Friday, April 25, 2025
Friday, April 25, 2025

Shree Rama Costume Competition ಅಯೋಧ್ಯಾ ಬಾಲರಾಮ ಸಂಭ್ರಮದ ವಿಶೇಷ ಛದ್ಮವೇಷ ಪ್ರದರ್ಶನ

Date:

Shree Rama Costume Competition ಅಯೋಧ್ಯೆಯ ಶ್ರೀಬಾಲರಾಮನ ಪ್ರತಿಷ್ಟಾಪನಾ ಸಡಗರದ ಅಂಗವಾಗಿ ವಂದೇ ಮಾತರಂ ಟ್ರಸ್ಟ್ ನಿಂದ ಚಿಕ್ಕಮಗಳೂರು ನಗರದ ಕೋಟೆ ವೀರಗಲ್ಲು ಬಳಿ ಪುಟಾಣಿ ಮಕ್ಕಳು ಶ್ರೀರಾಮನ ವೇಷಭೂಷಣ ಹಾಗೂ ಚದ್ಮವೇಷ ಧರಿಸುವ ಮುಖಾಂತರ ಸಾರ್ವಜನಿಕರನ್ನು ಮನರಂಜಿಸಿದರು.

ಸುತ್ತಮುತ್ತ ವಾರ್ಡಿನ ಸುಮಾರು ಮೂವತ್ತಕ್ಕೂ ಹೆಚ್ಚು ಮಕ್ಕಳು ರಾಮಾಯಾಣದ ಕುರಿತು ವಿವಿಧ ಪಾತ್ರ ಗಳಲ್ಲಿ ಹೆಜ್ಜೆ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರಗು ಮೂಡಿಸಿದರು.

ಬಳಿಕ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಪ್ರೀತೇಶ್ ಐದು ಶತಮಾನಗಳ ಬಳಿಕ ಶ್ರೀರಾಮನು ಭವ್ಯ ಮಂದಿರದ ದೇಗುಲಕ್ಕೆ ತೆರಳಿರುವುದು ಐತಿಹಾಸಿಕ ಸಂಗತಿ. ಈ ಪ್ರತಿಷ್ಟಾಪನಾ ಹಿಂದೆ ಹಲವಾರು ಹೋರಾಟಗಳ ಫಲದ ಹಿನ್ನೆಲೆಯಲ್ಲಿ ಮರಳಿ ಶ್ರೀರಾಮನ ತನ್ನ ಗುಡಿಯಲ್ಲಿ ನೆಲೆಸಿ ದರ್ಶನ್ಯ ಭಾಗ್ಯ ಕಲ್ಪಿಸಿರುವುದಕ್ಕೆ ಪ್ರತಿಯೊಬ್ಬರು ಹೆಮ್ಮೆ ಪಡಬೇಕು ಎಂದರು.

ಇದೇ ವೇಳೆ ಶ್ರೀರಾಮನ ವೇಷಭೂಷಣ ಹಾಗೂ ಚದ್ಮವೇಷದಲ್ಲಿ ಭಾಗಿಯಾಗಿದ್ದ ಮಕ್ಕಳಿಗೆ ಪ್ರಮಾಣಪತ್ರ ನೀಡುವ ಮೂಲಕ ಬಹುಮಾನ ವಿತರಿಸಲಾಯಿತು. ಕೋಟೆಯ ಆಟೋ ವೃತ್ತದ ಆಟೋ ಚಾಲಕರು ಪುರಾತನ ವೀರಗಲ್ಲು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸಿರುವುದಕ್ಕೆ ಅಭಿನಂದನೆ ಸಲ್ಲಿಸಲಾಯಿತು.
1990ರಲ್ಲಿ ಚಿಕ್ಕಮಗಳೂರಿನ ಕರಸೇವೆಗೆ ತೆರಳಿದ್ದ ತಿಪ್ಪೇಸ್ವಾಮಿ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.

Shree Rama Costume Competition ಕಾರ್ಯಕ್ರಮದಲ್ಲಿ ಟ್ರಸ್ಟಿನ ಕಾರ್ಯದರ್ಶಿ ಡಾ. ವಿನಯ್, ಪದಾಧಿಕಾರಿಗಳಾದ ದಿಲೀಪ್, ನವೀನ್, ರಜತ್, ನೀತೇಶ್, ಲಲಿತ ನಾಗಲಕ್ಷ್ಮಿ, ಮಾಲಾ, ವಿದ್ಯಾಶ್ರೀ, ಸೌಮ್ಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Acharya Tulsi National College of Commerce ರಕ್ತದಾನಿಗಳು ಸಮಾಜದ ನೈಜ ಹೀರೋಗಳು- ಡಾ.ಪಿ.ನಾರಾಯಣ್

Acharya Tulsi National College of Commerce ಎಲ್ಲಾ ದಾನಗಳಿಗಿಂತ ರಕ್ತದಾನ...