Saturday, November 23, 2024
Saturday, November 23, 2024

Kanaka Dasa ಕನಕದಾಸರ ಜೀವನ ನಮ್ಮೆಲ್ಲರಿಗೂ ಪ್ರೇರಣೆ-ಶಾಸಕ ಎಚ್.ಡಿ.ತಮ್ಮಯ್ಯ

Date:

Kanaka Dasa ಸಮಾಜದಲ್ಲಿ ಅಸ್ಪೃಶ್ಯತೆ, ಶೋಷಣೆಯನ್ನು ತೊಲಗಿಸುವ ನಿಟ್ಟಿನಲ್ಲಿ ಕೀರ್ತನೆ ಹಾಗೂ ತತ್ವಪದಗಳ ಮೂಲಕ ಮಾನವ ಕುಲಕ್ಕೆ ನಾವೆಲ್ಲರೂ ಒಂದೇ ಎಂಬ ಸಂದೇಶ ನೀಡಿದ ಮಹಾ ಪುರುಷ ಕನಕದಾಸರ ಜೀವನ ನಮ್ಮೆಲ್ಲರಿಗೂ ಪ್ರೇರಣೆ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.
ನಗರದ ಕೆ.ಎಸ್.ಆರ್.ಟಿ.ಸಿ. ಡಿಪೋದಲ್ಲಿ ಕೆ.ಎಸ್.ಆರ್.ಟಿ.ಸಿ. ಕುರುಬ ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಮಂಗಳವಾರ ಏರ್ಪಡಿಸಿದ್ದ536 ನೇ ಕನಕ ಜಯಂತೋತ್ಸವದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಾತೀಯತೆ ತೊಲಗಿಸುವ ನಿಟ್ಟಿನಲ್ಲಿ ಕನಕದಾಸರು ಹಲವಾರು ಕೀರ್ತನೆಗಳನ್ನು ರಚಿಸಿ ಜನರಲ್ಲಿರುವ ಅಸಮಾನತೆ ಎಂಬ ಕೆಟ್ಟಮನಸ್ಥಿತಿಯನ್ನು ಹೊರತೆಗೆಯುವಲ್ಲಿ ಶ್ರಮವಹಿಸಿದ ದಾರ್ಶನಿಕರು ಎಂದ ಅವರು ಕನಕ ದಾಸರು, ಬಸವಣ್ಣ ಸೇರಿದಂತೆ ಅನೇಕ ಮಹಾನೀಯರು ಬದುಕಿನ ಉದ್ದೇಶವನ್ನು ಪರಿಪಾಲಿಸಬೇಕು ಎಂದು ಕಿವಿ ಮಾತು ಹೇಳಿದರು.
ಕನಕದಾಸರು ಎಂದಿಗೂ ಒಂದೇ ಜಾತಿಗೆ ಸೀಮಿತರಾದವರಲ್ಲ. ಪ್ರತಿಯೊಬ್ಬರ ಧ್ವನಿಯಾಗಿದ್ದರು. ಇಂದಿನ ಯುವಪೀಳಿಗೆ ಅವರ ವಿಚಾರಧಾರೆಗಳನ್ನು ಅರಿತು ಮುನ್ನೆಡೆಯಬೇಕಿದೆ. ಪ್ರಸ್ತುತ ಕನಕರು ನಮ್ಮೊಂದಿಗಿಲ್ಲದಿದ್ದರೂ ಅವರ ನೀಡಿದ ಸಂದೇಶ ಚಾಚುತಪ್ಪದೇ ಪಾಲಿಸಿಕೊಂಡಲ್ಲಿ ಯಶಸ್ವಿ ವ್ಯಕ್ತಿಯಾಗಿ ರೂಪುಗೊಳ್ಳಬಹುದು ಎಂದರು.
ಸಮಾನತೆಗಾಗಿ ಹೋರಾಡಿ ಸಮುದಾಯದ ಮೇಲೆತ್ತಿದ ಸಾಮಾಜಿಕ ಹೋರಾಟ ಗಾರರಾಗಿ ಸಮಾಜದಲ್ಲಿ ಶಾಶ್ವತ ಛಾಪು ಮೂಡಿಸಿದ ಮಹಾನೀಯರ ಜಯಂತಿಗಳನ್ನು ಆಚರಿಸುವ ಜೊತೆಗೆ ಅವರು ಹಾಕಿಕೊಟ್ಟ ಮಾರ್ಗ ದರ್ಶನದಲ್ಲಿ ಸಾಗಿದರೆ ಮಾತ್ರ ಕನಕದಾಸರು ಸಾರಿದ ಸಂದೇಶ ಅರ್ಥ ಪೂರ್ಣವಾಗಲಿದೆ ಎಂದು ತಿಳಿಸಿದರು.
ಕನ್ನಡಪೂಜಾರಿ ಹಿರೇಮಗಳೂರು ಕಣ್ಣನ್ ಮಾತನಾಡಿ ತಮ್ಮ ಕೀರ್ತನೆಗಳ ಮೂಲಕ ಜನರ ಹೃದಯದಲ್ಲಿ ಆಧ್ಯಾತ್ಮಿಕ ಜಾಗೃತಿಯನ್ನು ತುಂಬಿದ ಕನಕದಾಸರು ಭಕ್ತಿ, ನಂಬಿಕೆ ಮತ್ತು ಪ್ರೀತಿಯಿಂದ ಹಲವಾರು ಭಕ್ತಿಗೀತೆಗಳನ್ನು ರಚಿಸಿದ್ದರು. ಜೊತೆಗೆ ಅತ್ಯುತ್ತಮ ಕವಿ ಮತ್ತು ಸಂಗೀತಗಾರ ಮಾತ್ರವಲ್ಲದೆ ಅತ್ಯುತ್ತಮ ವಾಗ್ಮಿ ಮತ್ತು ವಿದ್ವಾಂಸರಾಗಿ ದ್ದರು ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೆ.ಎಸ್.ಆರ್.ಟಿ.ಸಿ. ಚಿಕ್ಕಮಗಳೂರು ವಿಭಾಗದ ಸಹಾಯಕ ಲೆಕ್ಕಾಧಿಕಾರಿ ಕೆ.ಎ.ಜಯಣ್ಣ ನಾಡಿನಲ್ಲಿ ವಿಶೇಷ ಕೀರ್ತನೆಗಳ ಮೂಲಕ ಕನಕದಾಸರು ಜಾತೀಯತೆ ವಿರುದ್ಧ ಹೋರಾಡಿ ದವರು. ಆ ನಿಟ್ಟಿನಲ್ಲಿ ಎಲ್ಲರನ್ನೂ ಒಂದೇ ಭಾವನೆಯಿಂದ ಕಾಣುವ ದೃಷ್ಟಿಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ನಾಲ್ವರಿಗೆ ಗೌರವಿಸಿ ಪುರಸ್ಕ್ಕರಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ.ಎಸ್.ಆರ್.ಟಿ.ಸಿ. ಚಿಕ್ಕಮಗಳೂರು ವಿಭಾಗೀಯ ನಿಯಂ ತ್ರಣಾಧಿಕಾರಿ ಕೆ.ಆರ್.ಬಸವರಾಜು ಕನಕರ ನೌಕರರ ಕ್ಷೇಮಾಭಿವೃಧ್ದಿ ಸಂಘದ ಪ್ರತಿಯೊಬ್ಬರ ಸಹಕಾರದಿಂದ ಇಂದು ಜಯಂತಿ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ. ಹೀಗಾಗಿ ಮುಂದಿನ ದಿನಗಳಲ್ಲಿ ಇನ್ನಷ್ಟು ಕನಕರ ಹೆಸರಿ ನಲ್ಲಿ ಸಾಮಾಜಿಕ ಕಾರ್ಯಕ್ರಮ ರೂಪಿಸಲಾಗುವುದು ಎಂದು ತಿಳಿಸಿದರು.

Kanaka Dasa ಇದೇ ವೇಳೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ್ ನಾರಾಯಣಪುರ, ಕಡೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ಡಾ.ಕೆ.ಎ.ರಾಜಣ್ಣ, ವಕೀಲ ಅನಿಲ್‌ಕುಮಾರ್, ನಿವೃತ್ತ ಯೋಧ ಎಂ.ಎ.ಪ್ರಕಾಶ್ ಅವರನ್ನು ಸಂಘದ ವತಿಯಿಂದ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಕೆ.ಎಸ್.ಆರ್.ಟಿ.ಸಿ. ಚಿಕ್ಕಮಗಳೂರು ವಿಭಾಗೀಯ ಸಂಚಾರ ಅಧಿಕಾರಿ ಹೆಚ್.ಕೆ.ಚನ್ನಬಸಪ್ಪ, ಸಹಾಯಕ ಕಾನೂನು ಅಧಿಕಾರಿ ಎಸ್.ಮಮತ, ಜಾಗೃತಾಧಿಕಾರಿ ಸಿ.ಎಸ್.ಸ್ಮಿತಾ, ಕಲ್ಯಾಣಾಧಿಕಾರಿ ಜಿ.ಭಾಗ್ಯ, ಸಹಾಯಕ ಅಭಿಯಂತರ ಶ್ರೀಧರ್ ಸ್ವಾಮಿ, ಆಡಳಿತಾಧಿಕಾರಿ ಎಚ್.ಮಂಜಣ್ಣ, ಘಟಕ ವ್ಯವಸ್ಥಾಪಕರಾದ ಎಂ.ಬೇಬಿಬಾಯಿ, ಬಿ.ಆರ್.ಮಂಜುನಾಥ್ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ “ರಾಜ್ಯೋತ್ಸವ ಕವಿಗೋಷ್ಠಿ”

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ...

Mohare Hanumantharaya Award ಪ್ರಶಸ್ತಿ ಪುರಸ್ಕೃತ ಪತ್ರಕರ್ತ, ‘ಕ್ರಾಂತಿ ದೀಪ ‘ಮಂಜುನಾಥ್ ಅವರಿಗೆ ಸನ್ಮಾನ

Mohare Hanumantharaya Award ಪತ್ರಿಕೋದ್ಯಮದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಮೊಹರೆ ಹಣಮಂತರಾಯ...

MESCOM ನವೆಂಬರ್ 23 .ಹೊಳಲೂರು ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಹೊಳಲೂರು ಗ್ರಾಮದ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ...

Rotary Club Shimoga ಪ್ರೌಢಾವಸ್ಥೆಯು ದೇಹದಲ್ಲಿ ಅನೇಕ ಬದಲಾವಣೆ ತರುತ್ತದೆ.ಅದನ್ನ ಗಮನಿಸಬೇಕು- ಡಾ.ಮೋಕ್ಷಾ

Rotary Club Shimoga ರೋಟರಿ ಸಂಸ್ಥೆಯು ನಿಸ್ವಾರ್ಥವಾಗಿ ವಿಶ್ವದ ಎಲ್ಲ ಭಾಗಗಳಲ್ಲಿ...