B.Y.Raghavendra ಶಿವಮೊಗ್ಗದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಸುದ್ದಿಗಾರರೊಂದಿಗೆ ಮಾತನಾಡಿ
ಶಿವಮೊಗ್ಗ ಜಿಲ್ಲೆಯಲ್ಲಿ ಇತ್ತೀಚೆಗೆ ತುಂಗಾಭದ್ರಾ ಸಕ್ಕರೆ ಕಾರ್ಖಾನೆ ವಿವಾದ ಎದ್ದಿದೆ.ಸಕ್ಕರೆ ಕಾರ್ಖಾನೆ ಜಾಗದಲ್ಲಿ ರೈತರು ಉಳುಮೆ ಮಾಡುತ್ತಿದ್ದು ಇದೀಗ ಆತಂಕದಲ್ಲಿದ್ದಾರೆ ಎಂದರು.
ರೈತರನ್ನು ಅಲ್ಲಿಂದ ಎತ್ತಂಗಡಿ ಮಾಡಿಸುವ ಹುನ್ನಾರ ನಡೆಯುತ್ತಿದೆ.ರೈತರ ಪರವಾಗಿ ನಿಲ್ಲುವುದು ಬಿಜೆಪಿ ಪಕ್ಷದ ನಿಲುವಾಗಿದೆ.ಈ ಕಾರ್ಖಾನೆ ಮದ್ರಾಸ್ ನ ದೇವಿ ಶುಗರ್ಸ್ ನವರು ಖರೀದಿ ಮಾಡಿದ ಬಳಿಕ ಈ ವಿವಾದ ನ್ಯಾಯಾಲಯದಲ್ಲಿದೆ ಎಂದು ಮಾಹಿತಿ ನೀಡಿದರು.
ಅನೇಕ ವರ್ಷಗಳಿಂದ ಈ ವಿವಾದ ನಡೆಯುತ್ತಿದೆ.ಕಂದಾಯ ಬಾಕಿ ಉಳಿಸಿಕೊಂಡು ಕಾರ್ಖಾನೆ ನಷ್ಟದ ಹಾದಿಯಲ್ಲಿದ್ದು ಲಾಕ್ ಔಟ್ ಆಗಿದೆ.1700 ಎಕರೆ ಇರುವ ಯರಗನಾಳ್ ಗ್ರಾಮದ ಜಾಗದಲ್ಲಿ ಸುಮಾರು 25 ವರ್ಷಗಳಿಂದ ರೈತರು ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ.ಹರಿಗೆ ಬಳಿ 123 ಎಕರೆ ಪ್ರದೇಶದಲ್ಲಿ 398 ವಾಸದ ಮನೆಗಳಿವೆ ಎಂದು ತಿಳಿಸಿದರು.
B.Y.Raghavendra ಮಲವಗೊಪ್ಪ ಗ್ರಾಮದಲ್ಲಿ 23 ಎಕರೆ ಜಾಗದಲ್ಲಿ ಮನೆಗಳಿವೆ. ಕಾರ್ಖಾನೆ ಜಾಗವಾದ 35 ಎಕರೆ ಜಾಗದಲ್ಲಿ ಮನೆಗಳಿವೆ.25 ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಹಾಗೂ ವಾಸವಿರುವರನ್ನು ಅಲ್ಲಿಂದ ಎತ್ತಂಗಡಿ ಮಾಡುವ ಹುನ್ನಾರ ನಡೆದಿದೆ ಎಂದು ಹೇಳಿದರು.
ಸಕ್ಕರೆ ಕಾರ್ಖಾನೆಯ 35 ಎಕರೆ ಜಾಗದ 19 ಎಕರೆ ಜಾಗದಲ್ಲಿ ಲೇ ಔಟ್ ಆಗುತ್ತಿದೆ.ಸರ್ಕಾರದ ಕೆಟ್ಟ ಕಣ್ಣು ಈ ಜಾಗದ ಮೇಲೆ ಬಿದ್ದಿದೆ.ರಾಜ್ಯ ಸರ್ಕಾರ ಆತಂಕಗೊಂಡಿರುವ ರೈತರ ಹಿತ ಕಾಪಾಡಬೇಕು.ಇಲ್ಲಿ ವಾಸಿಸುವ ಹಾಗೂ ಸಾಗುವಳಿ ಮಾಡಿಕೊಂಡು ಬರುತ್ತಿರುವ ರೈತರಿಗೆ ಅವರ ಜಾಗಕ್ಕೆ ಹಕ್ಕುಪತ್ರ ನೀಡಬೇಕು.ರಾಜ್ಯ ಸರ್ಕಾರಕ್ಕೆ ರೈತರ ಪರವಾಗಿ ಮನವಿ ಮಾಡುತ್ತೇನೆ ಎಂದರು.