Tuesday, April 29, 2025
Tuesday, April 29, 2025

Constitution of India ಸಂವಿಧಾನವನ್ನ ಸಂಭ್ರಮಿಸೋಣ ಜಾಗೃತಿ ಜಾಥಾ

Date:

Constitution of India ಸಂವಿಧಾನ ಜಾರಿಗೆ ಬಂದ 75 ವರ್ಷಗಳ ಈ ಸಂದರ್ಭದಲ್ಲಿ ಸಂವಿಧಾನದ ಮೂಲ ಆಶಯಗಳನ್ನು ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನದಲ್ಲಿ ರಾಜ್ಯಾದ್ಯಂತ ಸಮಾಜ ಕಲ್ಯಾಣ ಇಲಾಖೆಯ ವಿನೂತನ ಕಾರ್ಯಕ್ರಮ ‘ಸಂವಿಧಾನ ಜಾಗೃತಿ ಮತ್ತು ಐಕ್ಯತಾ ಜಾಥ’ ವನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಜನವರಿ 26ರ ಗಣರಾಜ್ಯೋತ್ಸವದಂದು ಡಿ.ಎ.ಆರ್. ಪೊಲೀಸ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಾಲನೆ ನೀಡಲಾಯಿತು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪನವರು, ಶಾಸಕರದ ಚನ್ನಬಸಪ್ಪ, ರುದ್ರೇಗೌಡ, ಡಿ.ಎಸ್.ಅರುಣ್, ಜಿಲ್ಲಾಧಿಕಾರಿಗಳಾದ
ಡಾ. ಸೆಲ್ವಮಣಿ ಆರ್, ಜಿ.ಪಂ ಸಿಇಓ ಸ್ನೇಹಲ್ ಸುಧಾಕರ್ ಲೋಖಂಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಹಾಗೂ ಇತರೆ ಪ್ರಮುಖರು ಉಪಸ್ಥಿತರಿದ್ದು ಹಸಿರು ನಿಶಾನೆ ತೋರುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು.

ನಂತರ ಜಾಥಾ ನಗರದ ಬೊಮ್ಮನಕಟ್ಟೆ, ನವುಲೆ, ಹೊಸಮನೆ, ಟಿಪ್ಪುನಗರ, ಮಲವಗೊಪ್ಪ, ಹರಿಗೆ, ರಾಮನಗರ, ರಾಮಣ್ಣಶೆಟ್ಟಿ ವೃತ್ತ ಹಾಗೂ ಶಿವಮೊಗ್ಗ ನಗರದ ವಿವಿಧ ಬಡಾವಣೆಗಳಲ್ಲಿ ಸಂಚರಿಸಿದ ಜಾಗೃತಿ ನಮ್ಮ ಸಂವಿಧಾನದ ಪ್ರಸ್ತಾವನೆಯನ್ನು ಜನಸಾಮಾನ್ಯರಿಗೆ ವಾಚನದ ಮೂಲಕ ಪರಿಚಯಿಸಲಾಯಿತು.

ಶಿವಮೊಗ್ಗ ತಾಲ್ಲೂಕಿನ ಮೇಲಿನ ಹನಸವಾಡಿ, ಬೇಡರಹೊಸಹಳ್ಳಿ, ಸೂಗೂರು, ಹೊಳಲೂರು, ಮತ್ತೂರು, ಗಾಜನೂರು, ಹಾಡೋನಹಳ್ಳಿ, ಪುರದಾಳು, ಅಗಸವಳ್ಳಿ ಗ್ರಾಮ ಪಂಚಾಯಿತಿ ಮಾರ್ಗವಾಗಿ ಸಂಚರಿಸಿ ಸಂವಿಧಾನದ ಪ್ರಸ್ತಾವನೆಯನ್ನು ಪ್ರದರ್ಶಿಸಲಾಯಿತು.

ಹೊಳಲೂರು ಗ್ರಾಮ ಪಂಚಾಯಿತಿಯಲ್ಲಿ ಜಾಗೃತಿ ರಥವನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು. ಮತ್ತೂರು ಗ್ರಾಮ ಪಂಚಾಯಿತಿ ಸದಸ್ಯರಾದ ನಾನ್ಯಾನಾಯ್ಕರವರು ಸಂವಿಧಾನದ ಆಶಯಗಳ ಕುರಿತಂತೆ ಮಾತನಾಡಿದರು. ಗಾಜನ್ರರಿನಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬಿ.ಎಸ್.ನಾಗರಾಜ್ ರವರು ಸಂವಿಧಾನದ ಪ್ರಸ್ತಾವನೆಯ ಕುರಿತು ಮಾತನಾಡಿ ಜಾಥಾವನ್ನು ಸ್ವಾಗತಿಸಿದರು.

Constitution of India ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಆಯನೂರು ಗ್ರಾಮ ಪಂಚಾಯಿತಿಯಲ್ಲಿ ನಡೆದ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ ‘ಭಾರತ ಸಂವಿಧಾನವು’ ಅತ್ಯುನ್ನತ ಕಾನೂನು ಮತ್ತು ಕಲ್ಯಾಣ ರಾಜ್ಯದ ಪರಿಕಲ್ಪನೆಯನ್ನು ಸಾರುತ್ತದೆ ಈ ಕುರಿತಾದ ಅಗತ್ಯ ಜ್ಞಾನವನ್ನು ಜನಸಾಮಾನ್ಯರು ಹೊಂದಬೇಕಾಗಿರುವುದರಿಂದ ಇಲಾಖೆ ಈ ಪ್ರಯತ್ನ ಮಾಡುತ್ತಿದೆ ಎಂದು ಕಾರ್ಯಕ್ರವ್ಮದ ಉದ್ದೇಶವನ್ಮ್ನ ತಿಳಿಸಿದರು.

ಜನವರಿ 28ರಂದು ಜಾಗೃತಿ ಮತ್ತು ಐಕ್ಯತಾ ಜಾಥಾ ರಥವು ‘ನಮ್ಮ ನಡೆ ಸಂವಿಧಾನ ಜಾಗೃತಿ ಕಡೆ’ ಎಂಬ ಘೋಷ ವಾಕ್ಯದೊಂದಿಗೆ ತಾಲ್ಲೂಕಿನ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಶಿಕಾರಿಪುರ ತಾಲ್ಲೂಕಿನ ಹಿತ್ತಲ ಗ್ರಾಮ ಪಂಚಾಯಿತಿಯನ್ಮ್ನ ಪ್ರವೇಶಿಸಿದಾಗ ರಥವನ್ನು ಸ್ವಾಗತಿಸಲಾಯಿತು.

ನಂತರ ಅರಿಶಿಣಗೆರೆ ಗ್ರಾಮ ಪಂಚಾಯಿತಿ, ಚುರ್ಚಗುಂಡಿ, ಈಸೂರು, ಗಾಮ, ಮಲ್ಲಾಪುರ, ಹೋತನಕಟ್ಟೆ, ಕಪ್ಪನಹಳ್ಳಿ, ಜಕ್ಕನಹಳ್ಳಿ, ಹಿರೇಜಂಬೂರು, ಚಿಕ್ಕಜಂಬೂರು, ಮಂಚಿಕೊಪ್ಪ, ಸುಣ್ಣದಕೊಪ್ಪ, ಕೊನಗವಳ್ಳಿ, ಹಾರೋಗೊಪ್ಪ, ಚಿಕ್ಕಮಾಗಡಿ, ನರಸಾಪುರ, ತರಲಘಟ್ಟ, ಬಿಳಿಕಿ, ಹೊಸೂರು, ಜಕ್ಕಿನಕೊಪ್ಪ, ಕಾಗಿನೆಲೆ, ಗೊಗ್ಗ, ಕಿಟ್ಟದಹಳ್ಳಿ, ಬಗನಕಟ್ಟೆ, ವಿವಿಧ ಗ್ರಾಮ ಪಂಚಾಯಿತಿ ಮಾರ್ಗವಾಗಿ ಸಂಚರಿಸಿತು.

ಜಾಥಾವನ್ನು ಮಹಿಳೆಯರು ಪೂರ್ಣಕುಂಭ ಸ್ವಾಗತ, ಡೊಳ್ಳುಕುಣಿತ, ವಿದ್ಯಾರ್ಥಿಗಳಿಂದ, ನಾಯಕರ ವೇಷಭೂಷಣ ಪ್ರದರ್ಶನದೊಂದಿಗೆ ಬರಮಾಡಿಕೊಳ್ಳಲಾಯಿತು.

ಶಿಕಾರಿಪುರ ವಿಧಾನಸಭಾ ಶಾಸಕರಾದ ಬಿ.ವೈ. ವಿಜಯೇಂದ್ರರವರು ಪಾಲ್ಗೊಂಡು ‘ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠ ವಿಚಾರಧಾರೆಯನ್ನು ಹೊಂದಿರುವ ದೇಶ ಭಾರತ, ಸಮಾನ ನ್ಯಾಯವನ್ನು ಒದಗಿಸುವ ಉದ್ದೇಶವನ್ನು ಸಂವಿಧಾನವು ಹೊಂದಿದೆ. ಈ ನಿಟ್ಟಿನಲ್ಲಿ ಜಾಗೃತಿ ಜಾಥಾ ರಥ ಯಾತ್ರೆಯು ಅರಿವನ್ನು ಮೂಡಿಸಲು ಸಹಕಾರಿ’ ಎಂದರು.

ಶಿರಾಳಕೊಪ್ಪದಲ್ಲಿ ಲೋಕಸಭಾ ಸದಸ್ಯರಾದ ಬಿ.ವೈ.ರಾಘವೇಂದ್ರರವರು ಪಾಲ್ಗೊಂಡು ಪ್ರಸ್ತಾವನೆಯ ಪ್ರತಿಜ್ಞಾ ವಿಧಿ ಸ್ವೀಕರಿಸಿ ಜಾಥವನ್ನು ಸ್ವಾಗತಿಸಿದರು.

ಫೆಬ್ರವರಿ 2 ರಂದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಉದ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಮಧು ಬಂಗಾರಪ್ಪನವರು ಹಸಿರು ನಿಶಾನೆ ತೋರಿಸಿ ರಥ ಯಾತ್ರಗೆ ಸ್ವಾಗತವನ್ನು ಕೋರಿದರು.

ಸೊರಬ ತಾಲ್ಲೂಕಿನ ಬಿಳವಾಣಿ ಗ್ರಾಮ ಪಂಚಾಯಿತಿಗೆ ಜನವರಿ 31 ರಂದು ಆಗಮಿಸಿದ ಜಾಥಾವನ್ನು ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಶಾಲಾ ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳ ಮುಖಂಡರುಗಳು, ಸಾರ್ವಜನಿಕರು ಮೆರವಣಿಗೆ ಮೂಲಕ ಸ್ವಾಗತಿಸಿ ಪಂಚಾಯಿತಿಯಲ್ಲಿ ಸುಮಾರು 4 ಕಿ.ಮೀ. ಸಂಚರಿಸಿತು.

ಮಾವಲಿ, ಅಂಡಿಗೆ, ತತ್ತೂರು, ಹಂಚಿ, ಭಾರಂಗಿ, ಎಣ್ಣೆಕೊಪ್ಪ, ಹುರುಳಿ, ಜಡೆ, ಗುಡುವಿ, ಶಿಗ್ಗಾ, ಹೆಗ್ಗೋಡು, ಗ್ರಾಮ ಪಂಚಾಯಿತಿಯಲ್ಲಿ ವಿದ್ಯಾರ್ಥಿಗಳಿಂದ ಸಂವಿಧಾನ ಕುರಿತು ನಾಟಕ ಪ್ರದರ್ಶನ ನಡೆಸಲಾಯಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Yadav School of Chess Institute ಯಾದವ ಸಂಸ್ಥೆಯಿಂದ ಚೆಸ್ ತರಬೇತಿ ಶಿಬಿರ

Yadav School of Chess Institute ರವೀದ್ರನಗರದ ಯಾದವ ಸ್ಕೂಲ್ ಆಫ್...

Shivaganga Yoga Center ನಗರದ ಅತಿದೊಡ್ಡ ಬಾಡಾವಣೆಗಳಿಗೆ ₹140 ಕೋಟಿ ಅನುದಾನದಿಂದ ಅಭಿವೃದ್ಧಿ- ವಿಶ್ವಾಸ್

Shivaganga Yoga Center ಶಿವಗಂಗಾ ಯೋಗ ಕೇಂದ್ರದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ...

Sarva Samriddhi Sadhana Center ರಿಪ್ಪನ್ ಪೇಟೆ ಮೂಗುಡ್ತಿ ಸರ್ವಸಮೃದ್ಧಿ ಸಾಧನಾ ಕೇಂದ್ರದಲ್ಲಿ ಮಕ್ಕಳಿಗಾಗಿ ಸಂಸ್ಕಾರ ಶಿಬಿರ

Sarva Samriddhi Sadhana Center ಹೊಸನಗರದ ರಿಪ್ಪನ್‌ಪೇಟೆ ಮೂಗುಡ್ತಿ ಸರ್ವಸಮೃದ್ಧಿ ಸಾಧನಾ...