Friday, December 5, 2025
Friday, December 5, 2025

Shivamogga Film Festival ಶಿವಮೊಗ್ಗದಲ್ಲಿ ಸಿನಿಹಬ್ಬ

Date:

Shivamogga Film Festival ಇಂದಿನ ಯುವಜನತೆ ಕೋಮುವಾದ, ಜಾತಿವಾದಗಳ ಕಡೆ ವಾಲುತ್ತಿದ್ದು, ಯುವಜನತೆಯನ್ನು ಸಿನಿಹಬ್ಬದಂತ ಕಾರ್ಯಕ್ರಮಗಳ ಸೆಳೆಯುವ ಅನಿವಾರ್ಯತೆ ಇದೆ ಎಂದು ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಹೇಳಿದರು.

ಶಿವಮೊಗ್ಗ ಪ್ರೆಸ್ ಟ್ರಸ್ಟ್, ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಸಹಯೋಗದಲ್ಲಿ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ “ಸಮಾಜವಾದ” ವಿಷಯಾಧಾರಿತ ಎರಡು ದಿನಗಳ ಸಿನಿಮಾ ಚಿಂತನೆ ಕಾರ್ಯಕ್ರಮ ಶಿವಮೊಗ್ಗ ಸಿನಿಹಬ್ಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಶಿವಮೊಗ್ಗ ವೈವಿದ್ಯತೆ, ಸಮಾಜವಾದಿ ನೆಲವಾಗಿದೆ.‌ ಇಂತಹ ಜಿಲ್ಲೆಯಲ್ಲಿ ತಲ್ಲಣ ಉಂಟುಮಾಡುವ ಪರಿಸ್ಥಿತಿಗೆ ತಲುಪಿದೆ. ಪ್ರವಾಸಿಗರು ಇಲ್ಲಿಗೆ ಬರಲು ಆತಂಕಪಡುವ ವಾತಾವರಣ ಸೃಷ್ಟಿಯಾಗಿದೆ ಎಂದರು‌.

ಸಿನಿಮಾ ಮಾಧ್ಯಮ ಪ್ರಭಾವವಾಗಿದೆ‌. ಕಾಲೇಜು ವಿದ್ಯಾರ್ಥಿಗಳಿಗೆ ಸಮ ಸಮಾಜ ಸೃಷ್ಠಿಮಾಡುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದು ಹೇಳಿದರು.

ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಕಾಚಿನಕಟ್ಟೆ ಮಾತನಾಡಿ, ಕೆಲಸದ ಒತ್ತಡ ನಾನು ಸಣ್ಣಪುಟ್ಟ ನಾಟಕಗಳನ್ನು ಮಾಡುತ್ತೇನೆ. ಸಿನಿಮಾ ಕೇವಲ ಮನರಂಜನೆಗೆ ನೋಡುತ್ತಿದ್ದ ಕಾಲ ಇತ್ತು. ಬಳಿಕ ಸಾಮಾಜಿಕ ಕಳಕಳಿಯುಳ್ಳ ಭೂತನಯ್ಯನ ಮಗ ಅಯ್ಯು, ಅವತಾರ್ ಸಿನಿಮಾಗಳು ಮನಸಿಗೆ ನಾಟಿದವು ಎಂದರು.

ಶಿವಮೊಗ್ಗ ಸಮಾಜವಾದಿ, ರೈತ, ದಲಿತ, ಕಾಗೋಡು ಚಳುವಳಿಯಂತ ಮಾದರಿ ಚಳುವಳಿ ನೀಡಿದ ನಾಡಿನಲ್ಲಿ ಸಮಾಜದ ಶಾಂತಿಯನ್ನು ಕದಡುವ ರೀತಿ ಅಹಿತಕರ ಘಟನೆಗಳನ್ನು ನಡೆಯುತ್ತಿರುವುದು ಖೇಧಕರ ಎಂದು ವಿಷಾಧಿಸಿದರು.

ಸಿನಿಮಾ ವಿಮರ್ಶಕರಾದ ಪಣಿರಾಜ್ ಮಾತನಾಡಿ, ವೈಚಾರಿಕತೆ ಆಯ್ದುಕೊಳ್ಳುವ ರೀತಿ ಸಿನಿಮಾಗಳು‌ ಮೂಡಿ ಬರಬೇಕಿದೆ. ವೈಚರಿಕತೆ ಹೆಚ್ಚಿಸುವ ಸಿನಿಮಾ‌ ಕಲೆ ಅರಿತುಕೊಳ್ಳಬೇಕು. ಸಿನಿಮವನ್ನು ವ್ಯಕ್ತಿಯಾಗಿ ನೊಡದೇ ಸಮುದಾಯವಾಗಿ ನೋಡಬೇಕು.‌ ಬಂಧುತ್ವದ ಸಮಾಜವನ್ನಜ ಕಟ್ಟಲು ಸಿನಿಮಾ ಹಬ್ಬ ಕಾರಣವಾಗಬೇಕು ಎಂದು ಹೇಳಿದರು.

ಇತ್ತಿನ‌ ಕಾಲದಲ್ಲಿ ಸಮಾಜವಾದವನ್ನು ಅರ್ಥೈಸಬೇಕು ಎಂದು ಸಿನಿಮಾಗಳು ಹೇಳುವಂತಿರಬೇಕು. ಜಾಗತಿಕವಾಗಿ ಬೆಳೆಯುತ್ತಿರುವ ಬಂಡವಾಳ ಶಾಹಿಗಳ ರಾಜಕೀಯವನ್ನು ಹಿಮ್ಮೆಟ್ಟಿಸುವ ಬಗ್ಗೆ ತಿಳಿಸುವ ಸಿನಿಮಾಗಳು ಅಗತ್ಯವಿದೆ. ಸಮಾಜವಾದದ ವಿಚಾರ, ಸಿದ್ದಾಂತಗಳ ಮರುಚಿಂತನೆ ಮಾಡುವಂತ ಸಿನಿಮಾಗಳು ಮೂಡಿ ಬರಬೇಕಿದೆ ಎಂದರು.‌

ಪ್ರಸ್ತಾವಿಕವಾಗಿ ಮಾತನಾಡಿದ ಐವಾನ್ ಡಿಸಿಲ್ವಾ, ಮನುಜಮತ ಸಿನಿಯಾನ ಗೆಳೆಯರು ವಾಟ್ಸಾಪ್ ನಲ್ಲಿ ಚರ್ಚೆ ಮಾಡಿ ಮನುಜಮತ ಸಿನಿಯಾನವನ್ನು ಆರಂಭ ಮಾಡಿದವು. ಬಳಿಕ ಸಿನಿ‌ಹಬ್ಬವನ್ನು ವರ್ಷದಲ್ಲಿ ಮೂರು ಬಾರಿ ಸಿನಿ‌ಹಬ್ಬ ಮಾಡುಕೊಂಡು ಬರುತ್ತಿದ್ದೇವೆ. ಶಿವಮೊಗ್ಗದಲ್ಲಿ ಇದು ಎರಡನೇ ಸಿನಿಹಬ್ಬ ಆಚರಿಸುತ್ತಿದ್ದೇವೆ. ಮಹಿಳೆ ಮೇಲಿನ ದೌರ್ಜನ್ಯ ಸೇರಿದಂತೆ ಹಲವು ವಿಚಾರಗಳನ್ನು ಇಟ್ಟುಕೊಂಡು ಮನುಜಮತ ಸಿನಿಯಾನ ನಡೆದುಕೊಂಡು ಬರುತ್ತಿದೆ ಎಂದು ತಿಳಿಸಿದರು.

Shivamogga Film Festival ಆಕಾಶವಾಣಿ ಪ್ರಸಾರ ನಿರ್ವಾಹಕರಾದ ಸುಜಾತ ಮಾತನಾಡಿ, ಸಿನಿಮಾ ನೋಡುವುದಲ್ಲ, ಓದುವುದು ಎಂದರು.

ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಗೋಪಾಲ್ ಯಡಗೆರೆ, ಪತ್ರಕರ್ತ ಚಂದ್ರಶೇಖರ್ ಹೊನ್ನಾಳಿ ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...