Election Bond ಚುನಾವಣಾ ಬಾಂಡ್ ಗಳ ವಿವಾದ ಈಗ ಕೇಂದ್ರ ಸರ್ಕಾರಕ್ಕೆ ಇಕ್ಕಟ್ಟಿಗೆ ಸಿಲುಕಿಸುವಂತೆ ಮಾಡಿದೆ.
ಈಗಾಗಲೇ ಮಾಧ್ಯಮಗಳಲ್ಲಿ ವರದಿಯಾಗಿರುವಂತೆ
ಚುನಾವಣಾ ಬಾಂಡ್ ಯೋಜನೆಯಲ್ಲಿ ₹16,518,10 ಕೋಟಿ
ಹಣ ಬಾಂಡ್ ಮೂಲಕ ಸಂಗ್ರಹವಾಗಿದೆ.
ಈ ಬಾಂಡ್ ಗಳೆಲ್ಲವೂ 2019ರ ಏಪ್ರಿಲ್ 12 ರಿಂದ ನಗದೀಕರಣಗೊಂಡ ಮೊತ್ತವಾಗಿದೆ.
ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲು ಚುನಾವಣಾ ಬಾಂಡ್ ರೂಪಗಳು ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ಈ ಫೆಬ್ರವರಿ 15 ರಂದು ತೀರ್ಪಿತ್ತಿದೆ.
ಬಾಂಡ್ ಸಂಗ್ರಹಿಸಿರುವ ಎಸ್ ಬಿ ಐ ಗೆ ಚುನಾವಣಾ ಆಯೋಗಕ್ಕೆ ವಿವರ ಸಲ್ಲಿಸಲು ಸುಪ್ರೀಂ ತಾಕೀತು ಮಾಡಿತ್ತು.
ಎಸ್ ಬಿಐ ಜೂನ್ 30 ರ ಗಡುವು ಕೇಳಿತ್ತು.
ಈ ಮನವಿಗೆ ಸುಪ್ರೀಂ ಸಮ್ಮತಿ ನೀಡದೇ ಮಾರ್ಚ್ 12 ರೊಳಗೆ ಚುನಾವಣಾ ಆಯೋಗಕ್ಕೆ ವಿವರ ಸಲ್ಲಿಸಲು ಸೂಚಿಸಿತ್ತು.
ಅಲ್ಲದೇ ಮಾರ್ಚ್ 15 ರಂದು ವೆಬ್ ಸೈಟ್ ನಲ್ಲಿ ಪ್ರಕಟಿಸಲೂ ಹೇಳಿದೆ.
ರಾಜಕೀಯ ಪಕ್ಷಗಳಾವುವೂ ಇದರ ಬಗ್ಗೆ ಚಕಾರವೆತ್ತಿಲ್ಲ. ಆದರೆ ಸುಪ್ರೀಂ ಕೋರ್ಟ್ ವಕೀಲರ ಸಂಘದ ಅಧ್ಯಕ್ಷರಾದ ಆದಿಶ್ ಅಗರವಾಲ್ ಅವರು ದೇಣಿಗೆ ನೀಡಿದವರ ಹೆಸರು ಬಹಿರಂಗಪಡಿಸದಿರಲು ರಾಷ್ಟ್ರಪತಿಗಳು ಮಧ್ಯೆ ಪ್ರವೇಶಿಸಿ ಸೂಚನೆ ನೀಡಬೇಕೆಂದು ಮನವಿ ಸಲ್ಲಿಸಿದ್ದಾರೆ.
Election Bond ವಿವಿಧ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದ ವ್ಯಕ್ತಿ, ಸಂಸ್ಥೆಗಳ ಹೆಸರು ಬಹಿರಂಗವಾದಲ್ಲಿ
ಮುಂದೆ ಬಲಿಪಶುಗಳಾಗಬಹುದು. ಕಿರುಕುಳ ಅನುಭವಿಸಬಹುದು.
ಇವೇ ಮುಂತಾಗಿ ವಿಚಾರಗಳನ್ನ ರಾಷ್ಟ್ರಪತಿಗಳಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ
. ಯಾವಯಾವ ಪಕ್ಷಗಳು ಬಾಂಡ್ ಪಡೆದಿವೆ? ಯಾರು ನೀಡಿದ್ದಾರೆ? ಎಷ್ಟು ನೀಡಿದ್ದಾರೆ? ಎಲ್ಲವೂ ತಿಳಿದಾಗ ರಾಜಕೀಯ ಕ್ಷೇತ್ರ ಹೇಗೆ ಸ್ಪಂದಿಸುತ್ತದೆ ಎಂಬುದನ್ನ ಕಾದು ನೋಡಬೇಕಿದೆ.
Date: