Sunday, August 2, 2026
Sunday, August 2, 2026

Congress Karnataka ಮಾತೆ ರಮಾಬಾಯಿ ಅವರು ಅಂಬೇಡ್ಕರ್ ಪ್ರತಿ ಯಶಸ್ಸಿನ ಹಿಂದೆಯೂ ಇದ್ದರು- ಕೆ.ಟಿ.ರಾಧಾಕೃಷ್ಣ

Date:

Congress Karnataka ರಮಾಬಾಯಿ ಅಂಬೇಡ್ಕರ್‌ರವರ 126ನೇ ಜನ್ಮದಿನದ ಅಂಗವಾಗಿ ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ದಸಂಸ (ಪ್ರೊ.ಕೃಷ್ಣಪ್ಪ ಸ್ಥಾಪಿತ) ಬಣದಿಂದ ಕೇಕ್ ಕತ್ತರಿಸಿ ಸಿಹಿ ಹಂಚುವ ಮೂ ಲಕ ಮುಖಂಡರುಗಳು ಅತ್ಯಂತ ಸಂಭ್ರಮದಿಂದ ಆಚರಿಸಿದರು.

ಈ ಕುರಿತು ಮಾತನಾಡಿದ ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ರಮಾಬಾಯಿ ಅವರ ಈ ತ್ಯಾಗದಿಂದಲೇ ನಮಗೆ ಪ್ರಬುದ್ಧ ಭಾರತಕ್ಕೆ ಅಂಬೇಡ್ಕರ್ ಸಿಕ್ಕಿದ್ದು. ಹಾಗಾಗಿಯೇ ರಮಾಬಾಯಿಯ ತ್ಯಾಗವೆ ಅಂಬೇಡ್ಕರ್ ರವರ ಶಕ್ತಿ. ಇಂದು ಈ ಮಾತೆಯ ಜನ್ಮದಿನ ಸದಾ ನೆನಪಿನಲ್ಲಿ ಉಳಿದು ಪ್ರತಿಯೊಬ್ಬರಿಗೂ ದಾರಿದೀಪವಾಗಲಿ ಎಂದರು.
ಪ್ರತಿ ಗಂಡಿನ ಯಶಸ್ಸಿನಲ್ಲಿ ಒಂದು ಹೆಣ್ಣಿನ ಪಾತ್ರ ಇರುತ್ತದೆ ಎನ್ನುವಂತೆಯೇ ರಮಾಬಾಯಿ ಅವರು ಅಂಬೇ ಡ್ಕರ್ ಅವರ ಪ್ರತಿ ಯಶಸ್ಸಿನ ಹಿಂದೆಯೂ ಇದ್ದರು.

ಅಂಬೇಡ್ಕರ್ ಅವರ ಶಿಕ್ಷಣಕ್ಕೆ ಅವರ ತಂದೆಯವರು ಹೇಗೆ ಬೆಂಬಲ ನೀಡಿದರೋ ಹಾಗೆಯೇ ರಮಾಬಾಯಿ ಕೂಡ ಅಂಬೇಡ್ಕರ್ ಅವರ ಶಿಕ್ಷಣಕ್ಕಾಗಿ ತಮ್ಮ ಜೀವನವನ್ನೇ ಮು ಡಿಪಿಟ್ಟಿದ್ದರು ಎಂದು ಹೇಳಿದರು.
ದಸಂಸ ಜಿಲ್ಲಾ ಸಂಚಾಲಕ ಕಬ್ಬಿಕೆರೆ ಮೋಹನ್‌ಕುಮಾರ್ ಮಾತನಾಡಿ ಅಂಬೇಡ್ಕರ್ ಶಿಕ್ಷಣ ಪಡೆಯುವ ದಿನಗಳಲ್ಲಿ ಸುಖ, ಸಂತೋಷ, ನೆಮ್ಮದಿ ಯಾವುದರ ಬಗ್ಗೆಯೂ ರಮಾಬಾಯಿ ಅವರು ತಲೆಕೆಡಿಸಿಕೊಳ್ಳದ ಸಮ ಯದಲ್ಲಿ, ಸಂಸಾರದ ನೋವು ಸ್ವಲ್ಪವೂ ತಿಳಿಯದಂತೆ ಕಾಪಾಡಿದ್ದು ರಮಾಬಾಯಿ ಎಂದು ಪತ್ನಿಯ ಬಗ್ಗೆ ಅಂ ಬೇಡ್ಕರ್ ಬರೆದಿರುತ್ತಾರೆ ಎಂದು ತಿಳಿಸಿದರು.

Congress Karnataka ಡಾ|| ಬಿ.ಆರ್.ಅಂಬೇಡ್ಕರ್ ಅವರು ಇಂದು ದೊಡ್ಡಮಟ್ಟದಲ್ಲಿ ಬೆಳೆಯಲು ಪೂರ್ಣ ಸಹಕಾರ ನೀಡಿದವರು ರಮಾಬಾಯಿಯವರು. ಅವರ ಈ ಸಹಕಾರದಿಂದ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನ ಪ್ರಪಂಚ ದಾದ್ಯಂತ ಪ್ರಸಿದ್ದವಾಗಿದೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ ಮಾತನಾಡಿ ಜಗತ್ತಿನ ಯಾವ ನಾಯಕರಿಗೂ ಸಿಗದಂತಹ ತ್ಯಾಗಮಯಿ ಸತಿ. ಮಾತೆ ರಮಾಬಾಯಿಯವರು ಸಂಗಾತಿಯಾಗಿ ಅಂಬೇಡ್ಕರ್ ಅವರಿಗೆ ಸಿಕ್ಕಿದ್ದೆ ಒಂದು ರೀತಿ ಯಲ್ಲಿ ಸಂವಿಧಾನ ರಚಿಸಲು ಕಾರಣವಾಯಿತು ಎಂದರು.
ಈ ಸಂದರ್ಭದಲ್ಲಿ ದಲಿತ ಮುಖಂಡರುಗಳಾದ ಗಂಗಾಧರ್, ಸುಧಾ, ಮಂಜುಳಾ, ಹರೀಶ್, ಗಂಗಯ್ಯ ಹಾಗೂ ದಸಂಸ ಕಾರ್ಯಕರ್ತರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ₹ 6.400 ಕೋಟಿ ವೆಚ್ಚದ ಶಿವಮೊಗ್ಗ- ತುಮಕೂರು ಚತುಷ್ಪಥ ರಸ್ತೆ ಮುಂದಿನ ಮಾರ್ಚ್ ಗೆ ಸಿದ್ಧ- ಬಿ.ವೈ.ರಾಘವೇಂದ್ರ

B.Y. Raghavendra ಮಲೆನಾಡು ಹಾಗೂ ರಾಜಧಾನಿ ಬೆಂಗಳೂರು ನಡುವಿನ ಸಂಪರ್ಕವನ್ನು ಕ್ರಾಂತಿಕಾರಕವಾಗಿ...

S. N. Channabasappa ಬಡಾವಣೆಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದು ನಮ್ಮ ಮುಖ್ಯ ಕರ್ತವ್ಯ- ಎಸ್.ಎನ್.ಚನ್ನಬಸಪ್ಪ

S. N. Channabasappa ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ...

Rotary Club of Shivamogga ಮಕ್ಕಳಲ್ಲಿ ರೋಟರಿ ಸಂಸ್ಥೆ ನಾಯಕತ್ವ ಗುಣಗಳನ್ನ ಬೆಳೆಸುತ್ತದೆ- ಡಿ.ಕೆ.ನರಹರಿ

Rotary Club of Shivamogga ರೋಟರಿ ಸಂಸ್ಥೆಯು ಮಕ್ಕಳಿಗೆ ಶಾಲಾ ಹಂತದಲ್ಲಿಯೇ...

B.Y. Raghavendra ಹವಾಮಾನ ಆಧಾರಿತ ಬೆಳೆವಿಮೆ: ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ವಿಸ್ತರಿಸಿ- ಸಂಸದ ಬಿ.ವೈ‌.ರಾಘವೇಂದ್ರ

B.Y. Raghavendra ಮುಂಗಾರು ಹಂಗಾಮಿನಲ್ಲಿ ರಾಜ್ಯಾದ್ಯಂತ ವಾಡಿಕೆಗಿಂತ ಶೇ.34 ರಷ್ಟು ಮಳೆ...