Puttaraj Gawai ಸಾಗರ ರಸ್ತೆಯ ಡಾ. ಪಂ| ಪುಟ್ಟರಾಜ ಕವಿಗವಾಯಿಗಳವರ ಅಂಧ ಮಕ್ಕಳ ಸಂಗೀತ ವಿದ್ಯಾಲಯ ಶ್ರೀ ವೀರೇಶ್ವರ ಪುಣ್ಯಾಶ್ರಮ ಸಂಸ್ಕೃತ ಪಾಠಶಾಲೆಯಲ್ಲಿ ಮಾ. 3ರಂದು ಬೆಳಿಗ್ಗೆ 11.30ಕ್ಕೆ ಡಾ. ಪಂ. ಪಟ್ಟರಾಜ ಕವಿ ಗವಾಯಿಗಳವರ 110ನೇ ಜನ್ಮದಿನದ ಸಮಾರಂಭ ಕಾರ‍್ಯಕ್ರಮ ಏರ್ಪಡಿಸಿದೆ.
ಹಾರನಹಳ್ಳಿ ಚೌಕಿಮಠದ ಶ್ರೀ ನೀಲಕಂಠೇಶ್ವರ ಮಹಾ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ. ಪುಣ್ಯಾಶ್ರಮದ ರೇವಣಸಿದ್ಧ ಹಿರೇಮಠ ಶಾಸ್ತ್ರಿಗಳಿಂದ ವೇದಘೋಷ ನಡೆಯಲಿದೆ. ರಾಜ್ಯಪ್ರಶಸ್ತಿ ಪುರಸ್ಕೃತ ಪಂ. ಆರ್.ಬಿ. ಸಂಗಮೇಶ್ವರ ಗವಾಯಿಗಳು ಅಧ್ಯಕ್ಷತೆ ವಹಿಸುವರು.
ಅತಿಥಿಗಳಾಗಿ ಅಖಿಲ ಭಾರತ ವೀರಶೈವ ಸಭಾದ ಅಧ್ಯಕ್ಷ ರುದ್ರಮುನಿ ಎಸ್. ಸಜ್ಜನ್, ಚಾರ್ಚೆಡ್ ಅಕೌಂಟೆoಟ್ ಕೆ.ವಿ. ನರೇಂದ್ರ ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಗದಗ ರಾಜ್ಯ ಪ್ರಶಸ್ತಿ ಪುರಸ್ಕೃತ ಪಂ. ಫಕೀರೇಶ ಕಣವಿ ಗವಾಯಿಗಳಿಗೆ ಹಾಗೂ ಮಾಳಕೊಪ್ಪದ ಸುಮಾ ರವೀಂದ್ರ ಅವರಿಗೆ ಶ್ರೀ ಗುರು ಗಾನಭೂಷಣ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.
ನಂತರ ನಡೆಯುವ ಸಂಗೀತ ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ಪುರಸೃತ ರಾಮಣ್ಣ ಭಜಂತ್ರಿ ಅವರ ಶಹನಾಯಿ ನುಡಿಸುವರು. ಶ್ರೀ ವಾಗೇಶ್ವರಿ ಭಜನಾ ಮಂಡಳಿಯಿoದ ಭಜನಾ ಸೇವೆ, ಪಶು ವೈದ್ಯಾಧಿಕಾರಿ ಡಾ. ಅರವಿಂದ್ ಎಂ.ಟಿ. ಮಂತ್ತು ಆಶ್ರಮದ ವಿದ್ಯಾರ್ಥಿಗಳಿಂದ ಪ್ರಾರ್ಥನೆ ನಡೆಯಲಿದೆ. ಕಲಾಶ್ರೀ ಪ್ರಶಸ್ತಿ ಪುರಸ್ಕೃತ ಹುಮಾಯೂನ್ ಹರ್ಲಾಪುರ ನಿರೂಪಿಸಲಿದ್ದಾರೆ.
Puttaraj Gawai ಅಂಧ ಮಕ್ಕಳ ದಾಸೋಹಕ್ಕೆ ಹಾಗೂ ಅಭಿವೃದ್ಧಿಗೆ ಹಲವಾರು ವರ್ಷಗಳಿಂದ ದಾಸೋಹ ಸೇವೆ ಮತ್ತು ಸಂಗೀತ ಕಾರ್ಯಕ್ರಮಗಳಿಗೆ ಸಹಕರಿಸುತ್ತಿರುವ ಉದ್ಯಮಿಗಳಿಗೆ ಸಮಾಜ ಸೇವಕರಿಗೆ ಜನಪ್ರತಿನಿಧಿಗಳಿಗೆ ಶ್ರೀ ವೀರೇಶ್ವರ ಪುಣ್ಯಾಶ್ರಮ ಕೃತಜ್ಞತೆ ಸಲ್ಲಿಸಿದೆ. ಜೊತೆಗೆ ಪ್ರತೀ ತಿಂಗಳು ನಡೆಯುವ ಅಂಧ ಮಕ್ಕಳ ಈ ವಿಶೇಷ ಸಂಗೀತ ಕಾರ್ಯಕ್ರಮಕ್ಕೆ ಸಾರ್ವಜನಿಕರು ಭಾಗವಹಿಸಬೇಕೆಂದು ಈ ಮೂಲಕ ಕೋರಿದ್ದಾರೆ. ಮಾಹಿತಿಗೆ 8884955667ರಲ್ಲಿ ಸಂಪರ್ಕಿಸಬಹುದು.