Yoga & Research Foundation ರಥಸಪ್ತಮಿ ಪ್ರಯುಕ್ತ ಕಣಾದ ಯೋಗ & ರಿಸರ್ಚ್ ಫೌಂಡೇಷನ್ ಮತ್ತು ಯುವಸಬಲೀಕರಣ & ಕ್ರೀಡಾ ಇಲಾಖೆಯ ಸಹಯೋಗದೊಂದಿಗೆ ನೆಹರು ಕ್ರೀಡಾಂಗಣದ ಯೋಗಮಂದಿರದಲ್ಲಿ ಬೆಳಿಗ್ಗೆ 6 ರಿಂದ 7•30 ರವರೆಗೆ ಹಮ್ಮಿಕೊಂಡಿದ್ದ 108 ಯೋಗಬಂಧುಗಳಿಂದ 108 ಸೂರ್ಯನಮಸ್ಕಾರಗಳ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.ಅರ್ಚಕ ಪವನ್ ರವರಿಂದ ವಿಧಿವತ್ತಾದ ಗಣೇಶನ ಪೂಜೆ, ಸೂರ್ಯನ ಆವಾಹನಾ ಪೂಜಾ ವಿಧಾನಗಳೊಂದಿಗೆ ಆರಂಭಗೊಂಡ ಪೂಜಾ ಕಾರ್ಯಕ್ರಮದಲ್ಲಿ ಅಗರದಹಳ್ಳಿ ನಾಗರಾಜ್ ದಂಪತಿಗಳು ಪೂಜೆಯಲ್ಲಿ ಪಾಲ್ಗೊಂಡರು.
ಡಾ. ವರದರಾಜ್ ರವರಿಂದ ಸೂರ್ಯನ 108 ಮಂತ್ರಗಳ ಪಠನೆ, ಶಾಸ್ತ್ರೋಕ್ತ, ಬೀಜಾಕ್ಷರ ಮಂತ್ರ ಪಠನೆಗಳೊಂದಿಗೆ 108 ಸೂರ್ಯನಮಸ್ಕಾರಗಳನ್ನು 50 ನಿಮಿಷಗಳಲ್ಲಿ ಮಾಡಲಾಯಿತು.
ವಿದ್ಯಾರ್ಥಿಗಳು, ಕ್ರೀಡಾಪಟುಗಳು, ಸಾರ್ವಜನಿಕರು ಸೇರಿದಂತೆ ಹಲವಾರು ಜನರು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಯೋಗಾಚಾರ್ಯ ಅನಿಲ್ ಕುಮಾರ್. ಹೆಚ್.ಶೆಟ್ಟರ್ ರವರ ಮಾರ್ಗದರ್ಶನದಲ್ಲಿ 108 ಸೂರ್ಯನಮಸ್ಕಾರಗಳ ಅಭ್ಯಾಸ ನೆರವೇರಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು,12 ಸೂರ್ಯನಮಸ್ಕಾರಗಳನ್ನು ಮಾಡುವ ಮೂಲಕ ಉದ್ಘಾಟಿಸಿ, ಶುಭಹಾರೈಸಿ108 ಸೂರ್ಯನಮಸ್ಕಾರಗಳ ಅಭ್ಯಾಸಕ್ಕೆ ಚಾಲನೆ ನೀಡಿದ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮಂಜುನಾಥ್ ಸ್ವಾಮಿಯವರನ್ನು ಕಣಾದ ಯೋಗ ಕೇಂದ್ರದ ಅದ್ಯಕ್ಷರಾದ ಬೆಲಗೂರು ಮಂಜುನಾಥ್ ರವರು ಸನ್ಮಾನಿಸಿದರು.
Yoga & Research Foundation ಹಿರಿಯರಾದ ರಾಮಪ್ಪ ಮತ್ತು ಚಂದ್ರಾನಾಯ್ಕರವರು ನೆನಪಿನ ಕಾಣಿಕೆಯನ್ನು ನೀಡಿದರು.ರಾಷ್ಟ್ರೀಯ ಶಿಕ್ಷಣ ಸಮಿತಿಯ ಟಿ.ಎಸ್.ಅಶ್ವತ್ಥ ನಾರಾಯಣ ಶೆಟ್ಟಿ, ತುಂಗಾ ಉಳಿಸಿ ಅಭಿಯಾನದ ತ್ಯಾಗರಾಜ್ ಮಿತ್ಯಾಂತ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.