Thursday, February 5, 2026
Thursday, February 5, 2026

Dalith Sangarsha Samiti ತರೀಕೆರೆ ತಹಶೀಲ್ದಾರ್ ಕಚೇರಿ ಎದುರು ದಸಂಸ ಪ್ರತಿಭಟನೆ

Date:

Dalith Sangarsha Samiti ಚಿಕ್ಕಮಗಳೂರಿನಲ್ಲಿ ನಿವೇಶನ ರಹಿತರ ಗುಡಿಸಲುಗಳನ್ನು ಏಕಾಏಕಿ ತೆರವುಗೊಳಿಸಿರುವ ಕ್ರಮವನ್ನು ವಿರೋಧಿಸಿ ತರೀಕೆರೆ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ದಸಂಸ ನೇತೃತ್ವದಲ್ಲಿ ನಿವೇಶನ ರಹಿತರ ಹೋರಾಟ ವೇದಿಕೆ ಮುಖಂಡರುಗಳು ಅಹೋರಾತ್ರಿ ಧರಣಿ ನಡೆಸಿ ಪ್ರತಿಭಟನೆಗೆ ಮುಂದಾದರು.

ಈ ವೇಳೆ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ ತರೀಕೆರೆ ತಾಲ್ಲೂಕು ಕಸಬಾ ಹೋಬಳಿ ಹೆಚ್.ರಂಗಾಪುರದ ಗ್ರಾಮದ ಸರ್ವೆ ನಂ.೧೪ ರಲ್ಲಿ ೫೭.೧೬ ಎಕರೆ ಸರ್ಕಾ ರಿ ಜಮೀನಿನಲ್ಲಿ ನಿವೇಶನ ರಹಿತರು ಗುಡಿಸಲು ನಿರ್ಮಿಸಿಕೊಂಡು ಜೈ ಭೀಮ್ ನಗರವೆಂದು ನಾಮಕರಣ ಮಾಡಿ ವಾಸಿಸುತ್ತಿದ್ದರು ಎಂದರು.

Dalith Sangarsha Samiti ಈ ಭಾಗದಲ್ಲಿ ಕೆಲವು ಭೂಗಳ್ಳರು ಭೂಮಿ ಹೊಡೆಯಲು ಸಂಚು ರೂಪಿಸುವ ಸಲುವಾಗಿ ವಾಸಿಸುತ್ತಿದ್ದ ನಿವೇಶನ ರಹಿತರ ಗುಡಿಸಲುಗಳನ್ನು ಕಿತ್ತು ಸುಟ್ಟು ಹಾಕುವ ಜೊತೆಗೆ ಬಡ ನಿವಾಸಿಗಳಿಗೆ ಜೀವಭಯ ಸೃಷ್ಟಿಸಿ ಅವರನ್ನು ಹೊಕ್ಕಲೆಬ್ಬಿಸುವ ಕುತಂತ್ರ ಕೈಹಾಕಲಾಗಿದೆ ಎಂದು ಆರೋಪಿಸಿದರು.

ಇಷ್ಟೆಲ್ಲಾ ಅನ್ಯಾಯ ನಡೆದಿದ್ದರೂ ಕೂಡಾ ತಹಶೀಲ್ದಾರರು ರಾಜಕೀಯ ಒತ್ತಡಕ್ಕೆ ಮಣ ದು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಈ ಬಗ್ಗೆ ದಸಂಸ ಸಂಬಂಧಿಸಿದ ಎಲ್ಲಾ ಅಧಿಕಾರಿಗಳಿಗೆ ದೂರು ನೀಡಿದರೂ ನಿರ್ಲಕ್ಷ್ಯ ದೋರಣೆ ಅನುಸರಿಸಲಾಗುತ್ತಿದೆ ಎಂದು ದೂರಿದರು.

ಹೀಗಾಗಿ ಬಡವರ ಗುಡಿಸಲನ್ನು ತೆರವುಗೊಳಿಸಲು ಮುಂದಾದವರ ವಿರುದ್ಧ ಶಿಸ್ತು ಕ್ರಮ ಕೈಗೊಂಡು ನಿವೇ ಶನ ರಹಿತರಿಗೆ ನ್ಯಾಯ ಒದಗಿಸುವವರೆಗೂ ಅಹೋರಾತ್ರಿ ಧರಣ ನಡೆಸಲು ಸಿದ್ದರಾಗಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ದಸಂಸ ಮುಖಂಡರುಗಳಾದ ಮಂಜುನಾಥ್ ನಂಬಿಯಾರ್, ಕುಮಾರ್, ತರೀಕೆರೆ ಅಹಿಂದಾ ಮುಖಂಡ ನರೇಂದ್ರ, ವೇದಿಕೆಯ ಅಧ್ಯಕ್ಷ ರಾಮಚಂದ್ರ, ಉಪಾಧ್ಯಕ್ಷೆ ರೇಣುಕಮ್ಮ, ಕಾರ್ಯದರ್ಶಿ ಮಧುಕುಮಾರ್, ಖಜಾಂಚಿ ಪರಶುರಾಮ್ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ವೈಯಕ್ತಿಕ ವಿಮಾ ಮೊತ್ತ ನೀಡಲು ಗ್ರಾಹಕ ಆಯೋಗ ಆದೇಶ.

Shimoga News ವೈಯಕ್ತಿಕ ಅಪಘಾತ ವಿಮಾ ಮೊತ್ತ ನೀಡದೇ ಸೇವಾನ್ಯೂನ್ಯತೆ ಎಸಗಿದ...

Char Dham ಚಾರ್ ಧಾಮ್ ಯಾತ್ರೆ.ಆಸಕ್ತರಿಗೆ ಮಾಹಿತಿ.

Char Dham ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ, ಯೂತ್ ಹಾಸ್ಟೆಲ್...

M.S.Santosh ಗಾಂಧೀಜಿಯವರ ಸತ್ಯ,ಅಹಿಂಸೆ ಶಾಂತಿ ತತ್ವಗಳು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಪೂರಕ- ನ್ಯಾ.ಎಂ‌.ಎಸ್.ಸಂತೋಷ್.

M.S.Santosh ಮಹಾತ್ಮಾ ಗಾಂಧೀಜಿಯವರು ಸಾರಿದ ಸತ್ಯ, ಅಹಿಂಸೆ, ಶಾಂತಿಯ ತತ್ವಗಳು ಸ್ವಸ್ಥ...