(ಪುಣ್ಯದಿನ ನಿಮಿತ್ತ ಲೇಖನ)
Klive Special Article ಲೇ: ಎನ್.ಜಯಭೀಮ ಜೊಯ್ಸ್, ಶಿವಮೊಗ್ಗ
ಶ್ರೀಗೋಪಾಲದಾಸರ ಆರಾಧನೆಯ ಪರ್ವದಿನವಾದ ಇಂದು ಶ್ರೀದಾಸಾರ್ಯರಿಗೆ ಭಕ್ತಿಯನಮನಗಳ ಸಮರ್ಪಣೆ..
ಮೊಸರಿನ ಸಮುದ್ರದ
ಕಲ್ಲಿನಲಿ
ಅರಳಿದ ಮೂರ್ತಿ
ಭಾಗಣ್ಣನವರು
ತಂದೆ ಮುರಾರಿರಾಯರು
ತಾಯಿ ವೆಂಕಮ್ಮನವರು
ಮೂರುಜನ ತಮ್ಮಂದಿರು
ಮಕ್ಕಳು ಸಣ್ಣವರು
ಮುರಾರಿರಾಯರು
ವೆಂಕಪ್ಪನ ಪಾದ ಸೇರಿದರು
ತಂದೆಯಮನೆಯವರು
ವೆಂಕಮ್ಮ ಮಕ್ಕಳನ್ನು
ಹೊರಗಟ್ಟಿದರು.
ಸಂಕಾಪುರದ ಹನುಮಪ್ಪ
ಇವರಿಗೆ ಆಶ್ರಯ
ಕೊಟ್ಟದೇವರು
ಸಂಕಾಪುರದ ಶಾನುಭೋಗರು
ಗುಂಡಪ್ಪನವರು
ಭಾಗಣ್ಣನಿಗೆ
ಗಾಯತ್ರಿದೇವಿಯ ಅನುಗ್ರಹ
ಮಾಡಿಸಿದರು.
ಗಾಯತ್ರಿ ಅನುಷ್ಠಾನ
ಮಾಡಿದ ಭಾಗಣ್ಣ
ಸಿದ್ಧಿ ಪುರುಷನಾದನು.
ಹನುಮಪ್ಪನ ಅನುಗ್ರಹ
ದಿಂದ
ತಾಯಿ ತಮ್ಮಂದಿರ ಜೊತೆ
ಉತ್ತನೂರಿಗೆ ಬಂದನು.
ಉತ್ತನೂರಿನ ತಿಮ್ಮಪ್ಪ
ಇವರನ್ನು ಕೈಬಿಡದೇ
ಸಲಹಿದನು.
ಭವಿಷ್ಯ ಹೇಳುತ್ತಾ ಜೀವನ
ನಡೆಸಿದನು.
ತಾಯಿ ತಮ್ಮಂದಿರನು
ಸಾಕಿದನು.
ಐಜಿ ವೆಂಕಟನರಸಿಂಹಾಚಾರ್ಯ
ರಿಗೆ
ಅವರ ಮಗನಿಗೆ ಸನ್ಯಾಸಿ
ಯೋಗವಿದೆ
ಎಂದು ನುಡಿದಿದ್ದನು.
ಅವರೇ ಶ್ರೀರಾಯರ ಮಠದ
ಬಿಡಿ ಸನ್ಯಾಸಿಗಳಾಗಿದ್ದ
ಶ್ರೀವ್ಯಾಸತತ್ವಜ್ಞತೀರ್ಥರು.
ವಿಜಯರಾಯಗುರುಗಳು
ಆದವಾನಿಯಲ್ಲಿ
ಹನುಮದ್ರ್ವತದ
ಶುಭ ಸಂದರ್ಭದಲ್ಲಿ
ಗೋಪಾಲವಿಠಲ
ಎಂಬ ಅಂಕಿತ ಕೊಟ್ಟು
Klive Special Article ಆಶೀರ್ವದಿಸಿದರು
ಮಂಗರಾಯನ
ಸನ್ನಧಿಯಲ್ಲಿ.
ಭಾಗಣ್ಣ ಹೋಗಿ
ಗೋಪಾಲದಾಸ
ರಾದರಿಲ್ಲಿ.
ಅಪರೋಕ್ಷಜ್ಞಾನ
ಪಡೆದರು ಮಂಗರಾಯನ
ಸನ್ನಿಧಿಯಲ್ಲಿ.
ತೀರ್ಥಕ್ಷೇತ್ರಗಳ ಯಾತ್ರೆ
ಮಾಡಿದರು
ದೇವರನಾಮ,ಉಗಾಭೋಗ,ಸುಳಾದಿ
ರಚಿಸಿದರು.
ಉಡುಪಿಯ ಕಡಗೋಲು
ಕೃಷ್ಣನ ದರ್ಶನ
ಪಡೆದು ಆನಂದಿಸಿದರು.
ಹೆಳವನಕಟ್ಟೆ ಗಿರಿಯಮ್ಮ
ತಾಯಿಗೆ
ಹೆಳವನಕಟ್ಟೆರಂಗ
ಅಂಕಿತವನಿತ್ತು
ಆಶೀರ್ವದಿಸಿದರು.
ಉಡುಪಿಯ ದಾರಿಯಲ್ಲಿ
ಡಕಾಯಿತ
ಭೀಮ ದಾಸರಿಗೆ ಶರಣಾಗಿ
ಗುಣವಂತನಾದ.
ಉದರಶೂಲೆ ಹಿಡಿದ
ಮಾನವಿಯ ಶ್ರೀನಿವಾಸಾಚಾರ್ಯರಿಗೆ
ಉದರಶೂಲೆ
ಪರಿಹರಿಸಿದರು
ವಿಜಯಪ್ರಭುಗಳ
ಇಚ್ಛೆಯಮೇರೆಗೆ
ತಮ್ಮ 40ವರ್ಷ ಆಯುರ್ದಾನ
ಮಾಡಿದರು.
ಪಂಢರೀನಾಥನ
ಅನುಗ್ರಹದಿಂದ
ಜಗನ್ನಾಥ ವಿಠಲ ಅಂಕಿತ ಪಡೆದು
ಜಗನ್ನಾಥದಾಸರಾದರು
ಮಾನವಿಯ
ಶ್ರೀನಿವಾಸಾಚಾರ್ಯರು.
ಹರಿಕಥಾಮೃತಸಾರ ಎಂಬ
ಮೇರು
ಗ್ರಂಥ ರಚಿಸಿದರು.
ಗೋಪಾಲದಾಸರು
ಗಣಪತಿಯ ಅಂಶಜರು
ದಾಸಾರ್ಯರ ಆರಾಧನೆ
ನಡೆಯುವುದು
ಪುಷ್ಯಬಹುಳ ಅಷ್ಟಮಿಯಂದು
ಉತ್ತನೂರಿನಲ್ಲಿ
ನಾವೂ ನಮನ ಸಲ್ಲಿಸೋಣ
ದಾಸರಾಯರಿಗೆ
ಭಕ್ತಿಯಲ್ಲಿ.