Saturday, October 17, 2026
Saturday, October 17, 2026

Youth Army ಜಿಲ್ಲಾ ಕುಳುವ ಯುವಸೇನೆ ಅಧ್ಯಕ್ಷರಾಗಿ ಲೋಕೇಶ್ ಪೈಲ್ವಾನ್ ಆಯ್ಕೆ

Date:

Youth Army ಶಿವಮೊಗ್ಗ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಶಿವಮೊಗ್ಗ ಜಿಲ್ಲಾ ಕುಳುವ ಯುವ ಸೇನೆಯ ಜಿಲ್ಲಾಧ್ಯಕ್ಷರಾಗಿ ಲೋಕೇಶ್‌ ಫೈಲ್ವಾನ್‌ ನೇಮಕಗೊಂಡರು, ಈ ಸಂದರ್ಭದಲ್ಲಿ ಮಾತಾನಾಡಿದ ಲೋಕೇಶ್‌ ರವರು 28-12-2023ರಂದು ಅಧಿಕೃತವಾಗಿ ಕುಳುವ ಯುವ ಸೇನೆಯ ಮೊದಲ ಪೋಸ್ಟರ್‌ ಬಿಡುಗಡೆ ಮಾಡುತ್ತಿದ್ದೇವೆ ಈ ಸದಸ್ಯತ್ವ ಅಭಿಯಾನದ ಪೋಸ್ಟರ್‌ ಬಿಡುಗಡೆಯನ್ನು ಪತ್ರಕರ್ತರಾದ ಗಾರಾ.ಶ್ರೀನಿವಾಸ್‌ ರವರಿಂದ ಚಾಲನೆ ನೀಡುತ್ತಿದ್ದೇವೆ.

ಕರ್ನಾಟಕದಲ್ಲಿ ಯುವಕರಿಗಾಗಿ ಪಡೆ ಇದಾಗಿದ್ದು ಮೊದಲ ಸಂಘಟನೆ ಎಂದೇ ಹೇಳಲು ಬಲು ನೋವಿನ ಸಂಗತಿಯಾಗಿದೆ. ಯುವಕರಿಂದ-ಯುವಕರಿಗಾಗಿ ನಾವುಗಳು ಸಂಘಟಿತವಾಗಿ ನಿಲ್ಲುವ ಈ ಸಂದರ್ಭದ ತನಕದಿ ಶತಮಾನಗಳೇ ಮುಗಿದು ಹೋಗಿದೆ, ಇದೀಗ ಸರಳವಾಗಿ, ಸಣ್ಣ ಮಟ್ಟದಲ್ಲಿ ಈ ಸೇನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಇಂದು ನಾವೆಲ್ಲಾ ಸೇರಿಕೊಂಡಿರುವುದು ಜಾಗೃತದ ಸಂದೇಶವಾಗಿದೆ ಎಂದು ಲೋಕೇಶ್‌ ಫೈಲ್ವಾನ್‌ ರವರು ಅಭಿಪ್ರಾಯಿಸಿದರು.

ಇನ್ನೂ ಸಮುದಾಯದ ಮೇಲಿನ ಅನ್ಯಾಯ, ದಬ್ಬಾಳಿಕೆಗಳ ವಿರುದ್ದ ಸಿಡಿದೇಳುವ, ಕಾನೂನಾತ್ಮಕವಾಗಿ ಪ್ರತಿಭಟಿಸುವ ಕುಳುವ ಯುವ ಸೇನೆಯು ಸನ್ನದ್ದವಾಗಿದೆ ಎಂದರು.

ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಕೊರಮ,ಕೊರಮ ಶೆಟ್ಟಿ, ಕೊರಚ,ಕೊರವರ್, ಭಜಂತ್ರಿ, ಇನ್ನುಳಿದ ಉಪ ಪಂಗಡಗಳ ಸಮುದಾಯದ ಯುವಕರಿಗೆ ಸದಸ್ಯತ್ವವನ್ನು ಪಡೆಯಲು ಮುಂದಿನ ದಿನಗಳಲ್ಲಿ ಪ್ರಕಟಣೆಯ ಮೂಲಕ ತಿಳಿಸಲಾಗುವುದು ಎಂದು ಲೋಕೇಶ್‌ ಫೈಲ್ವಾನ್‌ ತಿಳಿಸಿದರು.

Youth Army ಈ ಸಂಧರ್ಭದಲ್ಲಿ ಜಿಲ್ಲಾಧ್ಯಕ್ಷರಿಗೆ ಶುಭ ಹಾರೈಸಿ ಪೋಸ್ಟರ್‌ ಬಿಡುಗಡೆಗೊಳಿಸಿದ ಪತ್ರಕರ್ತರಾದ ಗಾರಾ.ಶ್ರೀನಿವಾಸ್‌ ಸೇರಿದಂತೆ ಚಂದ್ರಪ್ಪ, ದೇವರಾಜ್‌, ನಾಗೇಶ್‌, ಗೋವಿಂದಪ್ಪ, ಕಾಮೇಶ್‌, ಸುರೇಶ್‌, ಗುರು, ರಂಗನಾಥ್‌, ರಮೇಶ್‌ ದೇವೇಂದ್ರಪ್ಪ, ಸುಚಿತ್‌, ಕುಮಾರ್‌ ಚಂದನಕೇರೆ ಹಾಗೂ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

World Mental Health Day ಶಿವಮೊಗ್ಗದಲ್ಲಿ ವಿಶ್ವ ಮಾನಸಿಕ ದಿನಾಚರಣೆ ಜಾಗೃತಿ ಜಾಥಾ

World Mental Health Day ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಅಂಗವಾಗಿ...

Mysuru Dasara ದಸರಾ ಪುಸ್ತಕ ಮೇಳ: ಪುಸ್ತಕಗಳ ವೀಕ್ಷಿಸಿದ ಅಭಿನವ ಗವಿ ಸಿದ್ದೇಶ್ವರ ಸ್ವಾಮೀಜಿ

Mysuru Dasara ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ರ ಉದ್ಘಾಟನೆಮಾಡಿದ...

Mysuru Dasara ಮೈಸೂರು ದಸರಾ ವಿದ್ಯುತ್ ದೀಪಾಲಂಕಾರಕ್ಕೆ ಸಚಿವ ಜಾರ್ಜ್ ಚಾಲನೆ

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ವಿದ್ಯುತ್‌ ದೀಪಾಲಂಕಾರಕ್ಕೆ...