Chandigarh Mayor Elections ವಿವಾದಾತ್ಮಕ ಚಂಡೀಗಢ ಮೇಯರ್ ಚುನಾವಣೆ ಕುರಿತಂತೆ ಇಂದು ಸುಪ್ರೀಂ ಕೋರ್ಟ್‌ಗೆ ಹಾಜರಾದ ಚುನಾವಣಾಧಿಕಾರಿ ಅನಿಲ್ ಮಾಸಿಹ್, ತಾನು ಮತಪತ್ರಗಳನ್ನು ತಿರುಚಿರುವುದನ್ನು ಒಪ್ಪಿಕೊಂಡಿದ್ದಾರೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠ ಸೂಚಿಸಿದೆ.
ಮರು ಚುನಾವಣೆ ನಡೆಸುವ ಬದಲು ರಿಟರ್ನಿಂಗ್ ಅಧಿಕಾರಿ ಮಾಡಿದ ಗುರುತುಗಳನ್ನು ಗಣನೆಗೆ ತೆಗದುಕೊಳ್ಳದೆ ಮತಪತ್ರಗಳನ್ನು ಮರು ಎಣಿಕೆ ಮಾಡಿ ಫಲಿತಾಂಶ ಪ್ರಕಟಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಕುದುರೆ ವ್ಯಾಪಾರದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ನ್ಯಾಯಾಲಯ, ನಾಳೆ ಎಲ್ಲಾ ಮತಪತ್ರಗಳನ್ನು ಹಾಜರುಪಡಿಸುವಂತೆ ಆದೇಶಿಸಿದೆ. ಲಭ್ಯ ಮತಪತ್ರಗಳನ್ನು ಕೂಲಂಕುಷ ಪರಿಶೀಲನೆ ನಡೆಸಬೇಕೆಂದು ಸೂಚಿಸಿದೆ.
ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಚುನಾವಣಾ ಅಧಿಕಾರಿಯೊಬ್ಬರನ್ನು ದೇಶದ ಮುಖ್ಯ ನ್ಯಾಯಾಧೀಶರು ಅಡ್ಡ Chandigarh Mayor Elections ಪ್ರಶ್ನೆಗೆ ಒಳಪಡಿಸಿರುವುದು ಎಂದು ಮಾಸಿಹ್ ಅವರಿಂದ ಉತ್ತರವನ್ನು ಕೇಳಿದ ನಂತರ ನ್ಯಾಯಾಲಯವು ವಿಷಾದ ವ್ಯಕ್ತಪಡಿಸಿದೆ.
Chandigarh Mayor Elections ಚಂಡೀಘಢ ಮೇಯರ್ ಚುನಾವಣೆ ಮತಪತ್ರ ತಿರುಚಿದ್ದನ್ನ ಒಪ್ಪಿಕೊಂಡ ಚುನಾವಣಾಧಿಕಾರಿ ಅನಿಲ್ ಮಶಿ
Date: