Klive Special Article ಭಾರತದ ಸಂವಿಧಾನ ವನ್ನು ನಾವು ಒಪ್ಪಿಕೊಂಡು ದಿನಾಂಕ 26.01.1950ರಂದು ಜಾರಿಗೊಳಿಸಿದ ದಿನ ವನ್ನು ಪ್ರತಿವರ್ಷ ನಾವು ಗಣ ರಾಜ್ಯೋತ್ಸವ ದಿನವಾಗಿ ಆಚರಿಸುತ್ತೇವೆ.
ದೇಶದ ಪ್ರತಿಯೊಬ್ಬ ಪ್ರಜೆಗೂ ವ್ಯಕ್ತಿ ಸ್ವಾತಂತ್ರ್ಯ, ಸಹಸಮಾನ ಶಿಕ್ಷಣ, ಪ್ರಜೆಯ ಮೂಲಭೂತ ಹಕ್ಕುಮತ್ತು ಕರ್ತವ್ಯಗಳು , ಧಾರ್ಮಿಕ ಹಕ್ಕುಗಳನ್ನು ಪ್ರತಿಯೊಬ್ಬ ಪ್ರಜೆಗೂ ಒದಗಿಸಿಕೊಟ್ಟ ಈ ಸಂವಿಧಾನವೇ ನಮ್ಮ ಭಾರತದ ಸರ್ವೋಚ್ಚ ಕಾನೂನು ಮತ್ತು ಶಾಸನ. ಭಾರತದ ಸಂವಿಧಾನ ವಿಶ್ವದ ಅತೀ ದೊಡ್ಡ ಸಂವಿಧಾನ ನಮಗೆ ಆದರ್ಶಪ್ರಾಯ.
ಸ್ವಾತಂತ್ರ್ಯ, ಸಮಾನತೆ, ಸಹೋದರತ್ವ, ಏಕತೆ, ಭ್ರಾತೃತ್ವ ಈ ಐದು ಪ್ರಮುಖ ಮೌಲ್ಯಗಳುಳ್ಳ ಈ ಸಂವಿಧಾನದ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಮತ್ತು ಈ ಮಹತ್ವ ಪೂರ್ಣಶುಭ ದಿನಕ್ಕೆ ಕಾರಣರಾದ ಮಹಾನ್ ವ್ಯಕ್ತಿಗಳನ್ನು ಸಂಸ್ಮರಿಸುವ ದಿನವೇ ” ಗಣರಾಜ್ಯೋತ್ಸವ “.ಇಂದು ನಾವು 75 ನೇ ಗಣರಾಜ್ಯೋತ್ಸವ ವನ್ನು ಆಚರಿಸುತ್ತಿದ್ದೆವೆ.
ಈ ವರ್ಷ ನಮ್ಮ ಗಣರಾಜ್ಯೋತ್ಸವಕ್ಕೆ ಫ್ರಾನ್ಸ್ ನ ಅಧ್ಯಕ್ಷ ಇಮ್ಯಾನುವಲ್ ಮ್ಯಾಕ್ರಾನ್ ವಿಶೇಷ ಅತಿಥಿಯಾಗಿ ಆಗಮಿಸಿದ್ದಾರೆ.
ನವದೆಹಲಿಯ ಕರ್ತವ್ಯಪಥದಲ್ಲಿ ಅತ್ಯಂತ ಭವ್ಯವಾದ ರಕ್ಷಣಾ ಪಡೆಗಳ ಪೆರೇಡ್ , ವಿವಿಧ ರಾಜ್ಯಗಳ ಅಭಿವೃದ್ಧಿ ಮತ್ತು ಮಹತ್ವ ಸಾರುವ ಟ್ಯಾಬ್ಲೊಗಳು ಮೆರವಣಿಗೆಯಲ್ಲಿ ಸಾಗುವ ದೃಶ್ಯವಂತೂ ಕಣ್ಮನ ಸೆಳೆಯುತ್ತವೆ.
Klive Special Article ಪ್ರತಿ ವರ್ಷ ಗಣರಾಜ್ಯೋತ್ಸವ ಆಚರಿಸಿ ಸಂವಿಧಾನ ಕ್ಕೆ ಗೌರವ / ವಂದನೆ ಸಲ್ಲಿಸುವ ಈ ಕಾರ್ಯಕ್ರಮ ಪ್ರತಿಯೊಬ್ಬ ನಾಗರೀಕನ ಆದ್ಯ ಕರ್ತವ್ಯ.
ಜೈ ಹಿಂದ್.
75 ನೇ ಗಣರಾಜ್ಯೋತ್ಸವದ ಶುಭಾಶಯಗಳು.
ಲೇಖಕರು:
ಎಂ.ತುಳಸಿರಾಂ, ಮೈಸೂರು