Saturday, December 6, 2025
Saturday, December 6, 2025

Karnataka Vokkaliga Community ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವುದರಿಂದ ಪ್ರತಿಭೆ ಅನಾವರಣ- ಪ್ರತಿಮಾ ಡಾಕಪ್ಪಗೌಡ

Date:

Karnataka Vokkaliga Community ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ನಮ್ಮಲ್ಲಿರುವ ಪ್ರತಿಭೆ ಅನಾವರಣಕ್ಕೆ ವೇದಿಕೆ ದೊರಕಲಿದ್ದು, ಸೋಲು ಗೆಲುವಿಗಿಂತ ಸ್ಪರ್ಧೆಗಳಲ್ಲಿ ಭಾಗವಹಿಸುವಿಕೆ ಮುಖ್ಯ ಎಂದು ಅಖಿಲ ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಪ್ರತಿಮಾ ಡಾಕಪ್ಪಗೌಡ ಹೇಳಿದರು.

ಶಿವಮೊಗ್ಗ ನಗರದ ಆದಿಚುಂಚನಗಿರಿ ಸಭಾಭವನದಲ್ಲಿ ಅಖಿಲ ಕರ್ನಾಟಕ ಒಕ್ಕಲಿಗರ ಮಹಿಳಾ ಘಟಕದ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ “ಹಬ್ಬಹರಿದಿನಗಳ ವೈಶಿಷ್ಟ್ಯತೆ, ಪ್ರಾಮುಖ್ಯತೆ ಹಾಗೂ ಪ್ರಾತ್ಯಕ್ಷಿಕೆ”ಯ ಸಮಾರೋಪ ಹಾಗೂ ಬಹುಮಾನ ವಿತರಣೆಯಲ್ಲಿ ಮಾತನಾಡಿದರು.

ಅಖಿಲ ಕರ್ನಾಟಕ ರಾಜ್ಯ ಒಕ್ಕಲಿಗ ಮಹಿಳಾ ಘಟಕದ ರಾಜ್ಯ ಅಧ್ಯಕ್ಷೆ ಡಾ. ಶಾಂತಾ ಸುರೇಂದ್ರ ಮಾತನಾಡಿ, ಹಬ್ಬಗಳ ಸಂಸ್ಕೃತಿ ಕುರಿತು ಪರಿಚಯಿಸುವ ದೃಷ್ಠಿಯಿಂದ ವಿಶೇಷ ಸ್ಪರ್ಧೆ ಆಯೋಜಿಸಿರುವುದು ಅತ್ಯಂತ ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.

Karnataka Vokkaliga Community ರೋಟರಿ ಮಾಜಿ ಸಹಾಯಕ ಗವರ್ನರ ಜಿ.ವಿಜಯಕುಮಾರ್ ಮಾತನಾಡಿ, ಸ್ಪರ್ಧೆಗಳಿಂದ ಎಲ್ಲರೂ ಒಟ್ಟಾಗಿ ಸೇರಿ ಭಾಗವಹಿಸುವುದರಿಂದ ಸಂಘಟನಾ ಕೌಶಲ್ಯ ವೃದ್ಧಿಯಾಗುತ್ತದೆ. ಪರಸ್ಪರ ಪರಿಚಯದಿಂದ ಸಂವಹನ ಶಕ್ತಿ ವೃದ್ಧಿಸುತ್ತದೆ ಎಂದು ತಿಳಿಸಿದರು.

ತೀರ್ಪುಗಾರರಾದ ಶೀಲಾ ಸುರೇಶ ಮಾತನಾಡಿ, ಮಹಿಳೆಯರು ಅತ್ಯಂತ ಉತ್ಸಾಹದಿಂದ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದು, ಎಲ್ಲ ತಂಡಗಳು ಹಬ್ಬಗಳ ಕುರಿತು ನೀಡಿದ ಪ್ರದರ್ಶನ ಪ್ರಾತ್ಯಕ್ಷಿಕೆ ಸುಂದರವಾಗಿ ಮೂಡಿಬಂದಿದೆ. ಭಾಗವಹಿಸಿದ ಸ್ಪರ್ಧಿಗಳಿಗೆ ಇತರರು ಮಾಡಿದ ವಿವಿಧ ಹಬ್ಬಗಳ ಬಗ್ಗೆ ಮಾಹಿತಿ ಗೊತ್ತಾಗಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.

ಅತ್ತ್ಯುತ್ತಮ ಪ್ರದರ್ಶನ ನೀಡಿದ ಭೈರೆಗೌಡ ಕುಟುಂಬದವರಿಗೆ ಪ್ರಥಮ ಬಹುಮಾನ ನೀಡಿ ಗೌರವಿಸಲಾಯಿತು. ಯಮುನಾ ತಂಡ ದ್ವಿತೀಯ ಸ್ಥಾನ, ಕಮಲಕುಮಾರಿ ತಂಡ ಹಾಗೂ ಗಾಯತ್ರಿ ವಿಶ್ವಕರ್ಮ ಸಂಘ ತೃತೀಯ, ಮಗಿಳ್ ನಂಗೇಯರ್ ತಮಿಳ್ ತಾಯಿ ಸಂಘ, ಹೇಮಾ ತಂಡ, ಜಯಮಾಲಾ ತಂಡ ಹಾಗೂ ಚೈತ್ರಾ ತಂಡ ನಾಲ್ಕನೇ ಸ್ಥಾನ, ಶರಾವತಿ ತಂಡಕ್ಕೆ ಐದನೇ ಬಹುಮಾನಕ್ಕೆ ನೀಡಲಾಯಿತು.
ಇದೇ ಸಂದರ್ಭದಲ್ಲಿ ವಿವಿಧ ತಾಲೂಕುಗಳ ಅಧ್ಯಕ್ಷರಿಗೆ ಸನ್ಮಾನಿಸಲಾಯಿತು. ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಒಕ್ಕೂಟದ ಅಧ್ಯಕ್ಷ ಗೋ.ರಮೇಶ್‌ಗೌಡ, ಕಾರ್ಯದರ್ಶಿ ಮಮತಾ ಶಿವಣ್ಣ, ಖಜಾಂಚಿ ಪುಷ್ಪಾ ಮಂಜುನಾಥ, ಭಾಗೀರಥಿಗೌಡ, ಗೀತಾ ನಿಂಗನಗೌಡ, ರಾಜೀವ ಕೃಷ್ಣಮೂರ್ತಿ, ನಿವೇದಿತಾಗೌಡ, ಅನ್ನಪೂರ್ಣ ಸತೀಶ್, ಗೀತಾ ಪರಮೇಶ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...