Shiva Rajkumar ಕಾಂಗ್ರೆಸ್ ಪಕ್ಷ ಟಿಕೇಟ್ ಕೊಟ್ಟರೆ ಗೀತಾಳನ್ನ ಎಂಪಿ ಆಗಿ ನೋಡುವ ಆಸೆ ಇದೆ. ಗೀತಾ ಎಂಪಿ ಆಗುವ ಮೂಲಕ ಇತರೆ ಮಹಿಳೆಯರಿಗೆ ಮಾದರಿಯಾಗಲಿದ್ದಾರೆ ಎಂದು ನಟ ಡಾ. ಶಿವರಾಜ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಕಲ್ಲಹಳ್ಳಿಯಲ್ಲಿರುವ ಸಚಿವ ಮಧು ಬಂಗಾರಪ್ಪನವರ ಸ್ವಗೃಹದಲ್ಲಿ ನಡೆದ ಸಚಿವರ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ನಾನು ರಾಜಕೀಯಕ್ಕೆ ಬರೊಲ್ಲ. ಅದರ ಬಗ್ಗೆ ಆಸಕ್ತಿ ಇಲ್ಲ. ಜನರ ಸೇವೆ ಮಾಡೋಕೆ ರಾಜಕೀಯದಲ್ಲಿದ್ದುಕೊಂಡು ಸೇವೆ ಮಾಡೋದು ಗೊತ್ತಿಲ್ಲ. ಜನ ಕಷ್ಟ ಅಂತ ಬಂದರೆ ಹಣಕೊಟ್ಟು ಕಳುಹಿಸುವೆ. ಆದರೆ ರಾಜಕಾರಣಗೊತ್ತಿಲ್ಲ. ಆದರೆ ಗೀತ ಅದೇ ಕುಟುಂಬದಿಂದ ಬಂದವಳು ರಾಜಕೀಯ ರಕ್ತದಲ್ಲಿ ಬಂದಿದೆ. ಎಂಪಿ ಆಗಿ ಆಯ್ಕೆಯಾದರೆ ಸಂತೋಷ ಎಂದರು.
ಸಿನಿಮಾದ ಬಗ್ಗೆ ಮಾತನಾಡಿದ ನಟ ಡಾ. ಶಿವರಾಜ್ ಕುಮಾರ್, ವೇದ ಸಿನಿಮಾದಲ್ಲಿ ಕಂಟೆಂಟ್ ಇತ್ತು. ಅದಾದ ನಂತರ ಅದರ ರೀತಿಯ ಸಿನಿಮಾ ಬರಲೇ ಇಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ವೇದ ನಂತರ ಗೋಸ್ಟ್ ಕಂಟೆಂಟ್ ಓರಿಯಂಟ್ ಸಿನಿಮಾಳಾಗಿದ್ದವು. ಜನರಿಗೆ ಇಷ್ಟವಾಗಿತ್ತು ಎಂದರು.
ಶೀಘ್ರದಲ್ಲಿಯೇ ಬಿಡುಗಡೆಯಾದ ಕರಟಕ ಧಮನಕ ಸಿನಿಮಾ ಬಗ್ಗೆ ಒಳ್ಳೆ ಕಥೆ ಇದೆ. ಬೇರೆ ಹೆಸರು ಇಡಬಹುದಿತ್ತು. ಆದರೆ ಕಥೆಗಾಗಿ ಅದೇ ಸಿನಿಮಾ ಟೈಟಲ್ ನ್ನ ಉಳಿಸಿಕೊಳ್ಳಲಾಗಿದೆ ಎಂದರು.
Shiva Rajkumar ಪತ್ರಿಕಾ ಗೋಷ್ಟಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಗೀತಾ ಶಿವರಾಜ್‌ಕುಮಾರ್, ಎಂ. ಶ್ರೀಕಾಂತ್, ಸೇರಿದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.