Constitution of India ಭಾರತ ಸಂವಿಧಾನ ವಿಶ್ವದ ಶ್ರೇಷ್ಠ ಸಂವಿಧಾನಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು ಸಂವಿಧಾನ ನಮಗೆ ನೀಡಿರುವ ಮೂಲಭೂತ ಹಕ್ಕುಗಳು ಶ್ರೀ ರಕ್ಷೆಯಂತಿವೆ. ಆದರೆ ಭಾರತೀಯರಾದ ನಾವು ಪಾಲಿಸಬೇಕಾದ ಮೂಲಭೂತ ಕರ್ತವ್ಯಗಳನ್ನು ಕೂಡ ಮರೆಯಬಾರದು, ಅವುಗಳನ್ನು ಪಾಲಿಸುವುದು ಇಂದಿನ ದಿನಮಾನದಲ್ಲಿ ಅತಿ ಅವಶ್ಯಕವಾಗಿದೆ.
ಸಂವಿಧಾನಕ್ಕೆ 42 ನೇ ತಿದ್ದುಪಡಿ ಮಾಡುವ ಮೂಲಕ 1976 ರ ಕಾಯಿದೆ ಜಾರಿಗೆ ತಂದು ನಾಗರಿಕರ ಮೂಲಭೂತ ಕರ್ತವ್ಯಗಳನ್ನು ಪಟ್ಟಿ ಮಾಡಲಾಗಿದೆ.
ಸಂವಿಧಾನದ ವಿಧಿ 51 ‘ಎ’ ರಲ್ಲಿ ಮೂಲಭೂತ ಕರ್ತವ್ಯಗಳನ್ನು ಅಳವಡಿಸಲಾಗಿದ್ದು ಭಾರತದಲ್ಲಿ ಜನವರಿ 6 ರಂದು “ಮೂಲಭೂತ ಕರ್ತವ್ಯಗಳ ದಿನ” ಎಂದು ಆಚರಿಸಲಾಗುತ್ತದೆ.
ಈ ಮೂಲಭೂತ ಕರ್ತವ್ಯಗಳು ಮುಖ್ಯವಾಗಿ ಸೋವಿಯತ್ ಒಕ್ಕೂಟದ ದೇಶದಿಂದ ಎರವಲು ಪಡೆಲಾಗಿದೆ. ಭಾರತದ ಸಂವಿಧಾನದಲ್ಲಿ ಒಟ್ಟು 11 ಅಗತ್ಯ ಕರ್ತವ್ಯಗಳು ಇದ್ದು ಪ್ರತಿಯೊಬ್ಬ ಭಾರತೀಯರು ಇದನ್ನು ಪಾಲಿಸಬೇಕಾಗಿದೆ.
ಮೂಲಭೂತ ಕರ್ತವ್ಯಗಳು:
1.ಸಂವಿಧಾನಕ್ಕೆ ಬದ್ಧರಾಗಿ ಮತ್ತು ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಗೌರವಿಸಿ
2 ಸ್ವಾತಂತ್ರ್ಯ ಹೋರಾಟದ ಆದರ್ಶಗಳನ್ನು ಅನುಸರಿಸಿ
3 ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ರಕ್ಷಿಸಿ
4.ದೇಶವನ್ನು ರಕ್ಷಿಸಿ ಮತ್ತು ಕರೆ ಮಾಡಿದಾಗ ರಾಷ್ಟ್ರೀಯ ಸೇವೆಗಳನ್ನು ಸಲ್ಲಿಸಿ
- ಸಾಮಾನ್ಯ ಸಹೋದರತ್ವದ ಮನೋಭಾವವನ್ನು ಅಭಿವೃದ್ಧಿಪಡಿಸುವುದು
6.ದೇಶದ ಸಂಯೋಜಿತ ಸಂಸ್ಕøತಿಯನ್ನು ಉಳಿಸಿ
7.ನೈಸರ್ಗಿಕ ಪರಿಸರವನ್ನು ಉಳಿಸಿ
8.ವೈಜ್ಞಾನಿಕ ಮನೋಭಾವ ಮತ್ತು ಮಾನವೀಯತೆಯನ್ನು ಬೆಳೆಸಿಕೊಳ್ಳಿ
9.ಸಾರ್ವಜನಿಕ ಆಸ್ತಿಯನ್ನು ರಕ್ಷಿಸಿ ಮತ್ತು ಹಿಂಸೆಯನ್ನು ತಪ್ಪಿಸಿ
10.ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಶ್ರೇಷ್ಠತೆಗಾಗಿ ಶ್ರಮಿಸಿ. - 6 ರಿಂದ 14 ವರ್ಷ ವಯಸ್ಸಿನ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಎಲ್ಲಾ ಪೋಷಕರು/ಪೆÇೀಷಕರ ಕರ್ತವ್ಯ.
ಮೂಲಭೂತ ಕರ್ತವ್ಯಗಳ ರಚನೆಯ ಮೂಲ ಉದ್ದೇಶವೆಂದರೆ, ಪ್ರತಿಯೊಬ್ಬ ನಾಗರೀಕನು ಮೊದಲು ದೇಶವನ್ನು ರಕ್ಷಿಸುವುದು ಮತ್ತು ರಾಷ್ಟ್ರದ ಸಾಮರಸ್ಯವನ್ನು ಉತ್ತೇಜಿಸುವುದು ಎಂದು ಅರಿತುಕೊಳ್ಳಬೇಕು. ರಾಷ್ಟ್ರೀಯ ಹಿತಾಸಕ್ತಿ ಇಟ್ಟುಕೊಳ್ಳಬೇಕು ಎನ್ನುವುದಾಗಿದೆ.
Constitution of India ಮೂಲಭೂತ ಕರ್ತವ್ಯಗಳಲ್ಲಿ ಸಂವಿಧಾನವನ್ನು ಪಾಲಿಸುವುದು, ನಮ್ಮ ರಾಷ್ಟ್ರ ಧ್ವಜವನ್ನು ಗೌರವಿಸುವುದು, ರಾಷ್ಟ್ರಗೀತೆಗೆ ಗೌರವಿಸಿ ಗೌರವದ ಭಾವನೆಯನ್ನು ಇಟ್ಟುಕೊಳ್ಳುವುದು ಮತ್ತು ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವುದು ಬಹು ಮುಖ್ಯವಾಗಿದೆ.
ಪ್ರತಿಯೊಬ್ಬ ಭಾರತೀಯ ನಾಗರೀಕರು ಮೊದಲು ದೇಶ ನಮಗೇನು ಮಾಡಿದೆ ಎನ್ನುವುದಕ್ಕಿಂತ ನಾವು ದೇಶಕ್ಕಾಗಿ ಏನೂ ಮಾಡಿದ್ದೇವೆ ಎಂದು ಅರಿತು ಸಂವಿಧಾನದ ಮೂಲ ಆಶಯವನ್ನು ಉಳಿಸುವ ನಿಟ್ಟಿನಲ್ಲಿ ಮೊದಲು ಕರ್ತವ್ಯ ನಿರತರಾಗಬೇಕಾಗಿದೆ.
ವಿಶೇಷ ಲೇಖನ -ರಘು ಆರ್, ಅಪ್ರೆಂಟಿಸ್
ವಾರ್ತಾ ಇಲಾಖೆ, ಶಿವಮೊಗ್ಗ
