುಂಬಿಅಸ್ತಿಚರ್ಮಮಾತ್ರಉಳಿದಿರುವಹಿರಣ್ಯಕಶಿಪುವಿನ ಜೀರ್ಣ ದೇಹವನ್ನು ಕಂಡುತಮ್ಮಕಮಂಡಲೋದಕದಿಂದ ಪ್ರೋಕ್ಷಿಸುತ್ತಾರೆ.ಕೂಡಲೇಕಟ್ಟಿಗೆಯಿಂದಹೊರಹೊಮ್ಮುವ ಪ್ರಕಾಶಮಾನವಾದಅಗ್ನಿಯಂತೆ,ಸರ್ವಾಂಗ ಸುಂದರನಾದ ತಾರುಣ್ಯರೂಪದಿಂದ ಕಂಗೊಳಿಸುತ್ತಾ ಹಿರಣ್ಯಕಶಿಪುವಿನಮೈಮೇಲಿದ್ದ ಹುತ್ತವೆಲ್ಲ ಕರಗಿ ಹೊರಬರತ್ತಾನೆ.
ಆಗ ಬ್ರಹ್ಮದೇವರು” ವತ್ಸ! ಏಳು ,ನಿನ್ನ ಘೋರವಾದ ತಪಸ್ಸಿಗೆ ಮೆಚ್ಚಿದ್ದೇನೆ ,ನಿನಗಿಷ್ಟವಾದ ವರವನ್ನು ಕೇಳು,
ದಾನವರಾಜ “ಎಂದು ಹೇಳುತ್ತಾರೆ.
ಸರ್ವಲೋಕ ಪಿತಾಮಹನೂ ,ತನ್ನಿಷ್ಟ ದೇವನೂ ಆದ
ಹಂಸದಮೇಲೆಕುಳಿತು,ನಗುಮೊಗದಿಂದಸುಪ್ರಸನ್ನನಾದ ಬ್ರಹ್ಮದೇವನು ತನಗೆ ದರ್ಶನವನ್ನುಕರುಣಿಸಿದ್ದನ್ನು ಕಂಡು ಹರ್ಷ ಪುಲಕಿತನಾಗಿ ದೇವರಿಗೆಸಾಷ್ಟಾಂಗ ನಮನ ಗೈದು ಕರಜೋಡಿಸಿ ನಿಂತು ಆನಂದ ಭಾಷ್ಪ ಸುರಿಸಿದವನಾಗಿ ವಿನಯಪೂರ್ವಕವಾಗಿ ಸ್ತೋತ್ರ
ಮಾಡುತ್ತಾನೆ.
ದೇವ ನನ್ನ ತಪಸ್ಸಿಗೆ ಮೆಚ್ಚಿ ವರ ಕೊಡುವಂತಿದ್ದರೆ ಇಂಥ ವರವನ್ನು ಕೊಡು ಎಂದು ಪ್ರಾರ್ಥಿಸುತ್ತಾನೆ.
“ನೀನು ಸೃಷ್ಟಿಸಿದ ಯಾವ ಪ್ರಾಣಿಯಿಂದಲೂ ನನಗೆ ಮರಣ ಬರಬಾರದು!ಒಳಗೆ-ಹೊರಗೆ-ಹಗಲು-ರಾತ್ರಿ
ದೇಹಾವಯವ,ಭಿನ್ನವಾದ ಖಡ್ಗಾದಿ ಆಯುಧಗಳಿಂದ
,ಭೂಮಿಯಲ್ಲಿ ,ಅಂತರಿಕ್ಷದಲ್ಲಿ,ಮನುಷ್ಯರಿಂದ ,ಮೃಗಗಳಿಂದಜೀವಂತಇಲ್ಲವೇಮೃತಪ್ರಾಣಿಗಳಿಂದ,ಸುರ-ಅಸುರ-ನಾಗಇವುಯಾವುದರಿಂದಲೂನನಗೆಮರಣವಾಗಬಾರದು.ಯುದ್ಧದಲ್ಲಿಯಾರೂನನ್ನನ್ನುಪ್ರತಿಸ್ಪರ್ಧಿಸಬಾರದು.ದೇಹವುಳ್ಳವರಲ್ಲಿ ಏಕಾಧಿಪತ್ಯವುನನಗಿರಬೇಕು !(ಸ್ವಾಮಿ ,ನಿನ್ನ ಮಹಿಮೆಯು ಹೇಗೆನಶಿಸುವುದಿಲ್ಲವೋ ಹಾಗೆಯೇ ಯಾವ ಕಾರಣದಿಂದಲೂನನ್ನಮಹಿಮೆಯೂ ನಶಿಸಬಾರದಂತೆವರವನ್ನು ಕೊಡು-ಹೀಗೆ ಪ್ರಾರ್ಥಿಸಿದ್ದು ಅವನು ಬ್ರಹ್ಮಪದವಿಯೂತನಗೆದೊರಕಬೇಕೆಂಬುದನ್ನು ಸೂಚಿಸುವುದು)ಎಂದು ವರವನ್ನು ಬೇಡಿದನು.
ಮನುಷ್ಯರಿಗೆ ಅತ್ಯಂತ ದುರ್ಲಭವಾದ ಈ ರೀತಿ ವರವನ್ನು ಬೇಡಿದರೂ ಶ್ರೀಹರಿಯ ಸಂಕಲ್ಪದಂತೆ ಬ್ರಹ್ಮ
ದೇವರು ಶ್ರೀಹರಿಯ ಪ್ರೇರಣೆಯಂತೆ ಇಂತಹ ಮಹತ್ತರವಾದ ವರವನ್ನು ಅನುಗ್ರಹಿಸಿ ತಮ್ಮ ಲೋಕಕ್ಕೆ
ಹಿಂದಿರುಗಿದರು.
ನಾರದರ ಆಶ್ರಮದಲ್ಲಿ ಒಂದು ಏಕಾದಶಿಯ ದಿನ ಬೆಳಗಿನಿಂದಲೂ ಭಗವಧ್ಯಾನ,ಪೂಜಾದಿಗಳಲ್ಲಿ ನಿರತಳಾಗಿದ್ದಾಳೆ.ರಾತ್ರಿಯಾಯಿತು ಏಕಾದಶಿ ಪ್ರಯುಕ್ತ ಜಾಗರಣೆ ಸೇವೆ ಪ್ರಾರಂಭವಾಗಿದೆ.ನಾರದ ಮಹರ್ಷಿಗಳು ಕೃಷ್ಣಾಜಿನದ ಮೇಲೆ ಕುಳಿತಿದ್ದಾರೆ.
ಆಗ ಕಯಾದುವು ನಾರದ ಮುನಿಗಳಿಗೆ “,ಸ್ವಾಮಿ,ನೀವು ದಯಮಾಡಿ ನನಗೆ ಶ್ರೀಹರಿಯ ಮಹಿಮಾದಿಗಳನ್ನು
ತಿಳಿಸಿ ಅನುಗ್ರಹಿಸಿರಿ ಎಂದು ಪ್ರಾರ್ಥಿಸುತ್ತಾಳೆ.ಆಗ ನಾರದರು.”ದೇವಿ,ಸಚ್ಚಿದಾನಂದವಿಗ್ರಹನಾದ ಶ್ರೀಹರಿಯನ್ನು ಭಕ್ತಿಯಿಂದ ಆರಾಧಿಸು.ಅದರಿಂದ ಸಂತುಷ್ಟನಾದನಾರಾಯಣನುಮೋಕ್ಷವನ್ನೇಕರುಣಿಸುವನು,ಶ್ರೀಹರಿಭಕ್ತರನ್ನುಯಾವಶತೃಗಳೂ,ದುಷ್ಟಶಕ್ತಿಗಳೂ,ರಾಕ್ಷಸರೂ ಹಿಂಸಿಸುವುದಿಲ್ಲ.ಮಗಳೇ !ಕರಚರಣ ಮುಂತಾದಅವಯವಗಳು ,ಕಣ್ಣು,ಕಿವಿ,ನಾಲಿಗೆ,ಮನಸ್ಸು,ಶರೀರಮುಂತಾದಸಂಪತ್ತೆಲ್ಲವನ್ನೂಶ್ರೀಮನ್ನಾರಾಯಣನ ಪೂಜೆಗೆಅರ್ಪಿಸಿ ,ನವವಿಧಭಕ್ತಿಯಿಂದಭಗವಂತನನ್ನು
ಸೇವಿಸಬೇಕು.ಶರೀರವುನಶ್ವರವಾದುದು.ಅದುಯಾವಾಗ ನಾಶವಾಗುವುದೆಂದು ಹೇಳಲಿಕ್ಕಾಗುವುದಿಲ್ಲ.
ತಾಯಿಯ ಉದರದಿಂದ ಹೊರಬರುವಾಗಲೇ ಮೃತ್ಯುವು ಜೀವನ ಬೆನ್ನು ಹತ್ತಿ ಬರುವುದು.ಆದ್ದರಿಂದ ಅಹಂಕಾರ-ಮಮಕಾರಗಳನ್ನು ಬಿಟ್ಟು ,ವ್ಯರ್ಥವಾಗಿ
ಕಾಲಕಳೆಯದೆ ಶ್ರೀಹರಿಯನ್ನುಭಕ್ತಿಯಿಂದಪೂಜಿಸಬೇಕು
.ಇಷ್ಟೆಲ್ಲಾ ನಾರದರು ಕಯಾದುವಿಗೆ ತಿಳಿಸಿಹೇಳುತ್ತಿದ್ದಂತೆ ಕಯಾದುವು ಅವಳಿಗೆ ಅರಿವಿಲ್ಲದಂತೆಯೇ ನಿದ್ರೆಗೆ ಜಾರಿದ್ದಾಳೆ.ನಾರದಮಹರ್ಷಿಗಳಿಗೆಏಕಾದಶಿಯಂದೇಕೋ ಬಹಳ ಉತ್ಸಾಹದಿಂದ ಮೈಮರೆತು ಶ್ರೀಹರಿಯ ಚರಿತ್ರೆಯನ್ನು ಹೇಳುತ್ತಿದ್ದರು.
ನಾರದ ಮುನಿಗಳು ಸಕಲ ವೇದಾದಿ ಶಾಸ್ತ್ರಗಳಿಂದ ಪ್ರತಿ
ಪಾದ್ಯನಾದ ಶ್ರೀರಮಾರಮಣನ ಸತ್ತತ್ವ ರಹಸ್ಯಗಳನ್ನೂ
ಭಗವದುಪಾಸನಾಕ್ರಮಗಳನ್ನೂ ,ಭಕ್ತಿಯವೈವಿಧ್ಯ,ವೈಶಿಷ್ಟ್ಯಾದಿಗಳನ್ನೂಉಪದೇಶಿಸಲಾರಂಭಿಸಿದರು.
ಆ ಪ್ರಶಾಂತವಾಗಿದ ಪರಿಸರದಲ್ಲಿ “ಹೂಂ ಹೂಂ”ಎಂಬ
ಧ್ವನಿ ಕೇಳಿ ಬರುತ್ತಿದೆ!ವಿಸ್ಮಯದಿಂದ ನಾರದರು ಕಯಾದುವನ್ನುನೋಡಿದರು.ಅವಳುನಿದ್ರಾಸಕ್ತಳಾಗಿದ್ದಾಳೆ.ಸುತ್ತಲೂನೋಡಿದರೆಯಾರೂಇಲ್ಲ,ಇದೇನಾಶ್ಚರ್ಯ,ಇದುಯಾರ ಧ್ವನಿ?ಯಾವಕಡೆಯಿಂದಬರುತ್ತಿದೆಯೆಂದು ನೋಡಿದರು.
ಪರಮಾಶ್ಚರ್ಯ,ಕಯಾದುರಾಣಿಯ ಉದರದಿಂದ ಈ
ಧ್ವನಿ ಕೇಳಿಬರುತ್ತಿದೆ.ಆಗ ನಾರದರಿಗಾದ ಆನಂದ ಆಶ್ಚರ್ಯ ಅವರ್ಣನೀಯ.ಪರಮಾನಂದಭರಿತರಾದರು ನಾರದರು,ಕಂಠ ತುಂಬಿ ಬಂದಿತು.
ನಿತ್ಯ ನಾರದ ಮಹರ್ಷಿಗಳು ಪ್ರತಿ ನಿತ್ಯವೂ ಕಯಾದು
ದೇವಿಗೆ ಉಪದೇಶ ಮಾಡುವ ನೆಪದಿಂದ ಸಕಲ ವೇದಶಾಸ್ತ್ರಾರ್ಥಸಾರ,ಭಾಗವತಧರ್ಮ,ಭಗವದ್ಭಕ್ತಿ,ಶ್ರೀಹರಿಯ ಮಹಿಮಾತಿಶಯಗಳನ್ನು ಕಯಾದುದೇವಿಗೂ
ಅವಳ ಗರ್ಭಸ್ತ ಶಿಶುವಿಗೂ ಉಪದೇಶಿಸಿದರು.
ಒಂದು ದಿನ ನಾರದರು ಸಂತೋಷದಿಂದ ಕಯಾದುವಿಗೆ
ಪರಮಾತ್ಮನ ಮಹಿಮೆಗಳನ್ನು ಹೇಳುತ್ತಿರುವಾಗ ಕಯಾದುವು ನಾರದರಿಗೆ ಕೈ ಮುಗಿದು”ಸ್ವಾಮಿ,ತಾವು
ನನಗೊಂದು ವರವನ್ನು ಕೊಡಬೇಕು”ಎಂದು ಪ್ರಾರ್ಥಿಸಿದಳು.ನಾರದರು ಪ್ರಸನ್ನವದರಾಗಿ “ನಿನಗೇನು
ವರಬೇಕು ಕೇಳಮ್ಮ “ಎಂದು ಕೇಳಿದರು.
ಕಯಾದುವು ನಮ್ರಳಾಗಿ “ಮುನಿವರ್ಯ!ನನ್ನ ಪತಿದೇವರು ತಪಸ್ಸು ಮುಗಿಸಿಕೊಂಡು ಬಂದು ನನ್ನನ್ನು
ರಾಜಧಾನಿಗೆ ಕರೆದುಕೊಂಡು ಹೋಗುವವರೆಗೂ,ನನಗೆ
ಪ್ರಸವವಾಗಬಾರದು!ನಾನು ತಮ್ಮಲ್ಲಿ ಇಚ್ಛಾಪ್ರಸವ ವರವನ್ನೂ ,ನನ್ನ ಉದರದಲ್ಲಿರುವ ಶಿಶುವಿಗೆ ಕ್ಷೇಮವನ್ನೂ ಬೇಡುವೆನು”ಎಂದು ಪ್ರಾರ್ಥಿಸಿದಳು.
ನಾರದ ಮಹರ್ಷಿಗಳು ಹರ್ಷದಿಂದ “ನೀನು ಸಾಧ್ವಿ!ಪತಿವ್ರತೆಯಾದ ಸ್ತ್ರೀಗೆ ಭೂಷಣವಾದ ವರವನ್ನೇ ಯಾಚಿ
ಸಿದ್ದೀಯ!ಹಾಗೇ ಆಗಲಿ,ನೀನು ಅಪೇಕ್ಷಿಸಿದಾಗಲೇ ನಿನಗೆ ಪ್ರಸವವಾಗಲಿ.ನಿನ್ನ ಹೊಟ್ಟೆಯಲ್ಲಿರುವ ಕುಮಾರನಿಗೆಯಾವಾಗಲೂಸನ್ಮಂಗಳ,ಕ್ಷೇಮವುಂಟಾಗುವುದು.ಇದು ನನ್ನ ಪ್ರಭುವಾದಶ್ರೀಹರಿಯಕಾರುಣ್ಯದಿಂದ ಸತ್ಯವಾಗಿನೆರವೇರುವುದು!ಚಿಂತಿಸಬೇಡಮ್ಮ” ಎಂದು ಹೇಳಿ ಕಯಾದುವಿಗೆ ವರಪ್ರದಾನ ಮಾಡಿದರು.
ತನ್ನಿಚ್ಛೆಯಂತೆ ಬ್ರಹ್ಮದೇವರಿಂದ ವರಪಡೆದ ಹಿರಣ್ಯಕಶಿಪು ಬಹಳ ಸಂತೋಷದಿಂದ ರಾಜಧಾನಿಗೆ
ಹಿಂದಿರುಗಿದನು.ರಾಜಧಾನಿಗೆ ಬಂದಮೇಲೆ ಹಿರಣ್ಯ
ಕಶಿಪುವಿಗೆ ತಾನು ತಪಸ್ಸಿಗೆ ಹೊರಟಾಗಿನಿಂದ ನಡೆದ
ಎಲ್ಲಾ ವಿಚಾರಗಳೂ ತಿಳಿಯುತ್ತವೆ.ದಾನವರಾಜನು
ದೇವರ್ಷಿ ನಾರದರ ಆಶ್ರಮಕ್ಕೆ ಬರುತ್ತಾನೆ.
ಹಿರಣ್ಯಕಶಿಪುವು ತಮ್ಮ ಆಶ್ರಮಕ್ಕೆ ಬಂದುದಕ್ಕೆ ಸಂತೋಷಗೊಂಡ ನಾರದರು ಅವನನ್ನು ಸ್ವಾಗತಿಸಿದರು.
ಹಿರಣ್ಯಕಶಿಪು ನಾರದರಿಗೆ ನಮಸ್ಕರಿಸಿ “ಮುನಿವರ್ಯ
ನಿಮ್ಮ ಉಪಕಾರ ಬಹಳವಾಯಿತು ನನ್ನ ಮೇಲೆ.ನನ್ನ
ಹಿತವನ್ನು ಬಯಸಿದವರು ನೀವು,ಪಿತಾಮಹನನ್ನು ಸಂತೋಷಪಡಿಸಿ ವರಪಡೆಯುವಂತೆ ಸಲಹೆನೀಡಿದಿರಿ.
ನಿಮ್ಮ ಸಲಹೆಯಂತೆ ನಾನು ತಪಸ್ಸುಮಾಡಿ ಬ್ರಹ್ಮದೇವರನ್ನು ಮೆಚ್ಚಿಸಿ ಅಸಾಧಾರಣವಾದ ವರವನ್ನು
ಪಡೆದಿರುತ್ತೇನೆ”ಎಂದು ಹೇಳುತ್ತಾನೆ.ಇನ್ನು ನಾನು ತಪಸ್ಸಿಗೆ ಹೋದಾಗ ನನ್ನಪತ್ನಿಯನ್ನು ಇಂದ್ರನಿಂದ ರಕ್ಷಿಸಿ
ದಿರಿ.ಮುಖ್ಯವಾಗಿ ಕಯಾದು ಹೊಟ್ಟೆಯಲ್ಲಿರುವ ಭಾವಿ ಯುವರಾಜನನ್ನು ಸಂರಕ್ಷಿಸಿ ನಮ್ಮ ಅಸುರವಂಶಕ್ಕೆ ಮಹೋಪಕಾರ ಮಾಡಿರುತ್ತೀರಿ.ಮತ್ತು ನಮ್ಮ ಪಟ್ಟದರಸಿಗೆ ಯಾವ ಆಪತ್ತೂ ಬರದಂತೆ ನಿಮ್ಮ ಆಶ್ರಮದಲ್ಲಿ ಆಶ್ರಯನೀಡಿ ಸಂರಕ್ಷಿಸಿರುವಿರಿ.ನಿಮ್ಮ
ಉಪಕಾರವನ್ನು ನಾನೆಂದಿಗೂ ಮರೆಯಲಾರೆ.ನೀವು ಅಪ್ಪಣೆ ಕೊಟ್ಟರೆ ನನ್ನಪತ್ನಿಯನ್ನು ರಾಜಧಾನಿಗೆ ಕರೆದು
ಕೊಂಡು ಹೋಗುತ್ತೇನೆ ಎಂದು ವಿಜ್ಞಾಪಿಸಿದನು.
ವಾರದ ಮಹರ್ಷಿಗಳು ಸಂತೋಷದಿಂದ ಕಯಾದುದೇವಿಯನ್ನು ಹಿರಣ್ಯಕಶಿಪುವಿನೊಟ್ಟಿಗೆ ಕಳಿಸಿ
ಕೊಡುತ್ತಾರೆ. ಅದೊಂದು ಶುಭದಿನ ದಾನವ ಪಟ್ಟದರಸಿ ಕಯಾದುದೇವಿ ಪರಮಮಂಗಳಕರನಾದ ಶ್ರೀವಾಯುದೇವರ ಆವೇಶಯುಕ್ತನೂ,ಶ್ರೀಹರಿಪಾದಾಬ್ಜ
ವನ್ನು ಆಶ್ರಯಿಸಿದವನೂ,ಕರ್ಮಜದೇವನೂ ಆದ ಸುಪುತ್ರನಿಗೆ ಜನ್ಮ ಕೊಡುತ್ತಾಳೆ.ಜ್ಞಾನ-ಭಕ್ತಿ-ವೈರಾಗ್ಯಗಳ ಸಾಕಾರನಾದ ಮಂಗಳಮೂರ್ತಿಯ ಜನನವಾಯಿತು.
ಸುರರು ಪುಷ್ಪವೃಷ್ಟಿಗೈದುದನ್ನೂ,ದೇವದುಂದುಭಿಗಳು
ಮೊಳಗಿದ್ದನ್ನೂ ಕಂಡು ಕೇಳಿದ ದೈತ್ಯ ಸಾಮ್ರಾಟನು
,ತನ್ನ ಭಯದಿಂದ ಭಾವಿ ದೈತ್ಯ ಸಾಮ್ರಾಟನ ಅವತಾರಕ್ಕೆ ದೇವತೆಗಳು ಆನಂದ ಸೂಚಿಸಿದರೆಂದೂ ಆನಂದಿಸಿ,ತನ್ನ
ಪರಾಕ್ರಮಕ್ಕೆ ಮೂರುಲೋಕವೂ ನಡುಗುವುದೆಂದು
ಜಂಭಪಟ್ಟನು.
ದೈತ್ಯರಾಜಧಾನಿಯಲ್ಲಂತೂ ಸಂಭ್ರಮವೋ ಸಂಭ್ರಮ
ರಾಜಧಾನಿಯವರೆಲ್ಲರೂ ಸಂಭ್ರಮೋತ್ವದಲ್ಲಿ ಭಾಗವಹಿಸಿದ್ದಾರೆ.ಮಂಗಳಸ್ನಾನವಾದಮೇಲೆ ಶುಕ್ರಾಚಾರ್ಯರನೇತೃತ್ವದಲ್ಲಿಜಾತಕರ್ಮ-ನಾಮಕರಣಾದಿಮಹೋತ್ಸವಗಳುವಿಜೃಂಭಣೆಯಿಂದನೆರವೇರಿದವು.ಅತ್ಯಂತಸುಂದರ,ಮನಮೋಹಕನೂಆದರಾಜಕುಮಾರನುಎಲ್ಲರಿಗೂಆನಂದವನ್ನುಕೊಡುವಂತಹವನಾಗಿದ್ದಾನೆ.
ಬಹುಶ:ಈ ಕಾರಣದಿಂದಲೇ ಏನೋ ದೈತ್ಯ ಗುರುಗಳು
ನಾಮಕರಣ ಕಾಲದಲ್ಲಿ ರಾಜಕುಮಾರನಿಗೆ “ಪ್ರಹ್ಲಾದ” ಎಬ ಹೆಸರನ್ನೇ ಆರಿಸಿದ್ದಾರೆ.ವಿಧ್ಯುಕ್ತವಾಗಿ ಹಿರಣ್ಯಕಶಿಪು
ಕುಮಾರನಿಗೆ “ಪ್ರಹ್ಲಾದರಾಜ” ಎಂದು ನಾಮಕರಣ
ಮಾಡುತ್ತಾರೆ.ಈ ಸಂತೋಷದ ಸಮಯದಲ್ಲಿ ರಾಜಧಾನಿಯಲ್ಲೆಲ್ಲಾ ಅನ್ನಾದಾನ,ವಸ್ತ್ರದಾನ, ನಡೆದವು
“ಶ್ರೀಪ್ರಹ್ಲಾದರಾಜರು”ಹುಟ್ಟಿದ ಸಂತೋಷಕ್ಕಾಗಿ ಸಾಮ್ರಾಜ್ಯದಲ್ಲೆಲ್ಲಾ ಹದಿನೈದು ದಿನ ಪರ್ಯಂತ ಸಂಭ್ರಮೋತ್ಸವವನ್ನು ಆಚರಿಸಲಾಯಿತು.
KLive Special Article ಹೀಗೆ ಶಂಕುಕರ್ಣರು ಪ್ರಹ್ಲಾದರಾಜರಾಗಿ ಹಿರಣ್ಯಕಶಿಪು
ಮತ್ತು ಕಯಾದುವಿನ ಮಗನಾಗಿ ಭೂಮಿಯಲ್ಲಿ ಅವತಾರಹೊಂದಿದರು.ಇದು ಶ್ರೀರಾಘವೇಂದ್ರ
ಗುರುಸಾರ್ವಭೌಮರ ಮೊದಲನೆಯ ಅವತಾರ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ “ರಾಜ್ಯೋತ್ಸವ ಕವಿಗೋಷ್ಠಿ”

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ...

Mohare Hanumantharaya Award ಪ್ರಶಸ್ತಿ ಪುರಸ್ಕೃತ ಪತ್ರಕರ್ತ, ‘ಕ್ರಾಂತಿ ದೀಪ ‘ಮಂಜುನಾಥ್ ಅವರಿಗೆ ಸನ್ಮಾನ

Mohare Hanumantharaya Award ಪತ್ರಿಕೋದ್ಯಮದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಮೊಹರೆ ಹಣಮಂತರಾಯ...

MESCOM ನವೆಂಬರ್ 23 .ಹೊಳಲೂರು ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಹೊಳಲೂರು ಗ್ರಾಮದ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ...

Rotary Club Shimoga ಪ್ರೌಢಾವಸ್ಥೆಯು ದೇಹದಲ್ಲಿ ಅನೇಕ ಬದಲಾವಣೆ ತರುತ್ತದೆ.ಅದನ್ನ ಗಮನಿಸಬೇಕು- ಡಾ.ಮೋಕ್ಷಾ

Rotary Club Shimoga ರೋಟರಿ ಸಂಸ್ಥೆಯು ನಿಸ್ವಾರ್ಥವಾಗಿ ವಿಶ್ವದ ಎಲ್ಲ ಭಾಗಗಳಲ್ಲಿ...