Dr. K. Sundar Gowda ದೇಶ ಹಾಗೂ ರಾಜ್ಯ ಸರ್ಕಾರಗಳು ಯಾವುದೇ ನಿಯಂತ್ರಣವಿಲ್ಲದೇ ಜನ ಸಾಮಾನ್ಯರ ಮೇಲೆ ಸಾಲದ ಹೊರೆ ಏರಿಸುತ್ತಿರುವುದು ಪ್ರಜಾಪ್ರಭುತ್ವ ಶಕ್ತಿಗೆ ದೊಡ್ಡ ಮಾರಕವಾಗಿದೆ ಎಂದು ಎಎಪಿ ಜಿಲ್ಲಾ ಮಾಧ್ಯಮ ಪ್ರತಿನಿಧಿ ಡಾ.ಕೆ.ಸುಂದರಗೌಡ ಹೇಳಿದ್ದಾರೆ.
ಈ ಕುರಿತು ಸೋಮವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ ಅವರು ರಾಜ್ಯದ ಬಜೆಟ್ 3.71 ಲಕ್ಷ ಕೋಟಿ ಮಂಡಿಸಲಾಗಿದೆ. ಇದರಲ್ಲಿ 2.96ಲಕ್ಷ ಕೋಟಿ ರಾಜ್ಯದ ನಿರ್ವಹಣೆ ಮತ್ತು ಮಾಡಿದ ಸಾಲದ ಬಡ್ಡಿಗಾಗಿ ಮೀಸ ಲಿಸಿದೆ. 25ಸಾವಿರ ಕೋಟಿ ಸಾಲದ ಕಂತನ್ನು ಕಟ್ಟಬೇಕಾಗಿದೆ. ಉಳಿದ 51 ಸಾವಿರ ಕೋಟಿಯಲ್ಲಿ 7ನೇ ವೇತನ ಆಯೋಗವನ್ನು ಕಾರ್ಯಕತಗೊಳಿಸಿದರೆ ಉಳಿದ 25 ಸಾವಿರ ಕೋಟಿಯಲ್ಲಿ ರಾಜ್ಯದ ಅಭಿವೃದ್ದಿ ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ಇಡೀ ರಾಜ್ಯವನ್ನು ಕೇವಲ 25 ಸಾವಿರ ಕೋಟಿ ಅಭಿವೃದ್ದಿಯಿಂದ ಮುನ್ನಡೆಬೇಕಾಗಿರುವುದು ರಾಜ್ಯದ ಆರ್ಥಿಕ ದುಸ್ಥಿತಿ. ಇದರಿಂದಾಗಿ ಮುಂದಿನ ಜನಾಂಗಕ್ಕೆ ಸಾಲದ ಸುಳಿಯಲ್ಲಿ ಸಿಲುಕಿಸಿ ಕೂರಿಸುವುದೇ ರಾಜ್ಯ ಸರ್ಕಾ ರದ ಅಭಿವೃಧ್ದಿ ಗ್ಯಾರಂಟಿಗಳಾಗಿವೆ ಎಂದು ದೂರಿದ್ದಾರೆ.
ಕಳೆದ ಸ್ವಾತಂತ್ರ್ಯ ಪೂರ್ವದಿಂದಲೂ ಬಹುತೇಕ ಎಲ್ಲಾ ರಾಷ್ಟ್ರೀಯ ಪಕ್ಷಗಳು ದೇಶವನ್ನು ಸಾಲವಂತರ ನ್ನಾಗಿ ಬೆಳೆಸಿರುವುದು ವಿನಾಶಕಾರಿ ಬೆಳವಣಿಗೆ. ದೇಶದ ಏಕತೆಯನ್ನು ಹಾಗೂ ಅಹಿಂಸಾ ತತ್ವವನ್ನು ಬೆಳೆಸಬೇಕಾದ ರಾಷ್ಟ್ರೀಯ ಪಕ್ಷಗಳು ಗಾಂಧಿಯ ಕನಸನ್ನು ನುಚ್ಚುನೂರು ಮಾಡಿ ಪ್ರಜಾಪ್ರಭುತ್ವಕ್ಕೆ ನೀಡಿರುವುದು ಬಹು ದೊಡ್ಡ ಕೊಡುಗೆ ಎಂದಿದ್ದಾರೆ.
Dr. K. Sundar Gowda ರೈತರ ಬೇಡಿಕೆಗಳನ್ನು ನಿವಾರಣೆ ಮಾಡುವ ಬದಲು ಚಳುವಳಿಯನ್ನೆ ಹತ್ತಿಕ್ಕುವ ಧೋರಣೆಯನ್ನು ಕೇಂದ್ರ ಸರ್ಕಾರ ಕೈಗೆತ್ತಿಕೊಂಡಿದೆ. ರೈತರ ಶ್ರಮಜೀವನದಿಂದ ದೇಶವನ್ನು ಬೆಳೆಸಬೇಕಾದವರು ಹತ್ತಿಕ್ಕುವ ಮನೋಭಾವನೆ ಯನ್ನು ಬೆಳೆಸಿ ದೇಶದ ಏಕತೆ ಮತ್ತು ಭದ್ರತೆಗೆ ಒಡ್ಡಿರುವ ಮಹಾದುರಂತವಾಗಿದ್ದು ಯುವಕರು ಅರಿವು ಮೂಡಿಸಿ ಕೊಂಡು ಎಚ್ಚೆತ್ತುಕೊಳ್ಳಬೇಕಿದೆ ಎಂದು ಹೇಳಿದ್ದಾರೆ.