S N Channabasappa ಪ್ರಕೃತಿಗೆ ಗೌರವ ಮತ್ತು ಕ್ರತಜ್ಞತೆ ಸಲ್ಲಿಸುವ ಮೂಲಕ ನವ್ಯಶ್ರೀ ಈಶ್ವರ ವನ ಚಾರಿಟೇಬಲ್ ಟ್ರಸ್ಟಿನ ಶಿವರಾತ್ರಿ ಉತ್ಸವ-24 ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ನಿರ್ಮೂಲನೆ ಬಗ್ಗೆ ಕಿರುಚಿತ್ರ ಪ್ರದರ್ಶನ, ಸಾಮಾಜಿಕ ಸೇವಾ ಪ್ರಶಸ್ತಿ ಮತ್ತು ಜಲಪಾತ ಚಲನಚಿತ್ರ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಈ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿ ಶಾಸಕರಾದ ಎಸ್ ಎನ್ ಚನ್ನಬಸಪ್ಪ ಅವರು ಆಗಮಿಸಿ ಮಾತನಾಡಿದರು.
ನವ್ಯಶ್ರೀ ನಾಗೇಶ ರವರ ಪ್ರಕ್ರತಿ ಪ್ರೇಮ ಸಮಾಜಕ್ಕೆ ಅನುಕರಣೀಯ ಅವರು ಮಾಡುವ ಕೆಲಸ ಎಲ್ಲರೂ ಮಾಡಿದಲ್ಲಿ ಸಕಾಲದಲ್ಲಿ ಮಳೆ ಬೆಳೆಯಾಗಿ ಯಾವುದೇ ಸಮಸ್ಯೆ ಇರುವುದಿಲ್ಲ. ಉಚಿತವಾಗಿ ಬಟ್ಟೆಯ ಚೀಲವನ್ನು ನೀಡುವ ಮೂಲಕ ಪ್ಲೇಸ್ಟಿಕ್ ನಿರ್ಮೂಲನೆಗೆ ಪ್ರೇರೆಪಿಸುತ್ತಿರುವ ಶ್ರೀಮತಿ ಗೀತಾ ಪಂಡಿತ್ ಮತ್ತು ವ್ರಧ್ಧರ, ಮಾನಸಿಕ ಅಸ್ವಸ್ಥರ ಮತ್ತು ಅನಾಥರ ಸೇವೆ ಮಾಡುವ ಶಿವಮೊಗ್ಗದ ಗುಡ್ ಲಕ್ ಅರೈಕೆ ಕೇಂದ್ರ ವನ್ನು ಗುರುತಿಸಿ ಸನ್ಮಾನಿಸಿ ದೇಣಿಗೆ ನೀಡುವ ಇವತ್ತಿನ ಈ ಸಮಾರಂಭದಲ್ಲಿರುವುದು ನನ್ನ ಭಾಗ್ಯ ಎಂದು ಹೇಳಿದರು.
ಇನ್ನೋಬ್ಬ ಅತಿಥಿಗಳಾದ ಪರಿಷತ್ತ ಸದಸ್ಯರು ಡಿ.ಎಸ್.ಅರುಣ್ ಮಾತನಾಡಿ ನಾಗೇಶ್ ಕಳೆದ ಹಲವಾರು ವರ್ಷಗಳಿಂದ ಸದ್ದಿಲ್ಲದೆ ಸೇವೆ ಮಾಡುವ ಮೂಲಕ ಜನಾನುರಾಗಿಯಾಗಿದ್ದಾರೆ. ಇವರ ಸೇವೆ ದೇವರ ಸೇವೆಗಿಂತ ಶ್ರೇಷ್ಠ ಎಂದು ತಿಳಿಸಿದರು.
ಹಸಿದವರಿಗೆ ಅನ್ನ ದಾಸೋಹ ಯೋಜನೆಯ ಮೂಲಕ ಜನಪ್ರಿಯತೆಯ ಹೊಂದಿದ್ದಾರೆ. ಸರ್ಕಾರ ಮಾಡದೇ ಇರುವ ಕೆಲಸ ಮಾಡುತ್ತಿರುವ ಇವರು ಪ್ರತೀ ವರ್ಷ ಶಿವರಾತ್ರಿ ಹಬ್ಬದ ಪ್ರಯುಕ್ತ ಸಾಮಾಜಿಕ, ಪರಿಸರ ಸಂರಕ್ಷಣೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಉಳಿಸುವ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ .
ನಗರದ ಗುಡ್ ಲಕ್ ಅರೈಕೆ ಕೇಂದ್ರದವರು ಮಾಡುತ್ತಿರುವ ಕೆಲಸ, ಹಿರಿಯರ ಅನಾಥರ ಸೇವೆ ತುಂಬ ಒಳ್ಳೆಯ ಕೆಲಸ ಇದು ಶಿವಮೊಗ್ಗದ ಹೆಮ್ಮೆಯ ಸಂಸ್ಥೆ.ಹಾಗೆ ಪರಿಸರದ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಶ್ರೀಮತಿ ಗೀತಾ ಪಂಡಿತ್ ರವರ ಉಚಿತ ಬಟ್ಟೆಯ ಚೀಲ ಹೊಲಿದು ಕೊಡುವ ಸೇವೆ ಅನುಕರಣೀಯ.
S N Channabasappa ಈ ಸಮಾರಂಭದಲ್ಲಿ ವೇದಿಕೆಯಲ್ಲಿ ಜಲಪಾತ ಚಲನಚಿತ್ರ ನಿರ್ದೇಶಕರಾದ ಶ್ರೀ ರಮೇಶ ಬೇಗಾರ್ ಹಾಗೂ ಶ್ರೀ ರವೀಂದ್ರ ತುಂಬರಮನೆ,ನಿರ್ದೇಶಕ ಕಾಸರವಳ್ಳಿ,ರವೀಂದ್ರನಾಥ ಐತಾಳ,ಜಿ. ವಿಜಯಕುಮಾರ, ಶಿವಪ್ಪ ಗೌಡ ,ವಿ.ಎನ್.ಭಟ್ಟ ,ವಿನಯ ಮತ್ತು ಮಾಜಿ ಕೊರ್ಪರೇಟರ್ ವಿಶ್ವಾಸ ಉಪಸ್ಥಿತರಿದ್ದರು.