Friday, June 19, 2026
Friday, June 19, 2026

B. Y. Raghavendra ರಸ್ತೆ ನಡುವೆ ಕೆಟ್ಟುನಿಂತ ಸಾರಿಗೆ ಬಸ್. ಪ್ರಯಾಣಿಕರ ನೆರವಿಗೆ ಧಾವಿಸಿದ ಸಂಸದ ರಾಘವೇಂದ್ರ

Date:

B. Y. Raghavendra ಕೆಟ್ಟು ನಿಂತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ನಿಂದಾಗಿ ತೊಂದರೆಗೊಳಗಾಗಿದ್ದ ಪ್ರಯಾಣಿಕರ‌ನೆರವಿಗೆ , ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಧಾವಿಸಿದ ಘಟನೆ ಭಾನುವಾರ ನಡೆದಿದೆ.

ಬೆಂಗಳೂರಿನಿಂದ ಕುಮಟಾಗೆ ಸಂಚರಿಸುತ್ತಿದ್ದ ಶಿರಸಿ ಉಪ ವಿಭಾಗಕ್ಕೆ ಸೇರಿದ ಸರ್ಕಾರಿ ಬಸ್, ಶಿವಮೊಗ್ಗದ ತ್ಯಾವರೆಕೊಪ್ಪ ಸಮೀಪ ಕೆಟ್ಟು ರಸ್ತೆಯಲ್ಲಿ ನಿಂತಿತ್ತು. ಇದರಿಂದ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕುವಂತಾಗಿತ್ತು.
ಇದೇ ವೇಳೆ ಶಿವಮೊಗ್ಗದಿಂದ ಸಾಗರಕ್ಕೆ ಕಾರಿನಲ್ಲಿ ತೆರಳುತ್ತಿದ್ದ ಸಂಸದ ಬಿ.ವೈ.ರಾಘವೇಂದ್ರ ಅವರು, ಸರ್ಕಾರಿ ಬಸ್ ನಿಂತುಕೊಂಡಿದ್ದನ್ನು ಗಮನಿಸಿ ಕಾರಿನಿಂದ ಇಳಿದು ಬಸ್ ಚಾಲಕ, ನಿರ್ವಾಹಕರ ಬಳಿ ಕಾರಣ ಕೇಳಿದ್ದಾರೆ.

ಬಸ್ ಕೆಟ್ಟ ಮಾಹಿತಿ ಅರಿತ ಸಂಸದರು, ಮೊಬೈಲ್ ಮೂಲಕ ಕೆ.ಎಸ್.ಆರ್.ಟಿ.ಸಿ ಶಿವಮೊಗ್ಗ ವಿಭಾಗದ ವಿಭಾಗೀಯ ನಿಯಂತ್ರಣ (ಡಿಸಿ) ಅಧಿಕಾರಿ ವಿಜಯ್ ಕುಮಾರ್ ಅವರನ್ನು ಸಂಪರ್ಕಿಸಿ ಕೂಡಲೆ ಬಸ್ ದುರಸ್ತಿಗೆ ಕ್ರಮಕೈಗೊಂಡು ಪ್ರಯಾಣಿಕರಿಗೆ ನೆರವಾಗುವಂತೆ ಸೂಚಿಸಿದರು.

B. Y. Raghavendra ಅದರಂತೆ ಕೆ.ಎಸ್.ಆರ್.ಟಿ.ಸಿ ಡಿಸಿ ವಿಜಯ್ ಕುಮಾರ್ ಸಿಬ್ಬಂದಿಗಳನ್ನು ಸ್ಥಳಕ್ಕೆ ಕಳುಹಿಸಿ ಬಸ್ ದುರಸ್ತಿಗೊಳಿಸುವಲ್ಲಿ ಸಹಕರಿಸಿದರು. ತದನಂತರ ಬಸ್ ಕುಮಟಾದತ್ತ ಪ್ರಯಾಣ ಬೆಳೆಸಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಆರೋಗ್ಯಕರ ವೃದ್ಧಾಪ್ಯಕ್ಕೆ ಯೋಗ ಸಹಕಾರಿ ಲೇ: ಡಾ.ಎಸ್.ಎಲ್.ಪಲ್ಲವಿ

Klive Special Article ಪ್ರತಿ ವರ್ಷ ಜೂನ್ 21ರಂದು ವಿಶ್ವದಾದ್ಯಂತ ಅಂತರಾಷ್ಟ್ರೀಯ...

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...