Tuesday, April 22, 2025
Tuesday, April 22, 2025

National Human Rights Commission ಮಾನವ ಹಕ್ಕುಗಳೆಲ್ಲವೂ ನಮ್ಮ ಸಂವಿಧಾನದಲ್ಲಿ ಅಡಕ-ನಿಂಗರಾಜು

Date:

National Human Rights Commission ಮಾನವ ಹಕ್ಕುಗಳ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳುವುದು ಅವಶ್ಯ. ಇಲ್ಲದಿದ್ದರೆ ಸಮಾಜದಲ್ಲಿ ಮೋಸ ಹೋಗುವ ಸಂಭವ ಇರುವುದರಿಂದ ಹಕ್ಕುಗಳ ಬಗ್ಗೆ ಹೆಚ್ಚು ಗಮನ ಹರಿ ಸುವುದು ಒಳಿತು ಎಂದು ರಾಷ್ಟ್ರಿಯ ಮಾನವ ಹಕ್ಕುಗಳ ಸಮಿತಿಯ ರಾಜ್ಯ ಉಸ್ತುವಾರಿ ನಿಂಗರಾಜು ಹೇಳಿದರು.

ಚಿಕ್ಕಮಗಳೂರು ನಗರದ ಮಲ್ಲಂದೂರು ರಸ್ತೆಯಲ್ಲಿ ಜಿಲ್ಲಾ ಮಾನವ ಹಕ್ಕುಗಳ ಮಾಹಿತಿ ಸಮಿತಿ ವತಿಯಿಂದ ಏರ್ಪಡಿಸಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಹಾಗೂ ಜಿಲ್ಲಾ ಘಟಕದ ಮೂರನೇ ವರ್ಷದ ಸಂಭ್ರಮದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಾನವ ಹಕ್ಕುಗಳೆಲ್ಲವೂ ನಮ್ಮ ಸಂವಿಧಾನದಲ್ಲಿ ಅಡಕವಾಗಿವೆ. ಹಾಗಾಗಿ ಈ ಹಕ್ಕುಗಳ ಬಗ್ಗೆ ಸಮರ್ಪ ಕವಾಗಿ ತಿಳಿದುಕೊಳ್ಳುವುದು ಎಲ್ಲರ ಕರ್ತವ್ಯ. ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿ ಸರಕಾರಗಳು ಶಾಸನ ರಚಿಸುವಂತಿಲ್ಲ, ರಚಿಸಿದರೇ ಅದು ಶೂನ್ಯವಾಗುತ್ತದೆ ಎಂದು ಸಂವಿಧಾನದಲ್ಲಿಯೇ ಸ್ಪಷ್ಟಪಡಿಸಲಾಗಿದೆ ಎಂದರು.

National Human Rights Commission ಸಮಿತಿಯ ಜಿಲ್ಲಾಧ್ಯಕ್ಷ ಎಂ.ರಾಜೇಶ್ ಮಾತನಾಡಿ ವ್ಯಕ್ತಿಯ ಸ್ವತಂತ್ರ್ಯವನ್ನು ಗೌರವಿಸಿ ಬದುಕುವುದೇ ಮಾನವ ಹಕ್ಕುಗಳನ್ನು ಪಾಲನೆ ಮಾಡಿದಂತೆ ಆ ನಿಟ್ಟಿನಲ್ಲಿ ಪ್ರತಿಯೊಬ್ಬ ಪ್ರಜೆಯೂ ಸ್ವತಂತ್ರ್ಯವಾಗಿ ಜೀವಿಸುವ ಹಕ್ಕ ನ್ನು ಪಡೆದಿದ್ದು ಅವುಗಳ ರಕ್ಷಣೆ ಮಾಡುವ ಕಾರಣಕ್ಕಾಗಿ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಮಾಡಲಾಗುವುದು ಎಂದು ತಿಳಿಸಿದರು.

ಮಾನವ ಮೊದಲು ಗುಣವಂತನಾಗುವ ಮುನ್ನ ಮಾನವ ಹಕ್ಕುಗಳ ಅರಿವು ಹೊಂದಿರಬೇಕು. ಆಗ ಮಾತ್ರ ಸಮಾಜದಲ್ಲಿ ನಡೆಯುವ ಅನ್ಯಾಯದ ವಿರುದ್ಧ ಹೋರಾಡಲು ಶಕ್ತನಾಗುತ್ತೇನೆ ಎಂದರು.

ಇದೇ ವೇಳೆ ರಾಷ್ಟ್ರೀಯ ಮಾನವ ಹಕ್ಕುಗಳ ಮಾಹಿತಿ ಸಮಿತಿಯ ಜಿಲ್ಲಾ ಘಟಕವು ಜಿಲ್ಲೆಯಲ್ಲಿ ಉತ್ತಮ ಸೇವೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ರಾಷ್ಟçಮಟ್ಟದಲ್ಲಿ ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ ಇಂದು ರಾಜ್ಯ ಸಮಿತಿಯವರು ಪದಾಧಿಕಾರಿಗಳನ್ನು ಗೌರವಿಸಿದರು.

ಈ ಸಂದರ್ಭದಲ್ಲಿ ಸಿವಿಲ್ ಕಂಟ್ರಾಕ್ಟರ್ ಮಣಿವೇಲು, ಕರವೇ ಉಪಾಧ್ಯಕ್ಷ ದಶರಥರಾಜ್‌ಅರಸ್, ಯುವ ಘಟಕದ ಅಧ್ಯಕ್ಷ ಕುಮಾರ್, ನಗರಸಭಾ ಮಾಜಿ ಸದಸ್ಯೆ ಸುರೇಖಾ, ಸಮಿತಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ವಿನುತಾ, ತಾಲ್ಲೂಕು ಅಧ್ಯಕ್ಷರಾದ ಬಿ.ಎಂ.ರಾಜೇಶ್, ಪೂರ್ಣಿಮಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಂತಿ, ಸಂಘ ಟನಾ ಕಾರ್ಯದರ್ಶಿಗಳಾದ ಡೀವನ್ ಲೋಬೋ, ಚೈತ್ರ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Dr. Raj Kumar ಡಾ.ರಾಜ್ ಅಭಿನಯದ ಚಲನಚಿತ್ರ ಗೀತೆಗಳ ಗಾಯನ ಕಾರ್ಯಕ್ರಮ

Dr. Raj Kumar ವರನಟ ಡಾ ರಾಜ್ ಕುಮಾರ್ ರವರ ಜನ್ಮದಿನಾಚರಣೆ...

S.N.Chennabasappa ಜನಿವಾರ ತೆಗೆಸಿದ ಪ್ರಕರಣ, ಘಟನೆ‌ಮುಂದೆ ತಪ್ಪಿಸಲು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ವಿಪ್ರ ಸಂಘಟನೆಯ ಮನವಿ

S.N.Chennabasappa ಶಿವಮೊಗ್ಗದ ದುರ್ಗಿಗುಡಿಯ ಶ್ರೀ ರಾಘವೇಂದ್ರ ಸ್ವಾಮಿ ಮಠದಿಂದ ಜಿಲ್ಲಾಧಿಕಾರಿ...

Mathura Paradise ಏಪ್ರಿಲ್ 22, ಶಿವಮೊಗ್ಗದಲ್ಲಿ “ಹೋಟೆಲ್ ಉದ್ಯಮದಲ್ಲಿ ಹೊಸ ಪ್ರವೃತ್ತಿಗಳು” ಸಂವಾದ ಕಾರ್ಯಕ್ರಮ

Mathura Paradise ಶಿವಮೊಗ್ಗ ನಗರದ ಮಥುರಾ ಪ್ಯಾರಾಡೈಸ್ ಸಭಾಂಗಣದಲ್ಲಿ ಶಿವಮೊಗ್ಗ ಹೋಟೆಲ್...

Department of Animal Husbandry and Veterinary Services ಏಪ್ರಿಲ್ 21 ರಿಂದ ಜೂನ್ 4 ವರೆಗೆ ಜಾನುವಾರು ಲಸಿಕೆ ಅಭಿಯಾನ

Department of Animal Husbandry and Veterinary Services ಶಿವಮೊಗ್ಗ ಜಿಲ್ಲೆಯಲ್ಲಿ...