CT Ravi Protest In Chikkamagaluru ಕರಸೇವಕ ಶ್ರೀಕಾಂತ ಪೂಜಾರಿ ಬಂಧನ ವಿರೋಧಿಸಿ ನಿನ್ನೆ ಚಿಕ್ಕಮಗಳೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು.
ಇಂದು ಸಿ.ಟಿ ರವಿ ಪೊಲೀಸ್ ಠಾಣೆ ಎದುರು ಪ್ಲೇ ಕಾರ್ಡ್ ಹಿಡಿದು ತನ್ನನ್ನೂ ಬಂಧಿಸುವಂತೆ ವಿಭಿನ್ನ ಪ್ರತಿಭಟನೆ ನಡೆಸಿದ್ದಾರೆ.
ಹುಬ್ಬಳ್ಳಿಯಲ್ಲಿ 1992 ರಲ್ಲಿ ನಡೆದ ರಾಮಜನ್ಮಭೂಮಿ ಹೋರಾಟ ವೇಳೆ ದಾಖಲಾಗಿದ್ದ ಹಳೇ ಪ್ರಕರಣದಲ್ಲಿ ಕಳೆದ ವಾರ ಬಂಧಿಸಲ್ಪಟ್ಟ ಕರಸೇವಕ ಶ್ರೀಕಾಂತ್ ಪೂಜಾರಿ ಬಂಧನ ಖಂಡಿಸಿ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿತ್ತು. ಹುಬ್ಬಳ್ಳಿಯಲ್ಲಿ ಅಯೋಧ್ಯೆ ಕರಸೇವಕ ಶ್ರೀಕಾಂತ ಪೂಜಾರಿ ಅವರನ್ನು ಬಂಧಿಸುವ ಮೂಲಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಸುದೀರ್ಘ ಕಾಲದ ತನ್ನ ದ್ವೇಷ ಭಾವನೆಯನ್ನು ಹೊರಗೆ ಹಾಕಿದೆ ಎಂದು ಪ್ರತಿಭಟನೆ ನಡೆಸಿದ್ದರು.
ಇದೀಗ ಶ್ರೀ ರಾಮ್ ಜಯ ರಾಮ್ ಜಯ ಜಯ ರಾಮ್ ಎನ್ನುತ್ತಾ ಕುಳಿತಿರುವ ಮಾಜಿ ಸಚಿವ ಸಿ.ಟಿ ರವಿ, ನಾನು ಕ್ರಿ.ಶ 1992 ರ ಡಿಸೆಂಬರ್ 06 ರ ಅಯೋಧ್ಯೆಯ ಶ್ರೀ ರಾಮ ಮಂದಿರರ ಕರ ಸೇವಕ, ನನ್ನನ್ನೂ ಬಂಧಿಸಿ ಎಂಬ ಪ್ಲೇ ಕಾರ್ಡ್ ಹಿಡಿದು ಪೊಲೀಸ್ ಠಾಣೆ CT Ravi Protest In Chikkamagaluru ಎದುರು ವಿಭಿನ್ನ ಪ್ರತಿಭಟನೆಗೆ ಕುಳಿತಿದ್ದಾರೆ.