Kannadasene Chikkamagaluru ಚಿಕ್ಕಮಗಳೂರು ನಗರ ವ್ಯಾಪ್ತಿಯಲ್ಲಿರುವ ಎಲ್ಲಾ ವಾಣಿಜ್ಯ ಮಳಿಗೆಗಳ ನಾಮಫಲಕವನ್ನು ಕನ್ನಡದಲ್ಲೇ ಅಳವಡಿಸುವಂತೆ ಸೂಕ್ತ ಕ್ರಮ ವಹಿಸಬೇಕು ಎಂದು ನಗರಸಭಾ ಅಧ್ಯಕ್ಷರಿಗೆ ಕನ್ನಡಸೇನೆ ಮುಖಂಡರುಗಳು ಒತ್ತಾಯಿಸಿದರು.
ಈ ಸಂಬಂಧ ನಗರಸಭಾ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಅವರಿಗೆ ಮನವಿ ಸಲ್ಲಿಸಿದ ಕನ್ನಡಸೇನೆ ಮುಖಂಡರುಗಳು ಶೇ.70ರಷ್ಟು ಕನ್ನಡದ ಪದಗಳನ್ನೇ ಬಳಸಿ ನಾಮಫಲಕ ಅಳವಡಿಸುವಂತೆ ಸೂಚನೆ ನೀಡಬೇಕು ಎಂದರು.
ಬಳಿಕ ಮಾತನಾಡಿದ ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ನಗರದಲ್ಲಿರುವ ವಾಣಜ್ಯ ಮಳಿಗೆಗಳಾದ ಲಾಡ್ಜ್, ಹೋಟೆಲ್, ರೆಸ್ಟೋರೆಂಟ್ ಹಾಗೂ ಹೋಂಸ್ಟೆ, ರೆಸಾರ್ಟ್ಗಳಿಗೆ ಕನ್ನಡದಲ್ಲೇ ಹೆಚ್ಚು ನಾಮಫಲಕ ಹಾಕಿಸಿ ಭಾಷೆಯ ಬೆಳವಣಿಗೆಗೆ ಸಹಕರಿಸಬೇಕು ಎಂದರು.
Kannadasene Chikkamagaluru ಇತ್ತೀಚೆಗೆ ನಾಮಫಲಕಗಳಲ್ಲಿ ಶೇ.30ರಷ್ಟು ಕನ್ನಡ ಪದಗಳ ಬಳಕೆಯಾಗುತ್ತಿದ್ದು ಇದನ್ನು ಕೂಡಲೇ ತಡೆಹಿಡಿ ದು ಶೇ.70 ರಷ್ಟು ಕನ್ನಡವನ್ನು ಬಳಸುವಂತೆ ಅಂಗಡಿ ಮುಂಗಟ್ಟುದಾರರಿಗೆ ಕಡ್ಡಾಯವಾಗಿ ಸೂಚಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕನ್ನಡಸೇನೆ ಆಟೋ ಘಟಕದ ಅಧ್ಯಕ್ಷ ಜಯಪ್ರಕಾಶ್, ಸಂಘಟನಾ ಕಾರ್ಯದರ್ಶಿ ಸತೀಶ್, ಮುಖಂಡರುಗಳಾದ ಶಂಕರೇ ಗೌಡ, ಹರೀಶ್, ಪಾಲಾಕ್ಷಿ ಮತ್ತಿತರರು ಹಾಜರಿದ್ದರು.