Saturday, June 21, 2025
Saturday, June 21, 2025

Constitution Awareness Jatha ಭದ್ರಾವತಿಯಲ್ಲಿ ಸಂವಿಧಾನ ಜಾಗೃತಿ ಜಾಥಾ ಯಶಸ್ವಿ

Date:

Constitution Awareness Jatha ಸಮಾನತೆಯ ಆಶಯ ಹೊತ್ತ ಸಂವಿಧಾನ ಜಾಗೃತಿ ಜಾಥಾ ರಥವು ಫೆಬ್ರವರಿ 19 ರಂದು ಭದ್ರಾವತಿ ತಾಲ್ಲೂಕಿನ ಸಿದ್ಲಿಪುರ ಗ್ರಾಮವನ್ನು ಪ್ರವೇಶಿಸಿತು. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಗ್ರಾ,ಪಂ. ಅಧ್ಯಕ್ಷರು, ಸದಸ್ಯರು ಹಾಗೂ ಸಾರ್ವಜನಿಕರು ಪೂರ್ಣಕುಂಭ ಮೆರವಣಿಗೆ, ಡೊಳ್ಳು ಕುಣಿತ, ಜೈ ಭೀಮ್ ಘೋಷಣೆಯೊಂದಿಗೆ ಜಾಥಾವನ್ನು ಅದ್ದೂರಿಯಾಗಿ ಸ್ವಾಗತಿಸಿದರು.

“ಭಾರತೀಯರಿಂದ, ಭಾರತೀಯರಿಗಾಗಿ, ಭಾರತೀಯರಿಗೊಸ್ಕರ ನಿರ್ಮಾಣಗೊಂಡ ಸಂವಿಧಾನದ ಅರಿವು” ಸಮಾಜದಲ್ಲಿ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು ಎನ್ನುವ ಉದ್ದೇಶದೊಂದಿಗೆ ಜಾಥಾವನ್ನು ರಾಜ್ಯಾದ್ಯಾಂತ ಆಯೋಜಿಸಿರುವ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯ ಭದ್ರಾವತಿ ತಾಲ್ಲೂಕು ಸಹಾಯಕ ನಿರ್ದೇಶಕರು ಗೋಪಾಲಪ್ಪ ಎನ್. ಇವರು ಸಾರ್ವಜನಿಕರಿಗೆ ಮಾಹಿತಿಯನ್ನು ನೀಡಿದರು.

ಜಾಥಾ ಸಂಚರಿಸುತ್ತಿರುವ ಎಲ್ಲಾ ಮಾರ್ಗಗಳಲ್ಲಿ ಸಾರ್ವಜನಿಕರು ಅಭೂತಪೂರ್ವ ಸಹಕಾರವನ್ನು ನೀಡುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮಾಹಿತಿಯನ್ನು ಪಡೆಯುತ್ತಿರುವುದು ವಿಶೇಷವಾಗಿತ್ತು.

ವಿವಿಧ ಶಾಲಾ ವಿಧ್ಯಾರ್ಥಿಗಳಿಗಾಗಿ ನೃತ್ಯ, ಛದ್ಮವೇಷ, ನಾಟಕ ಪ್ರದರ್ಶನ, ಸಂವಿಧಾನ ಪೀಠಿಕೆ ವಾಚನ, ರಂಗೋಲಿ ಸ್ಪರ್ಧೆಗಳನ್ನು ಏರ್ಪಡಿಸಿ ಉತ್ತಮ ಪ್ರದರ್ಶನಕ್ಕೆ ಬಹುಮಾನವನ್ನು ನೀಡಲಾಯಿತು. ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸಗಳನ್ನು ಏರ್ಪಡಿಸಲಾಗಿತ್ತು. ವಸತಿ ಶಾಲಾವಿದ್ಯಾರ್ಥಿಗಳಿಂದ ಮಾನವ ಸರಪಳಿ ರಚನೆ, ಪಥಸಂಚಲನ, ಚಿತ್ರಕಲೆ, ಗಾಯನ ಹೀಗೆ ಹಲವಾರು ಸಾಂಸ್ಕoತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಯಶಸ್ವಿಗೊಳಿಸಲಾಯಿತು.

Constitution Awareness Jatha ಐಕ್ಯತಾ ರಥ ಯಾತ್ರೆಯು ಭದ್ರಾವತಿಯ ಎಲ್ಲಾ 38 ಪಂಚಾಯಿತಿಗಳಲ್ಲಿ ಹಾಗೂ ನಗರ ಸಭೆ ವ್ಯಾಪ್ತಿಯಲ್ಲಿ ಫೆಬ್ರವರಿ 23 ರವರೆಗೆ ಸಂಚರಿಸಲಿದ್ದು ಅದೇ ದಿನ ಸಂಜೆ ನಗರದ ಕನಕ ಮಂಟಪದಲ್ಲಿ ನಡೆಯಲಿರುವ ಮಹಾ ಸಮಾವೇಶದಲ್ಲಿ ಪಾಲ್ಗೊಳ್ಳುವುದು ಎಂದುಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಡಿ.ಮಲ್ಲೇಶಪ್ಪ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಮಕ್ಕಳಿಗೆ ಜಾನಪದದ ಅರಿವು ಮೂಡಿಸುವುದು ಅವಶ್ಯ: ಕವಿತಾ ಸುಧೀಂದ್ರ

ಮಕ್ಕಳಲ್ಲಿ ಬಾಲ್ಯದಿಂದಲೇ ಜಾನಪದ ಸಂಸ್ಕೃತಿಯ ಮಹತ್ವದ ಕುರಿತು ಅರಿವು ಮೂಡಿಸಬೇಕು ಎಂದು...

Shivamogga District Minority Welfare Department ವಿದ್ಯಾರ್ಥಿನಿಲಯಕ್ಕೆ ಆನ್‌ಲೈನ್ ಅರ್ಜಿ ಆಹ್ವಾನ, ಅವಧಿ ವಿಸ್ತರಣೆ

Shivamogga District Minority Welfare Department ಶಿವಮೊಗ್ಗ ಜಿಲ್ಲಾ ಅಲ್ಪಸಂಖ್ಯಾತರ...

ರಾಜ್ಯ ಮಟ್ಟದ ಅಂಬೆಗಾಲು – 6 ಕಿರು ಚಿತ್ರ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

ಶಿವಮೊಗ್ಗ ನಗರದ ಸಿನಿಮೊಗೆ - ಶಿವಮೊಗ್ಗ ಚಿತ್ರ ಸಮಾಜದ ವತಿಯಿಂದ...