Sunday, August 2, 2026
Sunday, August 2, 2026

Sharavati River ಶರಾವತಿ ಅಂತರ್ಗತ‌ ಜಲವಿದ್ಯುತ್ ಯೋಜನೆ ಅವಶ್ಯಕತೆಯಿಲ್ಲ- ಅಖಿಲೇಶ್ ಚಿಪ್ಳಿ

Date:

Sharavati River ಶರಾವತಿ ಅಂತರ್ಗತ ಜಲ ವಿದ್ಯುತ್ ಯೋಜನೆ ಅಗತ್ಯ ಮತ್ತು ಅವಶ್ಯಕತೆ ಇಲ್ಲ. ಇದನ್ನು ಜಾರಿ ಮಾಡಿದರೆ. ಅತ್ತ ಹೊನ್ನಾವರದ ಇಡೀ ಜನತೆ ಉಪ್ಪು ನೀರು ಕುಡಿಯುವ ಪರಿಸ್ಥಿತಿ ಏರ್ಪಡುತ್ತದೆ. ನಮ್ಮ ಮನವಿಗೆ ಸರ್ಕಾರ ಸ್ಫಂದಿಸಿ ಯೋಜನೆ ಹಿಂಪಡೆಯದಿದ್ದರೆ ವಿವಿಧ ರೀತಿಯ ಹೋರಾಟ ಅನಿವಾರ್ಯ ಎಂದು ಸಾಗರದ ಪರಿಸರವಾದಿಗಳಾದ ಅಖಿಲೇಶ್ ಚಿಪ್ಳಿ ಅವರು ಹೇಳಿದ್ದಾರೆ.

Sharavati River ಸೌರ ವಿದ್ಯುತ್ ಕ್ಷೇತ್ರ ವೇಗವಾಗಿ ಬೆಳೆಯತ್ತಿರುವ ಈ‌ ಹೊತ್ತಿನಲ್ಲಿ; ಪ್ರಪಂಚದ ಅತ್ಯಂತ ವಿಶಿಷ್ಟ ಅರಣ್ಯ ಪ್ರದೇಶವಾದ ಶರಾವತಿ ಸಿಂಗಳೀಕ ಅಭಯಾರಣ್ಯದ ಅತೀ ಸೂಕ್ಷ್ಮ ಪ್ರದೇಶದಲ್ಲಿ ಈ ಯೋಜನೆಗೆ ಮುಂದಾಗಿರುವುದು ದುರದೃಷ್ಟಕರ. ಈ ಯೋಜನೆ ಜಾರಿಯಾದಲ್ಲಿ ಈ ಭಾಗದಲ್ಲಿ ಸಿಂಗಳೀಕ ಸಂತತಿ ವಿನಾಶವಾಗಲಿದೆ. ಈ ಯೋಜನೆಯಲ್ಲಿ ಸಾಧಕಕ್ಕಿಂತ ಭಾಧಕದ ಅಂಶವೇ ತೀರಾ ಹೆಚ್ಚಿದೆ. ಪರಿಸರ ನಾಶ ಮಾಡುವ ಈ ಯೋಜನೆಯ ಬದಲಿಗೆ ಸಾಗರ ಪಟ್ಟಣದ ಪ್ರತಿ ಮನೆಗೂ ಸೌರ ವಿದ್ಯುತ್ ಫಲಕಗಳನ್ನು ಅಳವಡಿಸುವ ಕ್ರಮಕ್ಕೆ ಮುಂದಾದಲ್ಲಿ ಪಶ್ಚಿಮ ಘಟ್ಟದ ಅಮೂಲ್ಯ ಪರಿಸರ ನಾಶವಾಗುವುದಿಲ್ಲ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ₹ 6.400 ಕೋಟಿ ವೆಚ್ಚದ ಶಿವಮೊಗ್ಗ- ತುಮಕೂರು ಚತುಷ್ಪಥ ರಸ್ತೆ ಮುಂದಿನ ಮಾರ್ಚ್ ಗೆ ಸಿದ್ಧ- ಬಿ.ವೈ.ರಾಘವೇಂದ್ರ

B.Y. Raghavendra ಮಲೆನಾಡು ಹಾಗೂ ರಾಜಧಾನಿ ಬೆಂಗಳೂರು ನಡುವಿನ ಸಂಪರ್ಕವನ್ನು ಕ್ರಾಂತಿಕಾರಕವಾಗಿ...

S. N. Channabasappa ಬಡಾವಣೆಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದು ನಮ್ಮ ಮುಖ್ಯ ಕರ್ತವ್ಯ- ಎಸ್.ಎನ್.ಚನ್ನಬಸಪ್ಪ

S. N. Channabasappa ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ...

Rotary Club of Shivamogga ಮಕ್ಕಳಲ್ಲಿ ರೋಟರಿ ಸಂಸ್ಥೆ ನಾಯಕತ್ವ ಗುಣಗಳನ್ನ ಬೆಳೆಸುತ್ತದೆ- ಡಿ.ಕೆ.ನರಹರಿ

Rotary Club of Shivamogga ರೋಟರಿ ಸಂಸ್ಥೆಯು ಮಕ್ಕಳಿಗೆ ಶಾಲಾ ಹಂತದಲ್ಲಿಯೇ...

B.Y. Raghavendra ಹವಾಮಾನ ಆಧಾರಿತ ಬೆಳೆವಿಮೆ: ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ವಿಸ್ತರಿಸಿ- ಸಂಸದ ಬಿ.ವೈ‌.ರಾಘವೇಂದ್ರ

B.Y. Raghavendra ಮುಂಗಾರು ಹಂಗಾಮಿನಲ್ಲಿ ರಾಜ್ಯಾದ್ಯಂತ ವಾಡಿಕೆಗಿಂತ ಶೇ.34 ರಷ್ಟು ಮಳೆ...