Chhatrapati Shivaji Maharaj ಶಿವಾಜಿ ಮಹಾರಾಜರ ಜೀವನ ಚರಿತ್ರೆಯನ್ನು ಮಕ್ಕಳಿಗೆ ಬಾಲ್ಯದಿಂದಲೇ ತಿಳಿಸುವ ಮುಖಾಂತರ ಆದರ್ಶಗಳನ್ನು ಮೈಗೂಡಿಸಿಕೊಳ್ಳಲು ಪಾಲಕರು ಪ್ರೇರೇಪಿಸಬೇಕು ಎಂದು ವಂದೇ ಮಾ ತರಂ ಟ್ರಸ್ಟ್ ಅಧ್ಯಕ್ಷ ಪ್ರೀತೇಶ್ ಹೇಳಿದರು.
ಚಿಕ್ಕಮಗಳೂರುನಗರದ ಬಸವನಹಳ್ಳಿ ಸಮೀಪ ಶಂಕರಮಠದಲ್ಲಿ ಹಿಂದೂ ಹೃದಯ ಸಾಮ್ರಾಟ್ ಶಿವಾಜಿ ಮಹಾರಾಜರ 394ನೇ ಜನ್ಮದಿನಾಚರಣೆ ಅಂಗವಾಗಿ ಭಾನುವಾರ ಸಂಜೆ ಪುಟಾಣಿ ಮಕ್ಕಳಿಗೆ ಹಿಂದುತ್ವ ಎಂಬ ಆಟಿಕೆಯ ಕಾರ್ಯಕ್ರಮ ಆಯೋಜಿಸಿ ಮಾತನಾಡಿದ ಅವರು ಭಾರತೀಯ ಸಂಸ್ಕೃತಿಗಾಗಿ ಹೋರಾಡಿದವರನ್ನು ಇಂದಿನ ಯುವಪೀಳಿಗೆ ಸ್ಮರಿಸಬೇಕು ಎಂದು ತಿಳಿಸಿದರು.
ಶಿವಾಜಿ ಬದುಕಿನ ಚರಿತ್ರೆಯ ಹಾಗೂ ಆದರ್ಶಗಳನ್ನು ಅನುಸರಿಸುವ ಮಕ್ಕಳು ಮಾತೃ ಭೂಮಿ ಭಕ್ತರಾಗುತ್ತಾರೆ. ಶಿವಾಜಿಯಂತೆ ಧರ್ಮ ರಕ್ಷಣೆ ಮಾಡುವ ಗುಣವನ್ನು ಚಿಕ್ಕ ವಯಸ್ಸಿನಲ್ಲೇ ಬೆಳೆಸಿಕೊಳ್ಳಬೇಕು, ಹಿರಿಯರಿಗೆ ಗೌರವ ಕೊಡುವುದು,ಮ ಸಂಸ್ಕೃತಿ ಪಾಲಿಸುವುದು ಮಾಡಿದರೆ ಮಾತ್ರ ಶಿವಾಜಿ ಮಹಾರಾಜರಿಗೆ ನೀಡುವ ದೊಡ್ಡ ಗೌರವ ಎಂದರು.
ಶಿವಾಜಿ ಭಾರತ ಚರಿತ್ರೆಯನ್ನು ಬದಲಾಯಿಸಿದ ಯುಗ ಪುರುಷ ಹಾಗೂ ಪ್ರೇರಣಾ ಶಕ್ತಿ. ದೇಶವನ್ನು ಗುಲಾಮಗಿರಿಗೆ ಒಡ್ಡುವ ಸಂದರ್ಭದಲ್ಲಿ ಪ್ರಬಲ ತಡೆ ಒಡ್ಡಿ ನಮ್ಮ ಸಂಸ್ಕೃತಿ, ಪರಂಪರೆಯನ್ನು ಉಳಿಸಿ, ಮರುಸ್ಥಾಪಿಸಿದವರು.
ಎಲ್ಲಾ ಭಾಷಿಕರು ಹಾಗೂ ಸಮುದಾಯಗಳನ್ನು ಸಮನಾಗಿ ನೋಡುವ ಪರಂಪರೆ ಮೊದಲಿನಿಂದಲೂ ರೂಢಿಸಿಕೊಂಡಿದ್ದರು ಎಂದರು.
ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಪುಟಾಣಿ ಮಕ್ಕಳಿಗೆ ಹಿಂದುತ್ವ ಎಂಬ ಆಟಿಕೆಯ ಆಟವನ್ನು ಆಡಿಸಲಾಯಿತು. ಕು. ಶ್ರೇಯಾ ಶಿವಾಜಿ ಮಹಾರಾಜರ ಜೀವನ ಚರಿತ್ರೆ ಕುರಿತು ವಿವರಿಸಿದರು.
ಇದೇ ವೇಳೆ ಹಿಂದುತ್ವಕ್ಕಾಗಿ ಜಿಲ್ಲೆಯಲ್ಲಿ ಹೋರಾಡುತ್ತಿರುವ ಕಾಮಧೇನು ಗೋ ಶಾಲೆಯ ಲಕ್ಷ್ಮಣ್, ಕೀವ್ ರಾಮ್, ಸಂತೋಷ್ ಕೋಟ್ಯಾನ್, ತುಡುಕೂರು ಮಂಜು, ರಾಜು ಕಲ್ಲುದೊಡ್ಡಿ ಅವರಿಗೆ ಧರ್ಮ ಕಾರ್ಯ ಗುರುತಿಸಿ ಸನ್ಮಾನ ಮಾಡಲಾಯಿತು.
Chhatrapati Shivaji Maharaj ಈ ಸಂದರ್ಭದಲ್ಲಿ ಟ್ರಸ್ಟ್ನ ಮುಖಂಡರುಗಳಾದ ಸಂಜಿತ ಸುವರ್ಣ, ಇಂ ದಿರಾ, ಶಾರದಾ, ಚಂದ್ರಕಲಾ, ಮಹೇಶ್ ಮೇದಾರ್, ನೀತೇಶ್, ನವೀನ್ ಮತ್ತಿತರರು ಉಪಸ್ಥಿತರಿದ್ದರು.