Friday, April 25, 2025
Friday, April 25, 2025

Savitribai Phule ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಹೋರಾಡಿದ ಶಿಕ್ಷಕಿ ಸಾವಿತ್ರಿಬಾಯಿ ಫುಲೆ- ಕೆ.ಟಿ.ರಾಧಾಕೃಷ್ಣ

Date:

Savitribai Phule ದಲಿತರು ಹಾಗೂ ಶೂದ್ರ ಕುಟುಂಬದಲ್ಲಿ ಹುಟ್ಟಿರುವ ಹೆಣ್ಣು ಮಕ್ಕಳಿಗೆ ಶಿಕ್ಷಣ ಕಲಿಸುವುದರಲ್ಲಿ ಯಶಸ್ವಿಯಾಗಿ ದೇಶದ ಮೊದಲ ಶಿಕ್ಷಕಿ ಎಂಬ ನಾಮಂಕಿತ ಬರೆದವರು ಸಾವಿತ್ರಿಬಾಯಿ ಪುಲೆ ಎಂದು ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಹೇಳಿದರು.

ಚಿಕ್ಕಮಗಳೂರು ನಗರದ ಬೇಲೂರು ರಸ್ತೆ ಸಮೀಪದ ಶ್ರೀ ಭುವನೇಶ್ವರಿ ಬಾಲಿಕಾ ಪ್ರೌಢಶಾಲೆಯಲ್ಲಿ ದಲಿತ ಸಂಘರ್ಷ ಸಮಿತಿ ವತಿಯಿಂದ ಏರ್ಪಡಿಸಿದ್ದ ದೇಶದ ಮೊದಲ ಶಿಕ್ಷಕಿ ಅಕ್ಷರ ಅವ್ವ ಸಾವಿತ್ರಿಬಾಯಿ ಪುಲೆ ಅವರ ಜನ್ಮದಿನದ ಅಂಗವಾಗಿ ಬುಧವಾರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಬಳಿಕ ಹೆಣ್ಣು ಮಕ್ಕಳಿಗೆ ಸಿಹಿ ವಿತರಿಸಿ ಅವರು ಮಾತ ನಾಡಿದರು.

ಸಾವಿತ್ರಿಬಾಯಿ ಫುಲೆಯವರು ಜನವರಿ 3, 1831 ರಂದು ಮಹಾರಾಷ್ಟ್ರದಲ್ಲಿ ಜನಿಸಿದ ಅವರು 19 ನೇ ಶತಮಾನದ ಸಮಾಜ ಸುಧಾರಕಿ ಮತ್ತು ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣಕ್ಕೆ ಹೋರಾಡಿದವರು. ಸಾಮಾಜಿಕ ಅನಿಷ್ಟಗಳನ್ನು ನಿರ್ಮೂಲನೆ ಮಾಡಲು ಪಟ್ಟುಬಿಡದೆ ಕೆಲಸ ಮಾಡಿದರು ಮತ್ತು ಬಾಲ್ಯ ವಿವಾಹ ಮತ್ತು ಇತರ ಆಚರಣೆಗಳ ನಡುವೆ ವಿಶೇಷ ಅಭಿಯಾನಗಳನ್ನು ಪ್ರಾರಂಭಿಸಿದವರು ಎಂದರು.
ದೇಶದ ಅನೇಕ ವೀರರಲ್ಲಿ ಸಾವಿತ್ರಿಬಾಯಿ ಫುಲೆ ಮರೆಯಲಾಗದ ಹೆಸರು. ಅವರು ಮಹಿಳಾ ಹಕ್ಕುಗಳಿಗಾಗಿ ಹೋರಾಡಿದ ಮಹಾರಾಷ್ಟ್ರ ರಾಜ್ಯದ ಸಮಾಜ ಸುಧಾರಕಿ, ಶಿಕ್ಷಣತಜ್ಞ ಮತ್ತು ಕವಯಿತ್ರಿ. ಆಕೆಯನ್ನು ಭಾರತೀಯ ಸ್ತ್ರೀ ವಾದದ ತಾಯಿ ಎಂದು ಪರಿಗಣಿಸಲಾಗಿದ್ದು ಅವರ ಜನ್ಮದಿನಾಚರಣೆ ನಾವೆಲ್ಲರಿರೂ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ ಜೊತೆಗೆ ಜನ್ಮದಿನವನ್ನು ರಾಷ್ಟ್ರೀಯ ಜಯಂತಿಯನ್ನಾಗಿ ಆಚರಿಸಬೇಕು ಎಂದು ಆಗ್ರಹಿಸಿದರು.

ದಸಂಸ ಜಿಲ್ಲಾ ಸಂಚಾಲಕ ಕಬ್ಬಿಕೆರೆ ಮೋಹನ್‌ಕುಮಾರ್ ಮಾತನಾಡಿ ಮಹಿಳೆಯರ ಹಕ್ಕುಗಳ ಜೊತೆಗೆ, ಸಾವಿತ್ರಿಬಾಯಿ ಫುಲೆ ಅವರು ರೈತರು, ಹಿಂದುಳಿದ ಜಾತಿಗಳು ಮತ್ತು ದಲಿತರಿಗಾಗಿ ಹೋರಾಡಿದರು. ತಮ್ಮ ಕವನದ ಮೂಲಕ ತಾರತಮ್ಯದ ವಿರುದ್ಧ ಧ್ವನಿ ಎತ್ತಿದರು ಮತ್ತು ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ಪಡೆಯುವ ಅಗತ್ಯವನ್ನು ಒತ್ತಿ ಹೇಳಿದ್ದರು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜುನ ಪ್ರಾಂಶುಪಾಲ ಸಂತೋಷ್ ಪುಲೆರವರು ಅನಕ್ಷರಸ್ಥರಾಗಿದ್ದರು, ಮನೆಯಲ್ಲಿ ತನ್ನ ಗಂಡನಿoದ ಶಿಕ್ಷಣವನ್ನು ಪಡೆದಳು. ಪ್ರಾಥಮಿಕ ಶಿಕ್ಷಣದ ನಂತರ, ಅವರು ಎರಡು ಶಿಕ್ಷಕರ ತರಬೇತಿ ಕಾರ್ಯಕ್ರಮಗಳಲ್ಲಿ ದಾಖಲಿಸಿಕೊಂಡು ಮೊದಲು ಉನ್ನತ ಶಿಕ್ಷಣವನ್ನು ಸಹ ಪಡೆದ ಹಿನ್ನೆಲೆಯಲ್ಲಿ ಅವರು ದೇಶದ ಮೊದಲ ಮಹಿಳಾ ಶಿಕ್ಷಕಿಯಾಗಿ ಹೊರಹೊಮ್ಮಿದರು ಎಂದು ತಿಳಿಸಿದರು.

Savitribai Phule ಈ ಸಂದರ್ಭದಲ್ಲಿ ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ, ದಸಂಸ ಮುಖಂಡರಾದ ಚಂದ್ರಶೇಖರ್, ಚಂದ್ರು, ನಿವೃತ್ತ ಪೊಲೀಸ್ ಅಧಿಕಾರಿ ವೀರೂಪಾಕ್ಷಪ್ಪ, ಕಾಲೇಜಿನ ಪ್ರಾಧ್ಯಾಪಕರಾದ ರೇಖಾ ಹಾಗೂ ವಿದ್ಯಾರ್ಥಿ ಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Acharya Tulsi National College of Commerce ರಕ್ತದಾನಿಗಳು ಸಮಾಜದ ನೈಜ ಹೀರೋಗಳು- ಡಾ.ಪಿ.ನಾರಾಯಣ್

Acharya Tulsi National College of Commerce ಎಲ್ಲಾ ದಾನಗಳಿಗಿಂತ ರಕ್ತದಾನ...