Thursday, April 16, 2026
Thursday, April 16, 2026

Ram Mandir Ayodhya ಅಯೋಧ್ಯೆಗೆ ಜನವರಿ 22 ರಂದು ಎಲ್ಲರೂ ಬಂದರೆ ನೂಕು ನುಗ್ಗಲಾಗಬಹುದು. ನಿಮ್ಮೂರಲ್ಲೇ ಇದ್ದು ರಾಮನನ್ನ ಪ್ರಾರ್ಥಿಸಿ- ಮೋದೀಜಿ

Date:

Ram Mandir Ayodhya ರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಬೇಕೆಂಬುದು ಎಲ್ಲರ ಬಯಕೆಯಾಗಿದೆ. ಆದರೆ ಎಲ್ಲರಿಗೂ ಜನವರಿ 22ರಂದು ಅಯೋಧ್ಯೆಗೆ ಬರಲು ಸಾಧ್ಯವಿಲ್ಲ. ಮನೆಯಲ್ಲಿಯೇ ದೀಪ ಬೆಳಗುವುದರ ಮೂಲಕ ಶ್ರೀರಾಮನನ್ನು ಪ್ರಾರ್ಥಿಸಿ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಮನವಿ ಮಾಡಿದ್ದಾರೆ.

ಭದ್ರತಾ ದೃಷ್ಟಿಯಿಂದ 22ರಂದು ಅಯೋಧ್ಯೆಗೆ ತಲುಪುವುದು ಕಷ್ಟಕರವಾಗಿದೆ. ದೇಶದ ಜನತೆಗೆ ಅದರಲ್ಲೂ ಉತ್ತರ ಪ್ರದೇಶದ ಜನತೆಗೆ ಆ ದಿನದಂದು ಅಯೋಧ್ಯೆಗೆ ಬರಬೇಡಿ ಎಂದು ಕೈ ಮುಗಿದು ಕೇಳಿಕೊಳ್ಳುತ್ತೇನೆ. ಜನವರಿ 23ರ ನಂತರ ಯಾವಾಗ ಬೇಕಾದರೂ ಭೇಟಿ ನೀಡಿ ಶ್ರೀರಾಮನ ದರ್ಶನ ಪಡೆಯಿರಿ’ ಎಂದರು.

Ram Mandir Ayodhya ಆ ದಿನ ಶ್ರೀರಾಮ ಅಯೋಧ್ಯೆಗೆ ಬರುತ್ತಾನೆ. ಶ್ರೀರಾಮನ ಭಕ್ತರಾದ ನಾವು ಶ್ರೀರಾಮನಿಗೆ ತೊಂದರೆಯಾಗುವಂತಹ ಯಾವ ಕೆಲಸವನ್ನು ಮಾಡಬಾರದು. ರಾಮ ಮಂದಿರ ನಿರ್ಮಾಣಕ್ಕೆ 550 ವರ್ಷ ಕಾದಿದ್ದೇವೆ. ಅವನ ದರ್ಶನಕ್ಕಾಗಿ ಇನ್ನೂ ಸ್ವಲ್ಪ ಸಮಯ ಕಾಯಬೇಕಿದೆ’ ಎಂದು ಹೇಳಿದರು.

‘ಆ ದಿನ ಅಯೋಧ್ಯೆಗೆ ಬರಲಾಗದೆ ಇರುವವರು ಬೇಸರಿಸುವ ಅಗತ್ಯವಿಲ್ಲ. ತಮ್ಮ ಮನೆಯಲ್ಲಿ ಶ್ರೀರಾಮನನ್ನು ಪ್ರಾರ್ಥಿಸಿ. ಶ್ರೀರಾಮ ಜ್ಯೋತಿ ಬೆಳಗಿಸುವ ಮೂಲಕ ದೀಪಾವಳಿಯನ್ನು ಆಚರಿಸಿ’ ಎಂದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

JCI Sports and Cultural Club ಬಾಕ್ಸ್ ಕ್ರಿಕೆಟ್ ಟೂರ್ನಿ: ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಚಾಂಪಿಯನ್ಸ್

JCI Sports and Cultural Club ಜೆಸಿಐ ಸ್ಪೋರ್ಟ್ಸ್ ಮತ್ತು ಕಲ್ಚರಲ್...

B.Y. Raghavendra ಭಾರತದಲ್ಲಿ ಮಹಿಳಾ ಮೀಸಲಾತಿಯನ್ನ ಐತಿಹಾಸಿಕವಾಗಿ ಜಾರಿಗೆ ತರಲಾಗುತ್ತಿದೆ- ಬಿ.ವೈ.ರಾಘವೇಂದ್ರ

B.Y. Raghavendra ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಬುತ್ವವಾದ ಭಾರತದಲ್ಲಿ ಐತಿಹಾಸಿಕ ಮಹಿಳಾ...

B.Y. Raghavendra ಶಿವಮೊಗ್ಗದ ಸಂಚಾರ ವ್ಯವಸ್ಥೆ ಸುಧಾರಣೆ ಮಾಸ್ಟರ್ ಪ್ಲಾನ್: ಪ್ರಗತಿ ಪರಿಶೀಲನ ಸಭೆ

B.Y. Raghavendra ಶಿವಮೊಗ್ಗ ನಗರದ ಸಂಚಾರ ದಟ್ಟಣೆ ನಿವಾರಣೆ ಹಾಗೂ ರಸ್ತೆಗಳ...