Wednesday, October 2, 2024
Wednesday, October 2, 2024

JCI Shimoga Malnad ಜೆಸಿಐ ಭಾರತ ವಲಯ-24 ಜೆಸಿಐ ಶಿವಮೊಗ್ಗ ಶರಾವತಿ ಘಟಕದ ಪದಾಧಿಕಾರಿಗಳ ಪದಗ್ರಹಣ

Date:

JCI Shimoga Malnad ಜೆಸಿಐ ಭಾರತದ ವಲಯ-24ರ ಪ್ರತಿಷ್ಟಿತ ಘಟಕ ಜೆಸಿಐ ಶಿವಮೊಗ್ಗ ಶರಾವತಿಯ 2024ರ ಅವಧಿಯ ಪದಗ್ರಹಣ ಸಮಾರಂಭವು “ಲೆಟ್ಸ್ ಮೇಕ್ ಎ ಡಿಪರೆನ್ಸ್” ಗುರಿಯನ್ನು ಅರ್ಥೈಸಿಕೊಂಡು ಗೌರವಿಸಿ ಅದಕ್ಕೆ ಪೂರಕವಾಗಿ ಸರಳತೆಯನ್ನು ಸಾರಿದೆ ಎಂದು ವಲಯ-24ರ ಅಧ್ಯಕ್ಷ ಜೆಸಿ.ಚನ್ನವೀರೇಶ್ ಹಾವಣಗಿಯವರು ತಿಳಿಸಿದರು.

ಜೆಸಿಐ ಶಿವಮೊಗ್ಗ ಶರಾವತಿ ಘಟಕವು ನಗರದ ವಿಧಾರ್ಥಿ ಭವನದಲ್ಲಿ ಹಮ್ಮಿಕೊಂಡಿದ್ದ ಎಜಿಬಿ (Annual Governing Board ) ಸಭೆಯಲ್ಲಿ ಅತ್ಯಂತ ಸರಳವಾಗಿ ನೂತನ ಘಟಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಜೆಸಿ.ಸ್ವಪ್ನ ಸಂತೋಷ್ ಗೌಡರವರಿಗೆ ಪ್ರಮಾಣವಚನ ಭೋದಿಸಿ ಮಾತಾನಾಡುತ್ತಿದ್ದರು.

ಈ ಘಟಕವು 2019ರಿಂದ ಆರಂಭದಿಂದಲೂ ಸಮಾಜಮುಖಿಯಾಗಿ ತನ್ನ ಜೀವಪರ ನಿಲುವುಗಳನ್ನು ಕಾಯ್ದಿಟ್ಟುಕೊಂಡಿಯೇ ವಲಯ ಹಾಗೂ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ ಇದಕ್ಕೆ ಕಾರಣ ಸೇವಾ ಮನಸ್ಥಿತಿಯ ಕಾಳಜಿ, ಬದ್ದತೆ, ಜವಾಬ್ದಾರಿ ಕಾರಣ ಎಂದು ಅವರು ಹೇಳಿದರಲ್ಲದೆ ನೂತನ ಅಧ್ಯಕ್ಷರಿಗೆ ಹಾಗೂ ಘಟಕಕ್ಕೆ ಅಭಿನಂದನೆ ತಿಳಿಸಿದರು ಹಾಗೂ ಜೆಸಿಐ ಗುರಿಯೊತ್ತ ಚಿಹ್ನೆಯಂತೆ ಲೆಟ್ಸ್ ಮೇಕ್ ಎ ಡಿಪರೆನ್ಸ್ ಎನ್ನುವುದನ್ನು ಮನನ ಮಾಡಿಕೊಂಡಿಯೇ ಎಜಿಬಿನಲ್ಲಿ ಪದಗ್ರಹಣ ಹಮ್ಮಿಕೊಂಡಿದ್ದು ಅನ್ಯರಿಗೆ ಮಾದರಿಯು ಹೌದು, ಜೊತೆಗೆ ಭವಿಷ್ಯದಲ್ಲಿ ಈ ಸರಳತೆ ಮೈಲಿಗಲ್ಲು ಆಗಲಿದೆ ಎಂದು ಅವರು ನುಡಿದರು, ಈ ಸಂದರ್ಭದಲ್ಲಿ ಅವರಿಗೆ ಘಟಕದಿಂದ ಸನ್ಮಾನಿಸಲಾಯಿತು.

JCI Shimoga Malnad ನೂತನ ಘಟಕಾಧ್ಯಕ್ಷರಾದ ಜೆಸಿ‌.ಸ್ವಪ್ನ ಸಂತೋಷ್ ಗೌಡ ಅವರು ಮಾತಾನಾಡಿ “ಮಾತಿಗಿಂತ ಕೃತಿಯೇ ಲೇಸು” ಎನ್ನುವ ಮಾತಿನಂತೆ ನನ್ನ ಘಟಕದ ಹಿರಿಯ ಹಾಗೂ ಕಿರಿಯ ಜೆಸಿ ಸದಸ್ಯರು ಇಟ್ಟಿರುವ ನಂಬಿಕೆಯನ್ನು ಎಂದಿಗೂ ಹುಸಿಗೊಳಿಸದೆ ಜೆಸಿಐ ಸಾಂವಿಧಾನಿಕ ನಿಯಮಾವಳಿಗನುಗುಣವಾಗಿ ಕೆಲಸವನ್ನು ಮಾಡಲು ಮುಂದಾಗುತ್ತೇನೆ, ಘಟಕದ ಪ್ರೀತಿ ಅವರ ಕಾಳಜಿಗೆ ನಾನು ಋಣಿಯಾಗಿದ್ದು, ಸಿಕ್ಕಿರುವ ಅವಕಾಶವನ್ನು ಜನ ಸಮೂಹದ ನಡುವೆ ಘಟಕದ ಬೆಂಬಲದೊಂದಿಗೆ ಕೊಂಡೋಯ್ಯುವೆ ಎಂದು ಅವರು ವಿವರಿಸಿದರು.

ವೇದಿಕೆಯಲ್ಲಿ ವಲಯ-24 ರ ಅಧ್ಯಕ್ಷರಾದ ಜೆಸಿ.ಚೆನ್ನವೀರೇಶ್ ಹಾವಣಗಿ, ವಲಯ ಕೋ-ಆರ್ಡಿನೇಟರ್ ಜೆಸಿ.ಅಶ್ವಿನಿ ಆನಂದ್, ಘಟಕದ ಸ್ಥಾಪಕ ಅಧ್ಯಕ್ಷರಾದ ಜೆಸಿ.ಜ್ಯೋತಿ ಅರಳಪ್ಪ, ಪೂರ್ವಾಧ್ಯಕ್ಷರಾದ ಜೆಸಿ.ಗಾರಾ.ಶ್ರೀನಿವಾಸ್, ಐಪಿಪಿ‌ ಜೆಸಿ.ಸೌಮ್ಯ ಅರಳಪ್ಪ, ನೂತನ ಅಧ್ಯಕ್ಷರಾದ ಜೆಸಿ‌‌.ಸ್ವಪ್ನ ಸಂತೋಷ್ ಗೌಡ, ಕಾರ್ಯಕ್ರಮದ ನಿರ್ದೇಶಕರಾದ ಜೆಸಿ.ಸಿದ್ರಾಮಣ್ಣನವರುಗಳು ಉಪಸ್ಥಿತರಿದ್ದರು.

ಎಜಿಬಿ ಸಭೆಯಲ್ಲಿ ಜೆಸಿಐ ಶಿವಮೊಗ್ಗ ಶರಾವತಿ ಘಟಕದ ಎಲ್ಲಾ ಜೆಸಿಗಳು ಭಾಗವಹಿಸಿದ್ದರು‌

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...