Friday, April 3, 2026
Friday, April 3, 2026

Rajya Sabha Elections ರಾಜ್ಯಸಭೆ ಚುನಾವಣೆ ನಿರೀಕ್ಷೆಯಂತೆ ಕಾಂಗ್ರೆಸ್ 3 & ಬಿಜೆಪಿ 1 ಸ್ಥಾನ ಗೆಲುವು

Date:

Rajya Sabha Elections ರಾಜ್ಯಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಕಾಂಗ್ರೆಸ್‌ನ ಅಜಯ್ ಮಾಕನ್, ಸೈಯದ್ ನಾಸಿರ್ ಹುಸೇನ್, ಜಿ.ಸಿ. ಚಂದ್ರಶೇಖರ್ ಮತ್ತು ಬಿಜೆಪಿಯ ನಾರಾಯಣಸಾ ಭಾಂಡಗೆ ಗೆಲುವು ಸಾಧಿಸಿದ್ದಾರೆ.

ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಜೆಡಿಎಸ್‌ನ ಡಿ. ಕುಪೇಂದ್ರ ರೆಡ್ಡಿ ಸೋಲು ಕಂಡಿದ್ದಾರೆ.

223 ಶಾಸಕರ ಪೈಕಿ ಬಿಜೆಪಿಯ ಅರಬೈಲ್ ಶಿವರಾಂ ಹೆಬ್ಬಾರ್ ಮತದಾನಕ್ಕೆ ಗೈರಾಗಿದ್ದರು.
ಒಟ್ಟು 222 ಶಾಸಕರು ಮತ ಚಲಾಯಿಸಿದ್ದರು.

ಅಜಯ್ ಮಾಕನ್, ನಾಸೀರ್ ಹುಸೇನ್ ಮತ್ತು ನಾರಾಯಣ ಸಾ ಭಾಂಡಗೆ ತಲಾ 47 ಮತಗಳನ್ನು ಪಡೆದಿದ್ದಾರೆ. ಜಿ.ಸಿ. ಚಂದ್ರಶೇಖರ್ 45 ಮತ ಪಡೆದಿದ್ದಾರೆ.

ಕುಪೇಂದ್ರ ರೆಡ್ಡಿ 36 ಮತಗಳನ್ನು ಪಡೆಯಲಷ್ಟೇ ಸಾಧ್ಯವಾಗಿದೆ.
ಕಾಂಗ್ರೆಸ್‌ನ ಎಲ್ಲ ಶಾಸಕರೂ ಪಕ್ಷದ ಅಭ್ಯರ್ಥಿಗಳ ಪರ ಮತ ಚಲಾಯಿಸಿದ್ದಾರೆ.

Rajya Sabha Elections ಪಕ್ಷೇತರರಾದ ಲತಾ ಮಲ್ಲಿಕಾರ್ಜುನ, ಕೆ.ಎಚ್. ಪುಟ್ಟಸ್ವಾಮಿ ಗೌಡ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಜಿ. ಜನಾರ್ದನ ರೆಡ್ಡಿ ಮತ್ತು ಸರ್ವೋದಯ ಕರ್ನಾಟಕ ಪಕ್ಷದ ದರ್ಶನ್ ಪುಟ್ಟಣ್ಣಯ್ಯ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಿದ್ದಾರೆ. ಬಿಜೆಪಿಯ ಎಸ್.ಟಿ. ಸೋಮಶೇಖರ್ ಪಕ್ಷದ ವಿಪ್ ಉಲ್ಲಂಘಿಸಿ ಕಾಂಗ್ರೆಸ್ ಅಭ್ಯರ್ಥಿಗೆ ಮತ
ಹಾಕಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

D.S. Arun ಸೂಕ್ತ ವಿಲೇವಾರಿಯಾಗದ ಘನತ್ಯಾಜ್ಯ: ಸಾರ್ವಜನಿಕ ಆರೋಗ್ಯ, ಪರಿಸರದ ಮೇಲೆ ಪರಿಣಾಮ- ಡಿ‌.ಎಸ್.ಅರುಣ್

D.S. Arun ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ...

S.N. Channabasappa ಸತ್ತಮೇಲೆಯೂ ಹಗೆತನ ಸಾಧಿಸುವ ವಿಕೃತ ಮನಸ್ಥಿತಿಯನ್ನು ಹಿಂದೂ ಸಮಾಜ‌ ಒಪ್ಪುವುದಿಲ್ಲ- ಶಾಸಕ ಎಸ್.ಎನ್.ಚನ್ನಬಸಪ್ಪ

S.N. Channabasappa ಶಿವಮೊಗ್ಗ ನಗರದ ಸೂಳೆಬೈಲಿನ ಹಿಂದೂ ರುದ್ರಭೂಮಿಯಲ್ಲಿ ಹತ್ಯೆಯಾದ ಬಾಲಕ...

Karnataka Sahitya Academy ಸಾಹಿತ್ಯ ಅಕಾಡೆಮಿಯಿಂದ ವಿವಿಧ ಪ್ರಕಾರಗಳ ಕೃತಿಗಳ ಪುಸ್ತಕ ಬಹುಮಾನಕ್ಕೆ ಆರ್ಜಿ ಆಹ್ವಾನ

Karnataka Sahitya Academy ಕರ್ನಾಟಕ ಸಾಹಿತ್ಯ ಅಕಾಡೆಮಿಯು 2025 ನೇ ವರ್ಷದಲ್ಲಿ...

Karnataka University ನಾಯಕತ್ವ ಗುಣ ರೂಪುಸುವಲ್ಲಿ ವಿದ್ಯಾರ್ಥಿ ಸಂಸತ್ತು ಸಹಕಾರಿ-ಪ್ರೊ.ಜೆ.ಎಂ.ನಾಗಯ್ಯ

Karnataka University ಪ್ರಜಾಪ್ರಭುತ್ವದ ಸಬಲತೆಗೆ ಸಮರ್ಥ ನಾಯಕತ್ವ ಅಗತ್ಯ. ಪರಿಣಾಮಕಾರಿಯಾಗಿ ವಿಷಯ...