Thursday, March 19, 2026
Thursday, March 19, 2026

Shaakhahari Movie ಶಿವಮೊಗ್ಗ ಪ್ರತಿಭೆಗಳ ಸಿನಿಮಾ” ಶಾಖಾಹಾರಿ”-ಫೆ.16 ರಂದು ಬೆಳ್ಳಿಪರದೆಗೆ

Date:

Shaakhahari Movie ಕೀಳಂಬಿ ವಿಡಿಯೋ ಲ್ಯಾಬ್ ಪ್ರೈವೇಟ್ ಲಿಮಿಟೆಡ್ ನಿರ್ಮಾಣ ಮಾಡಿರುವ ಮಲೆನಾಡಿನ ಹೊಚ್ಚ ಹೊಸ ಚಲನಚಿತ್ರ ಶಾಖಾಹಾರಿ ಸಿನಿಮಾವು ಇದೇ ತಿಂಗಳ ಫೆಬ್ರವರಿ 16ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ.

ಈ ಕುರಿತು ಶಿವಮೊಗ್ಗದ ಶುಭಂ ಹೋಟೆಲ್ ನಲ್ಲಿ ಚಿತ್ರ ತಂಡವು ಪತ್ರಿಕಾಗೋಷ್ಠಿ ನಡೆಸಿತು.

ಸಿನಿಮಾವು ತೀರ್ಥಹಳ್ಳಿಯ ಸುತ್ತಮುತ್ತಲಿನ ಭಾಗದಲ್ಲಿ ಚಿತ್ರಿಕರಣಗೊಂಡಿದೆ. ಹೊಸ ಪ್ರತಿಭೆಗಳು ನಮ್ಮ ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿದ್ದಾರೆ.

ಸಿನಿಮಾವನ್ನು ನಿರ್ಮಾಪಕರಾಗಿ ಪ್ರೇಕ್ಷಕನಾಗಿ ನೋಡುವುದಾದರೆ, ಸಿನಿಮಾವು ಅದ್ಭುತವಾಗಿದೆ. ಸಿನಿಮಾದ ಟ್ರೈಲರ್ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಸಿನಿಮಾ ನನ್ನ ನಿರೀಕ್ಷೆಗಿಂತ ಹೆಚ್ಚಾಗಿಯೇ ಮೂಡಿಬಂದಿದೆ. ಫೆಬ್ರವರಿ 16ರಂದು ರಾಜ್ಯಾದ್ಯಂತ ಶಾಖಾಹಾರಿ ಸಿನಿಮಾ ತೆರೆಯ ಮೇಲೆ ಕಾಣಲಿದೆ. ದಯಮಾಡಿ ಎಲ್ಲರೂ ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡಿ ಚಿತ್ರ ತಂಡವನ್ನು ಪ್ರೋತ್ಸಾಹಿಸಿ ಎಂದು ಶಾಖಾಹಾರಿ ಸಿನಿಮಾದ ನಿರ್ಮಾಪಕರಾದ ರಾಜೇಶ್ ಕೀಳಂಬಿ ಅವರು ಹೇಳಿದರು.

Shaakhahari Movie ಶಾಖಾಹಾರಿ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ಗೋಪಾಲ್ ಕೃಷ್ಣ ದೇಶಪಾಂಡೆ ಅವರು ಮಾತನಾಡಿ, ಸಿನಿಮಾದ ಪ್ರಮುಖ ಪಾತ್ರಧಾರಿಯಾದ ರಂಗಾಯಣ ರಘು ಅವರ ಜೊತೆಗೆ ಮೊದಲ ಬಾರಿಗೆ ನಾನು ಅಭಿನಯಿಸಿದ್ದೇನೆ. ಅವರ ಜೊತೆಗೆ ಕಳೆದ ಪ್ರತಿಯೊಂದು ಕ್ಷಣವು ತೆರೆಯ ಮೇಲೆ ಕಾಣಲಿದೆ. ಸಿನಿಮಾದಲ್ಲಿ ನನಗೆ ಪೊಲೀಸ್ ಪಾತ್ರವನ್ನು ನೀಡಿದ್ದು, ಇತರೆ ಸಿನಿಮಾಕ್ಕಿಂತಲೂ ಅದ್ಭುತ ಪಾತ್ರ ನನಗೆ ದೊರೆತಿದೆ. ಮಲೆನಾಡಿನ ಭಾಗದಲ್ಲಿ ಸಿನಿಮಾವು ಚಿತ್ರೀಕರಣಗೊಂಡಿದ್ದು, ಮಲೆನಾಡಿನ ಆಡು ಭಾಷೆಯಲ್ಲಿಯೇ ಸಂಭಾಷಣೆಗಳಿಂದ ಕೂಡಿದೆ ಎಂದರು.

ಇನ್ನು ಸಿನಿಮಾದ ನಿರ್ದೇಶಕರಾದ ಸಂದೀಪ್ ಸುಂಕದ್ ಅವರು ಮಾತನಾಡಿ, ಸಿನಿಮಾದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು, ಈಗಾಗಲೇ ಸಿನಿಮಾದ ಎರಡು ಹಾಡುಗಳು ಎಂಟಿಆರ್ ಯು ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ಈ ಹಾಡುಗಳಿಗೆ ಒಳ್ಳೆಯ ಪ್ರತಿಕ್ರಿಯೆ ದೊರೆತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಖಾಹಾರಿ ಸಿನಿಮಾದ ಇನ್ನೋರ್ವ ನಿರ್ಮಾಪಕರಾದ ಶ್ರೀಮತಿ ರಂಜಿನಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...