Budget highlights ಭಾರತವನ್ನು 2047ರ ಹೊತ್ತಿಗೆ ಜಗತ್ತಿನ ಅತ್ಯಂತ ಶ್ರೀಮಂತ ಹಾಗೂ ವಿಕಸಿತ ದೇಶವಾಗಿಸುವ ಸಂಕಲ್ಪವನ್ನು ಹೊಂದಿರುವ 2024-25ನೇ ಸಾಲಿನ ಮಧ್ಯಂತರ ಬಜೆಟ್ ಮಧ್ಯಂತರ ಬಜೆಟ್ ನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ್ದಾರೆ.
ಪ್ರವಾಸೋದ್ಯಮ, ವಸತಿ ಮತ್ತು ನವೀಕರಿಸಬಹುದಾದ ಇಂಧನ ವಲಯವನ್ನು ಉತ್ತೇಜಿಸುವ ಕ್ರಮಗಳನ್ನು ಬಜೆಟ್ ನಲ್ಲಿ ಘೋಷಿಸಲಾಗಿದೆ. ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಲ್ಲಿ ರಸ್ತೆಗಳು, ಬಂದರುಗಳು ಹಾಗೂ ವಿಮಾನ ನಿಲ್ದಾಣಗಳ ಮಾತ್ರ ಹಿರಿದು.
ಬಡವರು, ಮಹಿಳೆಯರು, ಯುವಜನರು ಹಾಗೂ ರೈತರು ಈ ನಾಲ್ಕು ಜಾತಿಗಳಿಗೆ ನಾವು ಹೆಚ್ಚಿನ ಒತ್ತು ಕೊಟ್ಟಿದ್ದೇವೆ ಎಂದು ನಿರ್ಮಲ ಸೀತಾರಾಮನ್ ಅವರು ಹೇಳಿದ್ದಾರೆ.
ಬಜೆಟ್ ನ ಮುಖ್ಯಾಂಶಗಳು ಎಂದರೆ…
ವಿಶೇಷವಾಗಿ ಮಧ್ಯಮ ವರ್ಗದವರಿಗೆ ಮನೆ ಖರೀದಿಸಲು ಅಥವಾ ಮನೆ ಕಟ್ಟಲು ನೆರವು ನೀಡಲಾಗಿದೆ.
ಆಶಾ ಕಾರ್ಯಕರ್ತೆ ಅಂಗನವಾಡಿ ಕಾರ್ಯಕರ್ತರಿಗೂ ಆಯುಷ್ಮಾನ್ ಭಾರತ.
ತಂತ್ರಜ್ಞಾನ ಪ್ರಿಯ ಯುವ ಜನಾಂಗಕ್ಕೆ 50 ವರ್ಷಗಳ ಬಡ್ಡಿರಹಿತ ಸಾಲ ನೀಡುವುದಕ್ಕಾಗಿ ಒಂದು ಲಕ್ಷ ಕೋಟಿ ನಿಧಿ ಸ್ಥಾಪನೆ ಮಾಡಲಾಗಿದೆ.
9 ರಿಂದ 14 ವರ್ಷ ವಯಸ್ಸಿನ ಹೆಣ್ಣು ಮಕ್ಕಳಿಗೆ ಗರ್ಭಕಂಠ ಕ್ಯಾನ್ಸರ್ ನಿರೋಧಕ ಲಸಿಕೆ ಹಾಕಿಸಲು ಸರ್ಕಾರ ಉತ್ತೇಜನ ನೀಡಲಿದೆ.
ತಿಂಗಳಿಗೆ 300 ಯೂನಿಟ್ ಗಳವರೆಗೂ ಒಂದು ಕೋಟಿ ಮನೆಗಳಿಗೆ ಉಚಿತ ವಿದ್ಯುತ್ ಅನ್ನ ಖಚಿತಪಡಿಸಲು ಚಾವಣಿಯಲ್ಲಿ ಸೋಲಾರ್ ವಿದ್ಯುತ್ ಪ್ಯಾನಲ್ ಅಳವಡಿಕ, ವಾರ್ಷಿಕವಾಗಿ 15000 ದಿಂದ 18000 ಕೋಟಿ ರೂಪಾಯಿ ವೆಚ್ಚವಾಗಲಿದೆ.
ಪ್ರವಾಸೋದ್ಯಮಕ್ಕೆ ಹೆಚ್ಚು ಉತ್ತೇಜನ ನೀಡಲಾಗಿದೆ. ಬಡ್ಡಿ ರಹಿತ ಸಾಲವನ್ನು ನೀಡಲಾಗುತ್ತದೆ.
ಯೋಜನೆ ಅಡಿ 517 ಹೊಸ ಮಾರ್ಗಗಳಲ್ಲಿ ವಿಮಾನಯಾನ ನಡೆಯಲಿದೆ.
Budget highlights ಮೀನುಗಾರಿಕೆಯಲ್ಲಿ 55 ಲಕ್ಷ ಹೊಸ ಉದ್ಯೋಗ ಸೃಷ್ಟಿಸಲು ಬಜೆಟ್ ನಲ್ಲಿ ಪೂರಕ ಘೋಷಣೆ ಮಾಡಲಾಗಿದೆ. ಮೀನುಗಾರಿಕೆ ಪ್ರತೀಕ ಸಚಿವಾಲಯ ಸ್ಥಾಪಿಸಲಾಗುವುದು. ಮೀನುಗಾರರಿಗೆ ನೆರವು ನೀಡಲಾಗುತ್ತದೆ ಆ ಮೂಲಕ ಮತ್ಯ ಸಂಪದ ಯೋಜನೆ ಅಡಿ ಮೀನುಗಾರರಿಗೆ ನೆರವು ನೀಡಲಾಗುತ್ತದೆ ಎಂದು ವಿತ್ತ ಸಚಿವೆ ಘೋಷಿಸಿದ್ದಾರೆ.
ಸರ್ಕಾರವು ತೈಲ ಬೀಜಗಳ ಮೇಲಿನ ಸ್ವಾವಲಂಬನೆಯನ್ನು ಹೆಚ್ಚಿಸುವುದರ ಜೊತೆಗೆ ಆಧುನಿಕ ಸಂಗ್ರಹಣೆ ಹಾಗೂ ಪೂರೈಕೆ ಸರಪಳಿಗಳಿಗೂ ಸೇರಿದಂತೆ ಸುಗ್ಗಿಯ ಬಳಿಕ ಚಟುವಟಿಕೆಗಳಲ್ಲಿ ಖಾಸಗಿ ಮತ್ತು ಸಾರ್ವಜನಿಕ ಹೂಡಿಕೆಗಳನ್ನು ಉತ್ತೇಜಿಸಲು ಗಮನ ನೀಡಿದೆ. ಭಾರತವು ಪ್ರಪಂಚದಲ್ಲಿ ಹಾಲು ಉತ್ಪಾದನೆಯಲ್ಲಿ ಹೊಂದಿದೆ. ಡೈರಿಗೆ ಮೂಲಭೂತ ಸೌಕರ್ಯಗಳ ಹೆಚ್ಚಳ, ಡೈರಿಗಳಿಗೆ ರಾಷ್ಟ್ರೀಯ ಗೋಕುಲ್ ಮಿಷನ್ ನಡಿ ಹೆಚ್ಚು ಪ್ರೋತ್ಸಾಹ ನೀಡಲಾಗುತ್ತದೆ.