Mathematician Srinivasa Ramanujam ಗಣಿತ ಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜಂ ಜನ್ಮದಿನ ಹಾಗೂ ರಾಷ್ಟ್ರೀ ಯ ಗಣಿತ ದಿನದ ಅಂಗವಾಗಿ ತಾಲ್ಲೂಕಿನ ಸಖರಾಯಪಟ್ಟಣ ಹೋಬಳಿಯ ಹೊಸಹಳ್ಳಿ ಗ್ರಾಮದ ಸರ್ಕಾರಿ ಹಿರಿ ಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗಾಗಿ ಗಣಿತ ಮೆಟ್ರಿಕ್ ಮೇಳವನ್ನು ಆಯೋಜಿಸಲಾಗಿತ್ತು.
ಈ ವೇಳೆ ಶಾಲೆಯ ಮುಖ್ಯ ಶಿಕ್ಷಕ ಕೇಶವಮೂರ್ತಿ ಮಾತನಾಡಿ ಬಾಣೂರು ಕ್ಲಸ್ಟರ್ ಬೀರೂರು ವಲಯದ ಸಹಯೋಗದಲ್ಲಿ ಇಂದು ಶಾಲೆಯಲ್ಲಿ ಗಣಿತ ಮೆಟ್ರಿಕ್ ಮೇಳ ಆಯೋಜಿಸಿ ಮಕ್ಕಳಿಗೆ ಗಣಿತ ಸಂಬಂಧಿತ ವ್ಯವಹಾರಿಕ ಜ್ಞಾನವನ್ನು ಮೂಡಿಸುವ ಕಾರ್ಯಕ್ಕೆ ಕೈಹಾಕಲಾಗಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಗಣಿತ ದಿನವನ್ನು ಪ್ರತಿ ವರ್ಷ ಡಿ.22ರಂದು ಆಚರಿಸಲಾಗುತ್ತಿದೆ. ಈ ಕ್ಷೇತ್ರಕ್ಕೆ ಗಣನೀಯ ಸೇವೆ ನೀಡಿದ ಗಣಿತತಜ್ಞ ಶ್ರೀನಿವಾಸ್ ರಾಮಾನುಜನ್ ಅವರ ಜನ್ಮದಿನದ ಹಿನ್ನೆಲೆ ಈ ದಿನವನ್ನು ಆಚರಿಸಲಾಗುತ್ತಿದೆ.
ಸಂಖ್ಯಾ ಸಿದ್ದಾಂತ, ಇನ್ಪಿನಿಟಿ ಸಿರೀಸ್, ಗಣಿತದ ವಿಶ್ಲೇಷಣೆಗೆ ಅವರ ಕೊಡುಗೆಗಳು ಪ್ರಮುಖವಾಗಿದೆ ಎಂದರು.
ಮೂಲತಃ ತಮಿಳುನಾಡಿನ ಈರೋಡ್‌ನಲ್ಲಿ ಜನಿಸಿದ ರಾಮಾನುಜನ್ ಅವರು ಬಾಲ್ಯವ್ಯವಸ್ಥೆಯಲ್ಲಿಯೇ ಗಣಿತದ ಬಗ್ಗೆ ವಿಶೇಷ ಆಸಕ್ತಿಯನ್ನು ಹೊಂದಿದ್ದರು. ಆರೋಗ್ಯ ಸವಾಲು ಮತ್ತು ಸಾಂಪ್ರದಾಯಿಕ ತರಬೇತಿಯ ಕೊರತೆ ನಡುವೆಯೂ ಈ ಕ್ಷೇತ್ರದಲ್ಲಿ ಅವರು ಛಾಪು ಮೂಡಿಸಿದವರು ಎಂದು ತಿಳಿಸಿದರು.
Mathematician Srinivasa Ramanujam ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷೆ ಮಮತ ಮಾತನಾಡಿ ಪ್ರತಿ ಮನುಷ್ಯನಿಗೂ ಗಣಿತದ ಲೆಕ್ಕಚಾರ ಅತಿಮು ಖ್ಯವಾಗಿದೆ. ಇದರಿಂದ ಆರ್ಥಿಕವಾಗಿ ಮುಂದುವರೆಯಲು ಸಾಧ್ಯ ಎಂದ ಅವರು ಆ ನಿಟ್ಟಿನಲ್ಲಿ ಗಣಿತ ವಿಷಯದ ಬಗ್ಗೆ ವಿದ್ಯಾರ್ಥಿಗಳು ಹೆಚ್ಚು ಆಸಕ್ತಿ ವಹಿಸಿದರೆ ಲೆಕ್ಕಚಾರ ವಿಚಾರದಲ್ಲಿ ಎಂದಿಗೂ ಹಾದಿ ತಪ್ಪುವುದಿಲ್ಲ ಎಂದು ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಹೆಚ್.ಎಂ.ಜಯಪ್ಪ, ಸದಸ್ಯರುಗಳಾದ ಮಹೇಂದ್ರ, ಕುಮಾರ್, ಗ್ರಾಮಸ್ಥರಾದ ಕಲ್ಮರುಡಪ್ಪ, ಮಹೇಶ್ವರಪ್ಪ, ಚಿದಾನಂದ್, ಮೂರ್ತಿ ಹಾಗೂ ಶಾಲೆಯ ಸಹ ಶಿಕ್ಷಕ ಹಾಲಪ್ಪ, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.