Friday, June 13, 2025
Friday, June 13, 2025

Department of School Education ವಿಶೇಷ ಚೇತನರ ಮಕ್ಕಳಿಗೆ ಅನುಕಂಪ ತೋರದೇ ಅವಕಾಶ ನೀಡಿ-ಜ್ಞಾನಮೂರ್ತಿ

Date:

Department of School Education ವಿಶೇಷಚೇತನ ಮಕ್ಕಳಿಗೆ ತಾಲ್ಲೂಕು ಮಟ್ಟದ ಕೆಲವು ಭಾಗಗಳಲ್ಲಿ ಕ್ರೀಡಾ ಕೂಟ ನಡೆಯಲಿರುವ ಹಿನ್ನೆಲೆಯಲ್ಲಿ ಯಾವ ಮಕ್ಕಳು ವಂಚಿತರಾಗಬಾರದೆಂಬ ದೃಷ್ಟಿಯಿಂದ ನೇರವಾಗಿ ಜಿಲ್ಲಾ ಮಟ್ಟದಲ್ಲಿ ಆಯ್ಕೆ ಪ್ರಕ್ರಿಯೆ ಮಾಡಲಾಗುತ್ತಿದೆ ಎಂದು ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕ ಜ್ಞಾನಮೂರ್ತಿ ಹೇಳಿದರು.

ಚಿಕ್ಕಮಗಳೂರು ನಗರದ ಜಿಲ್ಲಾ ಆಟದ ಮೈದಾನದಲ್ಲಿ ಜಿಲ್ಲಾ ಪಂಚಾಯಿತಿ, ಉಪನಿರ್ದೇಶಕರ ಕಚೇರಿ ಮತ್ತು ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ವಿಶೇಷಚೇತನ ಕ್ರೀಡಾಕೂಟದ ಶಾಲಾ ಹಂತದ ಆಯ್ಕೆ ಪ್ರಕ್ರಿಯೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ವಿಶೇಷಚೇತನ ಮಕ್ಕಳಿಗೆ ಅನುಕಂಪ ತೋರದೇ ಅವಕಾಶ ನೀಡಿದರೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ನಾಡಿನ ಹೆಸರನ್ನು ಬೆಳಗಿಸಲಿದ್ದಾರೆ ಎಂದ ಅವರು ಆ ನಿಟ್ಟಿನಲ್ಲಿ ಇಲಾಖೆಯಿಂದ ಪ್ರತಿ ಸವಲತ್ತುಗಳನ್ನು ಒದಗಿಸಿ ಅವರಿಗೆ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಈ ಕ್ರೀಡಾಕೂಟದಲ್ಲಿ 14-17ರ ವಯೋಮಿತಿಯ ಪೂರ್ಣ ಅಂಧರು ಹಾಗೂ ಭಾಗಶಃ ಅಂಧರಿಗೆ ಶಾಟ್‌ಪುಟ್, ಜಾವೆಲಿನ್, ಒಂದು ಕೈ ನ್ಯೂನ್ಯತೆಯುಳ್ಳವರು ಶಾಟ್‌ಪುಟ್, ಉದ್ದಜಿಗಿತ, 50 ಮೀಟರ್ ಓಟ, ಒಂದು ಕಾಳುಇಲ್ಲದವರು ಅಥವಾ ಪೊಲೀಯೋ ಆದವರಿಗೆ ಶಾಟ್‌ಪುಟ್, ಜಾವೆಲಿನ್ ಮತ್ತು ಶ್ರವಣ ಮತ್ತು ವಾಕ್ ದೋಷ ಹೊಂದಿರುವರಿಗೆ ಶಾಟ್‌ಪುಟ್, ಜಾವೆಲಿನ್ 50-100 ಮೀಟರ್ ಓಟವಿರಲಿದೆ ಎಂದರು.

Department of School Education ತಾಲ್ಲೂಕು ದೈಹಿಕ ಶಿಕ್ಷಣ ಪರೀವೀಕ್ಷಕ ಪರಮೇಶ್ ಮಾತನಾಡಿ ಜಿಲ್ಲೆಯಾದ್ಯಂತ ಸುಮಾರು 100 ವಿಶೇಷ ಚೇತನ ಮಕ್ಕಳು ಆಯ್ಕೆಪ್ರಕ್ರಿಯೆ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದು ಪ್ರಥಮ, ದ್ವಿತೀಯ ಸ್ಥಾನ ಪಡೆದವರು ಮಧು ಗಿರಿಯಲ್ಲಿ ಡಿಸೆಂಬರ್ ಅಂತ್ಯದೊಳಗೆ ನಡೆಯುವ ರಾಜ್ಯಮಟ್ಟಕ್ಕೆ ಕ್ರೀಡಾಕೂಟಕ್ಕೆ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕರ ಸಂಘದ ಗ್ರೇಡ್1 ಪ್ರಧಾನ ಕಾರ್ಯದರ್ಶಿ ಬೆನಕಪ್ಪ, ತಾಲ್ಲೂಕು ದೈಹಿಕ ಶಿಕ್ಷಕರ ಪರೀಕ್ಷಕ ಪರಮೇಶ್, ಮೂಡಿಗೆರೆಯ ಶ್ರೀನಿವಾಸ್, ದೈಹಿಕ ಶಿಕ್ಷಕರುಗಳಾದ ವಿಲ್ಮಾ ಗೊನ್ಸಾಲಿಸ್, ವೇದ ಮೂರ್ತಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ವಿಲ್ಮಾ ಗೊನ್ಸಾಲಿಸ್, ದೈಹಿಕ ಶಿಕ್ಷಕರಾದ ಶಂಕ ರೇಗೌಡ, ಶಿವಪ್ಪ, ಜಿ.ಎಂ.ಮೊರಬದ, ವೇದಮೂರ್ತಿ, ತಿಮ್ಮಯ್ಯ, ಪರಮೇಶ್ವರಪ್ಪ, ಶಿವಕುಮಾರ್ ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga Police ಅಪರಿಚಿತ ವ್ಯಕ್ತಿ ಸಾವು

Shivamogga Police ಶಿವಮೊಗ್ಗ ಬಿ.ಹೆಚ್ ರಸ್ತೆಯಲ್ಲಿರುವ ಮಿನಾಕ್ಷಿ ಭವನದ ಬಳಿ ಅಸ್ವಸ್ಥರಾಗಿ...

Shimoga-Bhadravati Urban Development Authority ಸುಂದರ ನಗರ ನಿರ್ಮಾಣಕ್ಕೆ ನಾಗರೀಕರು ಕೈ ಜೋಡಿಸಲು ಮನವಿ : ಹೆಚ್ ಎಸ್ ಸುಂದರೇಶ್

Shimoga-Bhadravati Urban Development Authority ಮಲೆನಾಡು ಭಾಗದಲ್ಲಿ ಹಸಿರು ಉಳಿಸಲು ಮತ್ತು...

CM Siddharamaih ಸಿಎಂ ಸಿದ್ಧರಾಮಯ್ಯ ಅವರಿಂದ ಕುಸುಮ್ ಸೌರೀಕರಣ ಯೋಜನೆಗೆ ಚಾಲನೆ

CM Siddharamaih ನಮ್ಮ ಸರ್ಕಾರ ಪ್ರತೀ ವರ್ಷ ₹19,000 ಕೋಟಿ...

CM Siddharamaih ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಕುರಿತು ಅಧಿಕಾರಿಗಳೊಂದಿಗೆ ಸಿಎಂ ಸಭೆ

CM Siddharamaih ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಕುರಿತು ಆರೋಗ್ಯ ಸಚಿವರು...