Sharavati River ಶರಾವತಿ ಅಂತರ್ಗತ ಜಲ ವಿದ್ಯುತ್ ಯೋಜನೆ ಅಗತ್ಯ ಮತ್ತು ಅವಶ್ಯಕತೆ ಇಲ್ಲ. ಇದನ್ನು ಜಾರಿ ಮಾಡಿದರೆ. ಅತ್ತ ಹೊನ್ನಾವರದ ಇಡೀ ಜನತೆ ಉಪ್ಪು ನೀರು ಕುಡಿಯುವ ಪರಿಸ್ಥಿತಿ ಏರ್ಪಡುತ್ತದೆ. ನಮ್ಮ ಮನವಿಗೆ ಸರ್ಕಾರ ಸ್ಫಂದಿಸಿ ಯೋಜನೆ ಹಿಂಪಡೆಯದಿದ್ದರೆ ವಿವಿಧ ರೀತಿಯ ಹೋರಾಟ ಅನಿವಾರ್ಯ ಎಂದು ಸಾಗರದ ಪರಿಸರವಾದಿಗಳಾದ ಅಖಿಲೇಶ್ ಚಿಪ್ಳಿ ಅವರು ಹೇಳಿದ್ದಾರೆ.
Sharavati River ಸೌರ ವಿದ್ಯುತ್ ಕ್ಷೇತ್ರ ವೇಗವಾಗಿ ಬೆಳೆಯತ್ತಿರುವ ಈ ಹೊತ್ತಿನಲ್ಲಿ; ಪ್ರಪಂಚದ ಅತ್ಯಂತ ವಿಶಿಷ್ಟ ಅರಣ್ಯ ಪ್ರದೇಶವಾದ ಶರಾವತಿ ಸಿಂಗಳೀಕ ಅಭಯಾರಣ್ಯದ ಅತೀ ಸೂಕ್ಷ್ಮ ಪ್ರದೇಶದಲ್ಲಿ ಈ ಯೋಜನೆಗೆ ಮುಂದಾಗಿರುವುದು ದುರದೃಷ್ಟಕರ. ಈ ಯೋಜನೆ ಜಾರಿಯಾದಲ್ಲಿ ಈ ಭಾಗದಲ್ಲಿ ಸಿಂಗಳೀಕ ಸಂತತಿ ವಿನಾಶವಾಗಲಿದೆ. ಈ ಯೋಜನೆಯಲ್ಲಿ ಸಾಧಕಕ್ಕಿಂತ ಭಾಧಕದ ಅಂಶವೇ ತೀರಾ ಹೆಚ್ಚಿದೆ. ಪರಿಸರ ನಾಶ ಮಾಡುವ ಈ ಯೋಜನೆಯ ಬದಲಿಗೆ ಸಾಗರ ಪಟ್ಟಣದ ಪ್ರತಿ ಮನೆಗೂ ಸೌರ ವಿದ್ಯುತ್ ಫಲಕಗಳನ್ನು ಅಳವಡಿಸುವ ಕ್ರಮಕ್ಕೆ ಮುಂದಾದಲ್ಲಿ ಪಶ್ಚಿಮ ಘಟ್ಟದ ಅಮೂಲ್ಯ ಪರಿಸರ ನಾಶವಾಗುವುದಿಲ್ಲ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿ ಎಂದು ತಿಳಿಸಿದ್ದಾರೆ.