Tuesday, October 1, 2024
Tuesday, October 1, 2024

Constitution of India – ಸಂವಿಧಾನದ ಅಮೃತ ಮಹೋತ್ಸವ:ಭಾರತೀಯತೆಯ ಪ್ರಜ್ಞೆ ಮೆರೆಯಬೇಕಾದ ಹೊತ್ತು-ಡಾ. ಎಸ್. ನರೇಂದ್ರಕುಮಾರ್

Date:

Constitution of India – ಕೊನೆಗೊಂಡಿತೊ ಓರೊರ್ವರ ಗರ್ವದ ಕಾಲ,
ಇದು ಸರ್ವರ ಕಾಲ!
“ಸರ್ವೋದಯ!” “ಸರ್ವೋದಯ!”
ಸರ್ವೋದಯವೆ ಯುಗಮಂತ್ರ!
ಸರ್ವೋದಯವೆ ಸ್ವಾತಂತ್ರ್ಯದ ಶ್ರೀತಂತ್ರ!
ಮೇಲಿಲ್ಲವೊ ಕೀಳಿಲ್ಲವೊ
ಸರ್ವ ಸಮಾನದ ರಾಜ್ಯ

 1950 ಜನವರಿ 26ರಂದು ನಮ್ಮ ಭಾರತದ ಸಂವಿಧಾನ ಜಾರಿಗೊಂಡ ಸುದ್ದಿಯನ್ನು ಆಕಾಶವಾಣಿ ಮೂಲಕ ಕೇಳಿ, ಸ್ಫೂರ್ತಿಗೊಂಡು ಅಂದೆ ಕವಿ, ವಿಶ್ವಮಾನವತಾವಾದಿ ಕುವೆಂಪು ಅವರು ಸಂಭ್ರಮದಿಂದ ಬರೆದ ‘ಶ್ರೀಸಾಮಾನ್ಯನ ದೀಕ್ಷಾಗೀತೆ’ ಕವನದ ಸಾಲುಗಳಿವು. ಇಡೀ ಭಾರತದಲ್ಲಿ ಅದರಲ್ಲೂ ಸಂವಿಧಾನದ ಆಶಯಗಳನ್ನು ಕುರಿತು ಅಭಿವ್ಯಕ್ತಿಸಿರುವ ಅಪರೂಪದ ಮೊದಲ ಕವಿತೆ ಇದು. ಸಂವಿಧಾನವನ್ನು ಜನಸಾಮಾನ್ಯನ ದೀಕ್ಷಾಗೀತೆ ಎಂದು ಕುವೆಂಪು ಅವರು ಪರಿಭಾವಿಸಿರುವುದೇ ಅತ್ಯಂತ ಮಾರ್ಮಿಕವಾಗಿದೆ.

ಪುರಾಣಗಳಲ್ಲಿ ಜಂಬೂದ್ವೀಪವೆಂದೂ, ಭರತ ಖಂಡವೆಂದೂ ಕರೆಯಲ್ಪಟ್ಟಿರುವ ನಮ್ಮ ದೇಶ ತನ್ನ ಭೌಗೋಳಿಕ, ಪ್ರಾದೇಶಿಕ, ಭಾಷಿಕ, ಸಾಂಸ್ಕøತಿಕ. ಧಾರ್ಮಿಕ ಮೊದಲಾದ ವೈವಿಧ್ಯತೆಗಳ ಕಾರಣವಾಗಿಯೆ ಜಗತ್ತಿನ ಕಣ್ಣಿಗೆ ವಿಶೇಷವಾಗಿದೆ. ಈ ವಿಶೇಷ ವೈವಿಧ್ಯತೆಗಳ ಜೊತೆಗೆ ನಮ್ಮಲ್ಲಿ ರೂಢಿಗೊಂಡ ಚಾತುರ್ವರ್ಣ, ಜಾತಿಪದ್ಧತಿ, ಅಸ್ಪøಶ್ಯತೆ, ಲಿಂಗತಾರತಮ್ಯ, ವರ್ಗ ಅಸಮಾನತೆಗಳು ಜನರನ್ನು ಶ್ರೇಣೀಕರಿಸಿ, ಕೆಲವರಿಗೆ ಸುಖಸಂಮೃದ್ಧಿಯನ್ನು, ಹಲವರಿಗೆ ದುಃಖದುಮ್ಮಾನಗಳನ್ನೂ ನೀಡುತ್ತ ಬಂದದ್ದೂ ಇದೆ. ಅದರಲ್ಲೂ ಶಿಕ್ಷಣ, ಭೂಮಿ ಒಡೆತನ, ಸಂಪತ್ತು ಹಾಗೂ ಅಧಿಕಾರ ಕೆಲವರಿಗಷ್ಟೇ ಮೀಸಲಾಗಿತ್ತು. ಇಂಥ ಅಮಾನವೀಯ, ಅಸಮಾನತೆಯ ತಾರತಮ್ಯಗಳನ್ನು ಧರ್ಮ, ದೇವರು, ಸಂಸ್ಕøತಿ, ಸಂಪ್ರದಾಯ, ನಂಬಿಕೆ, ಶಾಸ್ತ್ರಗ್ರಂಥಗಳ ಪ್ರಮಾಣದ ನಂಬಿಕೆಯಲ್ಲಿ ಶತಶತಮಾನಗಳಿಂದ ಸಮರ್ಥಿಸುತ್ತ ಬಂದದ್ದು ಮಾತ್ರ ದುರಂತ.
ಬೇರೆ ಬೇರೆ ಕಾಲಘಟ್ಟಗಳಲ್ಲಿ ಸಮಾಜ ಸುಧಾರಕರು ಮಾತ್ರವಲ್ಲದೆ ಇಂಥ ಅಸಮಾನತೆಗಳನ್ನು ಕಾಲಕಾಲಕ್ಕೆ ಬೌದ್ಧ, ಜೈನ, ಲಿಂಗಾಯತ, ಸಿಖ್ ಧರ್ಮಗಳು ಹಾಗೂ ಪ್ರಗತಿಪರ ಹಿಂದೂಗಳು ಮತ್ತು ಹಲವಾರು ಮತಪಂಥಗಳು ವಿರೋಧಿಸಿ ಸಮಾನತಾ ಸಂಸ್ಕøತಿಯನ್ನು ಜನರಲ್ಲಿ ಬಿತ್ತುತ್ತಾ ಬಂದವು. ಆದರೂ ಜಾತಿ, ಅಸ್ಪøಶ್ಯತೆ, ಲಿಂಗತಾರತಮ್ಯ, ವರ್ಗ ಅಸಮಾನತೆಗಳು ಉಳಿದು ಬಂದವು.
ಅಸಂಖ್ಯಾತ ಜನರ ತ್ಯಾಗ, ಬಲಿದಾನದ ಮೂಲಕ ಆಗಸ್ಟ್ 15, 1947ರಂದು ಭಾರತಕ್ಕೆ ಸ್ವಾತಂತ್ರ್ಯ ದೊರೆಯಿತು. ಸ್ವಾತಂತ್ರ್ಯ ಭಾರತದ ಆಡಳಿತ ವ್ಯವಸ್ಥೆ ಹಾಗೂ ಜನತೆಯ ಬದುಕು ಪ್ರಜಾಸತ್ತಾತ್ಮಕವಾಗಿ ಹೇಗಿರಬೇಕೆಂಬ ಮಹಾನ್ ಕನಸು ರೂಪುಗೊಂಡದ್ದು ಭಾರತದ ಸಂವಿಧಾನದ ಮೂಲಕ. ಸ್ವತಂತ್ರ ಭಾರತದ ವಿಸ್ಮಯವೆಂದರೆ ಸಾಮಾಜಿಕ ಸ್ವಾತಂತ್ರ್ಯದ ಬಗೆಗೆ ಧ್ವನಿ ಎತ್ತಿದ ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಭೆಯ ಅಧ್ಯಕ್ಷರಾದುದು. “ಯಾವುದೇ ರಕ್ತಪಾತವಿಲ್ಲದೆ ಜನರ ಸಾಮಾಜಿಕ ಮತ್ತು ಆರ್ಥಿಕ ಬದುಕಿನಲ್ಲಿ ಕ್ರಾಂತಿಕಾರಿ ಬದಲಾವಣೆ ತರುವುದೇ ನಿಜವಾದ ಪ್ರಜಾಪ್ರಭುತ್ವ” ಎಂದೂ “ಪ್ರಜಾಪ್ರಭುತ್ವ ಕೇವಲ ಆಡಳಿತ ವಿಧಾನವಲ್ಲ, ಜೀವನ ವಿಧಾನವಾಗಿರಬೇಕು” ಎಂದೂ ಪ್ರತಿಪಾದಿಸುತ್ತಿದ್ದ ಅಂಬೇಡ್ಕರ್ ತಮಗೆ ದಕ್ಕಿದ ಈ ರಾಷ್ಟ್ರನಿರ್ಮಾಣದ ಅವಕಾಶವನ್ನು ಸಮರ್ಥವಾಗಿ ನಿಭಾಯಿಸಿದರು.
Constitution of India – ಭಾರತದ ಸಂವಿಧಾನ ಆರಂಭವಾಗುವುದು ತಿe (ನಾವು) ಎನ್ನುವ ಪದದೊಡನೆ. ಈ ಪದಕ್ಕೆ ಭಾರತದ ಚರಿತ್ರೆಯಲ್ಲಿ ವಿಶೇಷವಾದ ಮಹತ್ವವಿದೆ. ಯಾಕೆಂದರೆ ಇಡೀ ದೇಶದಾದ್ಯಂತ ಪ್ರಾದೇಶಿಕವಾಗಿ, ಸಂಸ್ಥಾನಗಳಾಗಿ, ಜಾತಿಗಳಾಗಿ, ವರ್ಗಗಳಾಗಿ, ಮತಧರ್ಮಗಳಾಗಿ, ಇನ್ನೂ ಮೊದಲಾಗಿ ಚೂರುಚೂರಾಗಿದ್ದ ಜನತೆಯನ್ನು ‘ನಾವು’ ಎಂಬ ಏಕಪ್ರಜ್ಞೆ ಮೂಡಿಸಿದ್ದು ಸಂವಿಧಾನ. ಇದರಲ್ಲಿ ಭಾರತೀಯರೆಲ್ಲರನ್ನೂ ಒಳಗೊಳ್ಳುವ ವೈಶಾಲ್ಯತೆ ಇದೆ.
ದಿನಾಂಕ 26 ನವೆಂಬರ್ 1949ರಂದು ಸಂವಿಧಾನ ರಚನಾ ಸಭೆಯಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರು ಹೇಳಿದ ಎಚ್ಚರಿಕೆಯ ಮಾತುಗಳನ್ನು ನಾವು ಮತ್ತೆ ಮತ್ತೆ ಆಲಿಸಿ, ಹೆಜ್ಜೆ ಇಡಬೇಕಾಗಿದೆ. ಆ ಮಾತು ಹೀಗಿದೆ; “ಚರಿತ್ರೆ ಮತ್ತೆ ಮರುಕಳಿಸುತ್ತದೆಯೇ? ಈ ಯೋಚನೆ ನನ್ನಲ್ಲಿ ಆತಂಕ ಮೂಡಿಸುತ್ತದೆ. ನಮಗೆ ಈಗಾಗಲೆ ಇದ್ದ ಹಳೆಯ ಶತೃಗಳಾದ ಜಾತಿ, ಧರ್ಮಗಳ ಜೊತೆಗೆ ವಿಭಿನ್ನ ಮತ್ತು ವಿರೋಧಿ ರಾಜಕೀಯ ಸಿದ್ಧಾಂತಗಳ ಹಲವು ರಾಜಕೀಯ ಪಕ್ಷಗಳೂ ಸೇರಿಕೊಳ್ಳುತ್ತವೆ. ಈ ವಾಸ್ತವ ಅರಿವಾದ ಕೂಡಲೆ ನನ್ನ ಆತಂಕ ಇನ್ನೂ ತೀವ್ರವಾಗುತ್ತದೆ. ಭಾರತೀಯರು ದೇಶವನ್ನು ತಮ್ಮ ಮತಧರ್ಮಗಳಿಗಿಂತ ಮುಖ್ಯವೆಂದು ಭಾವಿಸುತ್ತಾರೆಯೇ ಅಥವಾ ಅವರಿಗೆ ತಮ್ಮ ದೇಶಕ್ಕಿಂತ ತಮ್ಮ ಮತಧರ್ಮಗಳೇ ಹೆಚ್ಚು ಮುಖ್ಯವಾಗುತ್ತದೋ? ನನಗೆ ಗೊತ್ತಾಗುತ್ತಿಲ್ಲ.
ಆದರೆ ಇಷ್ಟಂತೂ ಖಚಿತ, ರಾಜಕೀಯ ಪಕ್ಷಗಳು ಜಾತಿಧರ್ಮವನ್ನೇ ದೇಶಕ್ಕಿಂತ ಮುಖ್ಯ ಎಂದು ಭಾವಿಸಿದರೆ ನಮ್ಮ ಸ್ವಾತಂತ್ರ್ಯಕ್ಕೆ ಎರಡನೆ ಬಾರಿ ಗಂಡಾಂತರ ಬಂದಂತೆ. ಹಾಗೇನಾದರೂ ಆದರೆ ಬಹುಶಃ ಸ್ವಾತಂತ್ರ್ಯ ಅನ್ನುವುದು ನಮಗೆ ಮತ್ತೆ ಸಿಗುವುದಿಲ್ಲ. ಅದನ್ನು ಶಾಶ್ವತವಾಗಿ ಕಳೆದುಕೊಂಡು ಬಿಡುತ್ತೇವೆ. ಇದರ ವಿರುದ್ಧ ನಾವೆಲ್ಲರೂ ಅಚಲವಾಗಿ ನಿಲ್ಲಬೇಕು. ನಮ್ಮಲ್ಲಿ ಕೊನೆಯ ಹನಿ ರಕ್ತ ಇರುವವರೆಗೂ ನಮ್ಮ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ದೃಢಸಂಕಲ್ಪ ಮಾಡಬೇಕು”
ರಾಷ್ಟ್ರಪ್ರೇಮಿ ಅಂಬೇಡ್ಕರ್ ಅವರ ಈ ಆತಂಕದ ಮಾತುಗಳನ್ನು ಅಂತರ್ಗತ ಮಾಡಿಕೊಳ್ಳುವ ಮೂಲಕ ನಾವು ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ನೇತೃತ್ವದಲ್ಲಿ, ಸಚಿವ ಡಾ ಹೆಚ್ ಸಿ ಮಹದೇವಪ್ಪನವರ ದೂರದೃಷ್ಟಿಯಿಂದ ರಾಜ್ಯದ ಎಲ್ಲಾ ಪಂಚಾಯಿತಿ ಮಟ್ಟದಲ್ಲಿ ಆರಂಭಗೊಂಡಿರುವ ಸಂವಿಧಾನ ಜಾಗೃತಿ ಜಾಥಾ ಎಂಬುದು ಚಳುವಳಿಯ ರೂಪ ಪಡೆದು ಸಂವಿಧಾನ ಅರಿವು ಎಲ್ಲೆಡೆ ಹಬ್ಬಲಿ ಎಂದು ಆಶಿಸುತ್ತೇನೆ.

-ಡಾ. ಎಸ್. ನರೇಂದ್ರಕುಮಾರ್

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shakahari Film ಶಾಖಾಹಾರಿ ಚಿತ್ರಕ್ಕೆ ಕಾನೂನು ಜಯ

Shakahari Film ಶಿವಮೊಗ್ಗದ ಕೀಳಂಬಿ ಮೀಡಿಯಾ ಲ್ಯಾಬ್ ನಿರ್ಮಿಸಿದ್ದ ಶಾಖಾಹಾರಿ...

Mahatma Gandhi ರಾಜ್ಯಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆ, ಫಲಿತಾಂಶ ಪ್ರಕಟ

Mahatma Gandhi ರಾಷ್ಟ್ರಪಿತ ,ಮಹಾತ್ಮ ಗಾಂಧೀಜಿಯವರ 155 ನೇ ಜಯಂತಿ ಅಂಗವಾಗಿ...

Yaduveer Wadiyar ಶಿವಮೊಗ್ಗ ಹಬ್ಬ ಯಶಸ್ವಿಗೊಳಿಸಿ- ಸಂಸದ ಯದುವೀರ್

Yaduveer Wadiyar ಪ್ರವಾಸೋದ್ಯಮ ಹಾಗೂ ಜಿಲ್ಲೆಯ ಉದ್ಯಮಿಗಳ ಪ್ರೋತ್ಸಾಹಿಸುವ ದೃಷ್ಟಿಯಿಂದ...

Shivamogga Cycle Club ಸೈಕಲ್ ಅಭ್ಯಾಸವು ಜನಸಾಮಾನ್ಯರ ವ್ಯಾಯಾಮಶಾಲೆ- ಎನ್.ಗೋಪಿನಾಥ್

Shivamogga Cycle Club ಸೈಕಲ್ ಅಭ್ಯಾಸ ಮಾಡುವುದರಿಂದ ಹೃದಯ ಸಂಬಂಧಿ...