Congress Karnataka ರಮಾಬಾಯಿ ಅಂಬೇಡ್ಕರ್‌ರವರ 126ನೇ ಜನ್ಮದಿನದ ಅಂಗವಾಗಿ ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ದಸಂಸ (ಪ್ರೊ.ಕೃಷ್ಣಪ್ಪ ಸ್ಥಾಪಿತ) ಬಣದಿಂದ ಕೇಕ್ ಕತ್ತರಿಸಿ ಸಿಹಿ ಹಂಚುವ ಮೂ ಲಕ ಮುಖಂಡರುಗಳು ಅತ್ಯಂತ ಸಂಭ್ರಮದಿಂದ ಆಚರಿಸಿದರು.
ಈ ಕುರಿತು ಮಾತನಾಡಿದ ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ರಮಾಬಾಯಿ ಅವರ ಈ ತ್ಯಾಗದಿಂದಲೇ ನಮಗೆ ಪ್ರಬುದ್ಧ ಭಾರತಕ್ಕೆ ಅಂಬೇಡ್ಕರ್ ಸಿಕ್ಕಿದ್ದು. ಹಾಗಾಗಿಯೇ ರಮಾಬಾಯಿಯ ತ್ಯಾಗವೆ ಅಂಬೇಡ್ಕರ್ ರವರ ಶಕ್ತಿ. ಇಂದು ಈ ಮಾತೆಯ ಜನ್ಮದಿನ ಸದಾ ನೆನಪಿನಲ್ಲಿ ಉಳಿದು ಪ್ರತಿಯೊಬ್ಬರಿಗೂ ದಾರಿದೀಪವಾಗಲಿ ಎಂದರು.
ಪ್ರತಿ ಗಂಡಿನ ಯಶಸ್ಸಿನಲ್ಲಿ ಒಂದು ಹೆಣ್ಣಿನ ಪಾತ್ರ ಇರುತ್ತದೆ ಎನ್ನುವಂತೆಯೇ ರಮಾಬಾಯಿ ಅವರು ಅಂಬೇ ಡ್ಕರ್ ಅವರ ಪ್ರತಿ ಯಶಸ್ಸಿನ ಹಿಂದೆಯೂ ಇದ್ದರು.
ಅಂಬೇಡ್ಕರ್ ಅವರ ಶಿಕ್ಷಣಕ್ಕೆ ಅವರ ತಂದೆಯವರು ಹೇಗೆ ಬೆಂಬಲ ನೀಡಿದರೋ ಹಾಗೆಯೇ ರಮಾಬಾಯಿ ಕೂಡ ಅಂಬೇಡ್ಕರ್ ಅವರ ಶಿಕ್ಷಣಕ್ಕಾಗಿ ತಮ್ಮ ಜೀವನವನ್ನೇ ಮು ಡಿಪಿಟ್ಟಿದ್ದರು ಎಂದು ಹೇಳಿದರು.
ದಸಂಸ ಜಿಲ್ಲಾ ಸಂಚಾಲಕ ಕಬ್ಬಿಕೆರೆ ಮೋಹನ್‌ಕುಮಾರ್ ಮಾತನಾಡಿ ಅಂಬೇಡ್ಕರ್ ಶಿಕ್ಷಣ ಪಡೆಯುವ ದಿನಗಳಲ್ಲಿ ಸುಖ, ಸಂತೋಷ, ನೆಮ್ಮದಿ ಯಾವುದರ ಬಗ್ಗೆಯೂ ರಮಾಬಾಯಿ ಅವರು ತಲೆಕೆಡಿಸಿಕೊಳ್ಳದ ಸಮ ಯದಲ್ಲಿ, ಸಂಸಾರದ ನೋವು ಸ್ವಲ್ಪವೂ ತಿಳಿಯದಂತೆ ಕಾಪಾಡಿದ್ದು ರಮಾಬಾಯಿ ಎಂದು ಪತ್ನಿಯ ಬಗ್ಗೆ ಅಂ ಬೇಡ್ಕರ್ ಬರೆದಿರುತ್ತಾರೆ ಎಂದು ತಿಳಿಸಿದರು.
Congress Karnataka ಡಾ|| ಬಿ.ಆರ್.ಅಂಬೇಡ್ಕರ್ ಅವರು ಇಂದು ದೊಡ್ಡಮಟ್ಟದಲ್ಲಿ ಬೆಳೆಯಲು ಪೂರ್ಣ ಸಹಕಾರ ನೀಡಿದವರು ರಮಾಬಾಯಿಯವರು. ಅವರ ಈ ಸಹಕಾರದಿಂದ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನ ಪ್ರಪಂಚ ದಾದ್ಯಂತ ಪ್ರಸಿದ್ದವಾಗಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ ಮಾತನಾಡಿ ಜಗತ್ತಿನ ಯಾವ ನಾಯಕರಿಗೂ ಸಿಗದಂತಹ ತ್ಯಾಗಮಯಿ ಸತಿ. ಮಾತೆ ರಮಾಬಾಯಿಯವರು ಸಂಗಾತಿಯಾಗಿ ಅಂಬೇಡ್ಕರ್ ಅವರಿಗೆ ಸಿಕ್ಕಿದ್ದೆ ಒಂದು ರೀತಿ ಯಲ್ಲಿ ಸಂವಿಧಾನ ರಚಿಸಲು ಕಾರಣವಾಯಿತು ಎಂದರು.
ಈ ಸಂದರ್ಭದಲ್ಲಿ ದಲಿತ ಮುಖಂಡರುಗಳಾದ ಗಂಗಾಧರ್, ಸುಧಾ, ಮಂಜುಳಾ, ಹರೀಶ್, ಗಂಗಯ್ಯ ಹಾಗೂ ದಸಂಸ ಕಾರ್ಯಕರ್ತರು ಹಾಜರಿದ್ದರು.