Thursday, March 19, 2026
Thursday, March 19, 2026

Death News ಹಾಯ್ಹೊಳೆ ಗ್ರಾಮದ ಚೆಕ್ ಡ್ಯಾಂ ನಲ್ಲಿ ಯುವಕನ ಶವ ಪತ್ತೆ

Date:

Death News ಶಿವಮೊಗ್ಗ ತಾಲೂಕಿನ ಹಾಯ್ ಹೊಳೆ ಗ್ರಾಮದಲ್ಲಿರುವ ತುಂಗ ನದಿಗೆ ಕಟ್ಟಲಾಗಿರುವ ಚೆಕ್ ಡ್ಯಾಂನಲ್ಲಿ ಯುವಕನೋರ್ವನ ಶವವೊಂದು ಇಂದು ಪತ್ತೆಯಾಗಿದೆ.

ಮೂರು ದಿನಗಳ ಹಿಂದೆ ಕಾಣೆಯಾಗಿದ್ದ ಯುವಕ ಶವವಾಗಿ ಪತ್ತೆಯಾಗಿದ್ದಾನೆ.
ಮೊಹ್ಮದ್ ರಿಯಾಜ್ (18)ಫೆ.16 ರಂದು ಮನೆಬಿಟ್ಟು ಹೋಗಿದ್ದು ವಾಪಾಸಾಗಿರಲಿಲ್ಲ. ಈತ ಮೆಕಾನಿಕ್ ಕೆಲಸ ಮಾಡಿಕೊಂಡಿದ್ದ ನು.
ಸಾವಿಗೆ ಕೌಟುಂಬಿಕ ಸಮಸ್ಯೆ ಇರಬಹುದು ಎಂದು ಶಂಕಿಸಲಾಗುತ್ತಿದೆ. ಅಣ್ಣಾನಗರ ನಿವಾಸಿಯಾಗಿದ್ದ ಮೊಹ್ಮದ್ ರಿಯಾಜ್ ಯಾನೆ ಅರಾಫತ್ ಫೆ.16 ರಂದು ಶುಕ್ರವಾರ ಮಧ್ಯಾಹ್ನ ಊಟ ಮುಗಿಸಿಕೊಂಡು ಕೆಎ 14 ಇಸಿ 1707 ಬೈಕ್ ನ್ನ ತೆಗೆದುಕೊಂಡು ಮನೆ ಬಿಟ್ಟು ಹೋದವನು ವಾಪಾಸಾಗಿರಲಿಲ್ಲ.

Death News ಈ ಕುರಿತು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ನಿನ್ನೆ ಅವರ ತಂದೆ ಸಮೀರ್ ಪಾಶ ದೂರು ದಾಖಲಿಸಿದ್ದರು. ನಿನ್ನೆಯೇ ಈತನ ಬೈಕ್ ಹಾಯ್ ಹೊಳೆ ತುಂಗಾ ನದಿಯ ಚೆಕ್ ಡ್ಯಾಂ ಬಳಿ ಪತ್ತೆಯಾಗಿತ್ತು. ಇಂದು ಆತನ ಮೃತದೇಹ ನೀರಿನಲ್ಲಿ ತೇಲಿ ಬಂದಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa “ಸಹ್ಯಾದ್ರಿ ಉತ್ಸವ” ಕ್ಕೆ ಸರ್ಕಾರವು ಮತ್ತೆ ಚಾಲನೆ ನೀಡಲು ಒತ್ತಾಯಿಸುತ್ತೇನೆ- ಶಾಸಕ ಎಸ್.ಎನ್. ಚನ್ನಬಸಪ್ಪ

S.N. Channabasappa ಶಿವಮೊಗ್ಗ ಜಿಲ್ಲೆಯ ಸಮೃದ್ಧ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು...

Madhu Bangarappa ಎಸ್ಎಸ್ಎಲ್ ಸಿ ಪರೀಕ್ಷಾರ್ಥಿಗಳಿಗೆ ಶುಭ ಹಾರೈಸಿದ ಸಚಿವ ಮಧು ಬಂಗಾರಪ್ಪ

Madhu Bangarappa ರಾಜ್ಯಾದ್ಯಂತ ಇಂದಿನಿಂದ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1...

Jawahar Navodaya Vidyalaya ಕುಂದಗಸವಿಯ ಎಂ.ಎನ್.ಅಪೂರ್ವ ನವೋದಯ ವಿದ್ಯಾಲಯಕ್ಕೆ ಆಯ್ಕೆ

Jawahar Navodaya Vidyalaya ಜವಾಹರ ನವೋದಯ ವಿದ್ಯಾಲಯ ನಡೆಸುವ ಪ್ರಸಕ್ತ ಸಾಲಿನ...