Chikkamagaluru News ಚಿಕ್ಕಮಗಳೂರು, ತಾಲ್ಲೂಕಿನ ಆರದವಳ್ಳಿ ಗ್ರಾಮದಲ್ಲಿ ಸುಮಾರು ಎರಡು ವರ್ಷ ಪ್ರಾಯ ದ 120ಕ್ಕೂ ಹೆಚ್ಚು ಅಡಿಕೆ ಸಸಿಗಳನ್ನು ಬೆಳಗಿನ ಜಾವದಲ್ಲಿ ಕಡಿದು ಬೀಸಾಡಲಾಗಿದೆ ಎಂದು ತೋಟದ ಮಾಲೀಕರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದ್ದಾರೆ.
ಈ ಕುರಿತು ಮಾತನಾಡಿದ ತೋಟದ ಮಾಲೀಕ ಎ.ಎಂ. ಶಿವಾನ0ದ್ ಆರದವಳ್ಳಿಯ ಸ.ನಂ.322ರ 0.26 ಗುಂಟೆಯಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಅಡಿಕೆ ಸಸಿಗಳನ್ನು ನೆಟ್ಟು ಪೋಷಿಸಲಾಗುತ್ತಿತ್ತು.
ಇದನ್ನು ಸಹಿಸದ ಗ್ರಾಮದ ಕೆಲವು ಮಂದಿ ಮುಂಜಾನೆ 5 ಗಂಟೆ ಸಮಯದಲ್ಲಿ ಏಕಾಏಕಿ ಅಡಿಕೆ ಸಸಿಗಳನ್ನು ಕಡಿದು ಬೀಸಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಸಸಿಗಳ ನಾಶದ ಸಂಬ0ಧ ತಮ್ಮ ಪತ್ನಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ದ್ವೇಷವನ್ನಿಟ್ಟುಕೊಂಡು ಗ್ರಾಮದ ಉಮೇಶ್, ಕೀರ್ತಿರಾಜ್, ಎ.ಎಸ್.ಮೋಹನ್‌ಕುಮಾರ್, ಎ.ಯು. ಪ್ರಕಾಶ್, ಸುಪ್ರೀತ್ ಹಾಗೂ ರಜನೀಕಾಂತ ಎಂಬುವವರು ಅಕ್ರಮವಾಗಿ ತೋಟಕ್ಕೆ ಪ್ರವೇಶಿಸಿ ಗಿಡಗಳನ್ನು ನಾಶ ಗೊಳಿಸ ಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
Chikkamagaluru News ಅದಲ್ಲದೇ ಜಮೀನಿನಿಂದ ಮನೆಗೆ ತೆರಳುವ ಸಂದರ್ಭದಲ್ಲೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿ ಕೆಯನ್ನು ಹಾಕಲಾಗಿದ್ದು ಆ ನಿಟ್ಟಿನಲ್ಲಿ ಅಡಿಕೆ ಸಸಿ ನಾಶಗೊಳಿಸಿರುವ ಆರೋಪಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.