Sunday, December 14, 2025
Sunday, December 14, 2025

Kateel Ashok Pai Memorial Institute ಸ್ಪೀಕ್ ಫಾರ್ ಇಂಡಿಯಾ ಅಂತಿಮ ಸ್ಪರ್ಧೆಯಲ್ಲಿ ಆಯ್ಕೆಯಾಗಿ ಬಹುಮಾನ ಪಡೆದ ಕು.ಸ್ಫೂರ್ತಿ

Date:

Kateel Ashok Pai Memorial Institute ಶಿವಮೊಗ್ಗದ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ಪ್ರಥಮ ವರ್ಷದ BSW (ಬ್ಯಾಚುಲರ್ ಆಫ್ ಸೋಶಿಯಲ್ ವರ್ಕ್) ವಿದ್ಯಾರ್ಥಿನಿ ಸ್ಪೂರ್ತಿ ವೈ. ಎಚ್ ಇವರು ‘ಫೆಡರಲ್ ಬ್ಯಾಂಕ್’, ‘ದಿ ಟೈಮ್ಸ್ ಆಫ್ ಇಂಡಿಯಾ ‘ & ‘ವಿಜಯ ಕರ್ನಾಟಕದ’ ಸಹಯೋಗದಲ್ಲಿ ಆಯೋಜಿಸಿದ್ದ ಸ್ಪೀಕ್ ಫಾರ್ ಇಂಡಿಯಾ ಕರ್ನಾಟಕ ಆವೃತ್ತಿ 2023-24ರಲ್ಲಿ ಭಾಗವಹಿಸುವುದರೊಂದಿಗೆ ಫೈನಲಿಸ್ಟ್ ಆಗಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಶಿವಮೊಗ್ಗ ಜಿಲ್ಲೆ, ಸಾಗರ ತಾಲೂಕು, ಆನಂದಪುರಂ ವಾಸಿಯಾದ ಶ್ರೀಮತಿ ಗೌರಮ್ಮ ಮತ್ತು ಯೋಗೀಶ್ ದಂಪತಿಗಳ ಮಗಳಾಗಿ ಜನಿಸಿದ ಇವರು, ಬಾಲ್ಯದಿಂದಲೇ ವಿದ್ಯಾಭ್ಯಾಸದ ಜೊತೆಜೊತೆಗೆ ಸಾಹಿತ್ಯ, ರಂಗಭೂಮಿ, ಭಾಷಣ, ಚಿತ್ರಕಲೆ, ಪ್ರಬಂಧ, ಕಾರ್ಯಕ್ರಮಗಳ ನಿರೂಪಣೆ, ಜನಪರ ಹೋರಾಟಗಳು ಹಾಗೂ ಪ್ರತಿಭಟನೆಗಳು ಹೀಗೆ ಹಲವು ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿದ್ದಾರೆ.

ಕಾಲೇಜು ಹಂತ, ಅಂತರ ಕಾಲೇಜು ಹಂತ, ಜಿಲ್ಲಾಹಂತ, ವಿಭಾಗೀಯ ಹಂತಗಳಲ್ಲಿ ತಮ್ಮ ವಾದವನ್ನು ಮಂಡಿಸಿ ಗೆದ್ದು ಸೆಮಿ ಫೈನಲ್ಸ್ ಗೆ ಆಯ್ಕೆಯಾಗಿ, ಅಲ್ಲಿಂದ ಅಂತಿಮ ಹಂತ(ಗ್ರಾಂಡ್ ಫಿನಾಲೆ) ವನ್ನು ತಲುಪಿದ ಕರ್ನಾಟಕ ರಾಜ್ಯದ 8 ಅಭ್ಯರ್ಥಿಗಳಲ್ಲಿ ಇವರು ಒಬ್ಬರು.

ಮೊದಲ ಪ್ರಯತ್ನದಲ್ಲೇ ಅಂತಿಮ ಹಂತವನ್ನು ತಲುಪಿದ ಸಂಗತಿ ಖುಷಿ ತಂದಿದೆ. ಚರ್ಚಾಸ್ಪರ್ಧೆಯಲ್ಲಿ ಹೇಗೆ ವಿಚಾರಗಳನ್ನು ಮಂಡಿಸಬೇಕೆಂದು ಹಲವು ಸಲಹೆ ಸೂಚನೆಗಳು ಸಿಕ್ಕವು.ಅಂತಿಮ ಹಂತವನ್ನು ತಲುಪುವವರೆಗೂ ಪೋಷಕರು, ಕಾಲೇಜಿನ ಪ್ರಾಂಶುಪಾಲರಾದ ಡಾ.ಸಂಧ್ಯಾ ಕಾವೇರಿ ಕೆ ಮೇಡಂ ಮತ್ತು ಎಲ್ಲ ಪ್ರಧ್ಯಾಪಕರ ಮಾರ್ಗದರ್ಶನ ಹಾಗೂ ಸಹಪಾಠಿಗಳ ಸಹಾಯ – ಸಹಕಾರವೇ ಕಾರಣ. ಎಲ್ಲರ ಪ್ರೋತ್ಸಾಹ ಮುಂದಿನ ಸ್ಪರ್ಧೆಗಳಲ್ಲಿ ಭಾಗವಹಿಸಲು ಹೆಚ್ಚು ಉತ್ಸಾಹ ನೀಡಿದೆ. ಎಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳು ಎಂದು ಸ್ಪೂರ್ತಿ ವೈ.ಎಚ್. ಹೇಳಿದ್ದಾರೆ.

Kateel Ashok Pai Memorial Institute ಕೇಂದ್ರ ಲೋಕ ಸೇವಾ ಆಯೋಗದ [UPSC] ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ, ಭಾರತೀಯ ಆಡಳಿತಾತ್ಮಕ ಸೇವೆಯ [IAS] ಮೂಲಕ, ಪ್ರಗತಿಪರ ಸಮಾಜಕ್ಕೆ ಸೇವೆ ಸಲ್ಲಿಸುವ ಗುರಿಯನ್ನು ಹೊಂದುವ ಜೊತೆಗೆ, ಹವ್ಯಾಸಿ ರಂಗಭೂಮಿಯಲ್ಲಿ ಮುಂದುವರೆಯುವ ಆಸಕ್ತಿ ಹೊಂದಿದ್ದಾರೆ.
ಇವರ ಈ ಸಾಧನೆಗೆ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಆಡಳಿತ ಮಂಡಳಿ ಪ್ರಾಂಶುಪಾಲರಾದ ಡಾ.ಸಂಧ್ಯಾ ಕಾವೇರಿ, ಅಧ್ಯಾಪಕ ವೃಂದ ಮತ್ತು ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...