Saturday, December 6, 2025
Saturday, December 6, 2025

KLive Special Article ವಿಶೇಷ ವ್ಯಕ್ತಿ ಚಿತ್ರ:ಸಂಜೀವಿನಿ ಶಕ್ತಿಯ ಸೂಲಗಿತ್ತಿ ಶ್ರೀಮತಿ ಜಯಮ್ಮ ಜಿಂದಾಬಾದ್

Date:

KLive Special Article ಅದೆಷ್ಟೋ ಜನರ ಪಾಲಿಗೆ ಆಕೆ ಮಹಾತಾಯಿ. ಸಾವಿರಾರು ಪುಟ್ಟ ಕಂದಮ್ಮಗಳಿಗೆ ಕೈಯೊಡ್ಡಿದ ಮಹಾಮಾತೆ. ಹೌದು ಅವರೇ ನಮ್ಮ ರಿಪ್ಪನ್‌ಪೇಟೆ ಪಟ್ಟಣದ ಹೆಮ್ಮೆಯ ಸೂಲಗಿತ್ತಿ ಜಯಲಕ್ಷ್ಮಿ.

ಆಪತ್ಕಾಲದಲ್ಲಿ ಗರ್ಭಿಣಿ ಮಹಿಳೆಯರ ಸಹಾಯಕ್ಕೆ ಬರುವ ಈ ಸೂಲಗಿತ್ತಿಯ ಹೆಸರು ಜಯಲಕ್ಷ್ಮಿ,ಇವರು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸೂಲಗಿತ್ತಿ ಜಯಮ್ಮ ಅಂತಾನೇ ಫೇಮಸ್​. ಸರಿಯಾಗಿ ವಿದ್ಯುತ್​​, ರಸ್ತೆ, ಆಸ್ಪತ್ರೆ ಇಲ್ಲದ ಕಾಲದಲ್ಲಿ ಕಾಡು-ಮೇಡು ದಾಟಿ ಪ್ರಸವ ವೇದನೆ ನಿವಾರಿಸುತ್ತಿದ್ದ ಗಟ್ಟಿಗಿತ್ತಿ.

ಜಯಮ್ಮ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಪಟ್ಟಣದ ಹೊಸನಗರ ರಸ್ತೆಯ ಶ್ರೀರಾಮನಗರದ ನಿವಾಸಿ. ಬಡತನದಲ್ಲಿಯೇ ಅರಳಿದ ಪ್ರತಿಭೆ ಇವರು. ಸೂಲಗಿತ್ತಿಯ ಕಾಯಕ ಮಾಡುವುದರಲ್ಲಿ ನಿಸ್ಸೀಮರು

ಆ ಸಂಧರ್ಭದಲ್ಲಿ ವೈದ್ಯರನ್ನೇ ಕಾಣದ ಊರಿನಲ್ಲಿ ಜಯಮ್ಮ ಬರೋಬ್ಬರಿ ಅಂದಾಜು 15 ಸಾವಿರಕ್ಕೂ ಹೆಚ್ಚು ಹೆರಿಗೆ ಮಾಡಿಸಿ ಹಲವಾರು ಮನೆಯಲ್ಲಿ ದೀಪ ಬೆಳಗಿಸಿದ್ದಾರೆ.ಆದರೆ ಅನಕ್ಷರಸ್ತರಾಗಿದ್ದ ಇವರು ಅದನ್ನು ಲಿಖಿತ ರೂಪದಲ್ಲಿ ನೋಂದಣಿ ಮಾಡುವುದನ್ನು ಮರೆತು ಕೇವಲ ತಾಯಿ ಮತ್ತು ಮಗುವಿನ ಸಂರಕ್ಷಣೆ ಬಗ್ಗೆ ಚಿಂತನೆಯಲ್ಲಿದ್ದ ಇವರಿಗೆ ಸೇವೆಯೇ ಪ್ರಧಾನವಾಗಿತ್ತು.

ಎಷ್ಟೇ ಕಗ್ಗತ್ತಲು ಆವರಿಸಿರಲಿ, ಮಳೆ ಸುರಿಯುತ್ತಿರಲಿ, ಗರ್ಭಿಣಿಯ ನರಳಾಟ ಸುದ್ದಿ ಕೇಳಿದ್ರೆ ಸಾಕು ಅಲ್ಲಿ ಹಾಜರಾಗುತಿದ್ದರು. ಕತ್ತಲಾಗಿದ್ರು ಕೈಯಲ್ಲಿ ಬುಡ್ಡಿ ದೀಪದ ಲಾಟೀನು ಹಿಡಿದು ಪ್ರಸವ ಮಾಡಿಸುತಿದ್ದ ಸೂಲಗಿತ್ತಿ. ನಾಟಿ ವೈದ್ಯ, ಸಾಂತ್ವನದ ಮೂಲಕ ಸುಲಭವಾಗಿ ಹೆರಿಗೆ ಮಾಡಿಸಬಲ್ಲ ರಿಪ್ಪನ್‌ಪೇಟೆ ಸುತ್ತಮುತ್ತಲಿನ ಸಂಚಾರಿ ಆಸ್ಪತ್ರೆಯಂತೆ ಕೆಲಸ ಮಾಡುತಿದ್ದ ಸೂಲಗಿತ್ತಿ ಜಯಮ್ಮ.

KLive Special Article ಕೃಷಿ ಕಾರ್ಮಿಕರಾಗಿದ್ದ ಜಯಮ್ಮ, ತನ್ನ ಅಮ್ಮ ಸೂಲಗಿತ್ತಿ ಸುಬ್ಬಮ್ಮ ಅವರ ಪ್ರೇರಣೆಯಿಂದ ಸೂಲಗಿತ್ತಿಯಾದವರು. ತನ್ನ ಮೊದಲ ಹೆರಿಗೆ ಸಂಧರ್ಭದಲ್ಲಿ ಹೆರಿಗೆ ಬೇನೆಗೆ ಬಿಸಿ ನೀರಿಗೆ ಒಂದಷ್ಟು ಸೊಪ್ಪಿನ ಪುಡಿ ಬೆರೆಸಿ, ಕುಡಿಸಿ ನೋವಿಲ್ಲದಂತೆ ಕ್ಷಣಾರ್ಧದಲ್ಲಿ ಹೆರಿಗೆ ಮಾಡಿದ್ದ, ಸಾಂತ್ವನದ ಮಾತಿನ ಮೂಲಕ ತಾಯ್ತನದ ಹಾರೈಕೆ ಮಾಡಿದ ತಾಯಿ ಸುಬ್ಬಮ್ಮ ಅವರೇ ಜಯಮ್ಮ ಗೆ ಪ್ರೇರಣೆ. ಮಹಿಳೆಯರು ಹೆರಿಗೆ ಸಮಯದಲ್ಲಿ ನೋವು ಅನುಭವಿಸಬಾರದೆಂಬ ಆಶಯವನ್ನು ಹೊಂದಿದ ಜಯಮ್ಮ,ತಾಯಿಯ ಸೂಲಗಿತ್ತಿ ಕಾಯಕದ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಾ, ಅದೇ ಹಾದಿಯನ್ನು ಹಿಡಿದು ಯಾವುದೇ ಪ್ರತಿಪಲಾಕ್ಷೆ ಇಲ್ಲದೇ ಸುಮಾರು 40 ವರ್ಷಗಳಿಂದ ನಿರಂತರವಾಗಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.

ಜಯಮ್ಮ ರವರು ಮೊದಲು ತನ್ನ ಮನೆಯಲ್ಲಿ ಹೆರಿಗೆ ಮಾಡಿಸುತ್ತಾ,ನಂತರ ಪಟ್ಟಣದಲ್ಲಿ ಅದಾದ ಬಳಿಕ ಸುತ್ತಮುತ್ತಲಿನ ಗ್ರಾಮದಲ್ಲಿ ಎಂತಹ ಕಷ್ಟದ ಹೆರಿಗೆಯಾದರೂ ತನ್ನ ಅನುಭವದಿಂದ ಮಾಡಿಸುವ ಕಾಯಕ ಜಯಮ್ಮ ನವರದು. ಯಾವುದೇ ಪ್ರತಿಫಲಾಪೇಕ್ಷೆ ಬಯಸದೆ ಸುಮಾರು 40 ವರ್ಷದಿಂದ ಸುತ್ತಮುತ್ತಲ ಸುಮಾರು 40 ಗ್ರಾಮಗಳಲ್ಲಿ 15 ಸಾವಿರಕ್ಕೂ ಹೆಚ್ಚು ಹೆರಿಗೆಗಳನ್ನು ಶಸ್ತ್ರಚಿಕಿತ್ಸೆ ಇಲ್ಲದೆ ಮಾಡಿಸಿದ ಕೀರ್ತಿ ಈಕೆಗಿದೆ.ಇನ್ನೊಂದು ಖುಷಿಯ ವಿಚಾರ ಏನೆಂದರೇ ಸಾವಿರಾರು ಹೆರಿಗೆ ಮಾಡಿಸುವ ಪಯಣದಲ್ಲಿ ಒಂದೇ ಒಂದು ಸಾವು ನೋವು ಅನುಭವಿಸಿಲ್ಲ,

ಒಟ್ಟಾರೆ ನಿರ್ಲಕ್ಷ್ಯಕ್ಕೊಳಗಾಗಿದ್ದ ಸುತ್ತಮುತ್ತಲ ಗ್ರಾಮಗಳಲ್ಲಿ ನಿಸ್ವಾರ್ಥ, ಪ್ರತಿಫಲಾಪೇಕ್ಷೆ ಇಲ್ಲದೆ ಸಂಚಾರಿ ಆಸ್ಪತ್ರೆಯಾಗಿ, ವೈದ್ಯಳಾಗಿ ,ಮಹಿಳೆಯರು, ಮಕ್ಕಳ ಪಾಲಿನ ಅಚ್ಚುಮೆಚ್ಚಾಗಿರುವ ಸೂಲಗಿತ್ತಿ ಜಯಮ್ಮರ ಸೇವೆ ನಿಜಕ್ಕೂ ಗ್ರೇಟ್.

ಯಾವುದೇ ಪ್ರಚಾರದ ಹಂಗಿಲ್ಲದ್ದ ಇವರಿಗೆ ಸಂಘ ಸಂಸ್ಥೆಗಳಾಗಲಿ ,ಸಂಘಟನೆಗಳಾಗಲಿ ಗುರುತಿಸದೇ ಇರುವುದು ವಿಪರ್ಯಾಸ.ಒಂದು ವೇಳೆ ಎಲ್ಲಾ ಹೆರಿಗೆಗಳ ಮಾಹಿತಿಗಳು ಬರಹ ರೂಪದಲ್ಲಿ ಇದ್ದಿದ್ದರೆ ರಾಷ್ಟ್ರ ಮಟ್ಟದ ಅತ್ಯುನ್ನತ ಪ್ರಶಸ್ತಿಗೆ ಭಾಜನರಾಗುತಿದ್ದರು. ಈಕೆಯ ಸುದೀರ್ಘ ಸೇವೆ ಪರಿಗಣಿಸಿ ನಿಜವಾದ ಗೌರವ ಸಿಗುವಂತಾಗಲಿ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...