Vijay Diwas ವಿಜಯ್ ದಿವಸ್ ಬಾಂಗ್ಲಾದೇಶದಲ್ಲಿ 1971 ರ ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಜಯಗಳಿಸಿದ ವಿಜಯದ ದಿನವಾಗಿದೆ.
ಪ್ರತಿ ವರ್ಷ ಡಿಸೆಂಬರ್ 16 ರಂದು ಆಚರಿಸಲಾಗುತ್ತದೆ.
ಡಿಸೆಂಬರ್ 16 ರಂದು ವಿಜಯ್ ದಿವಸ್ ದಂದು ಭಾರತೀಯ ಸಶಸ್ತ್ರ ಪಡೆಗಳು, ಯೋಧರು, ನಾಗರಿಕರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ತ
ನಮ್ಮ ಸೈನಿಕರ ತ್ಯಾಗವನ್ನು ನೆನಪಿಸಿಕೊಂಡು. ಗೌರವ ಸಲ್ಲಿಸುತ್ತಾರೆ.
ವಿಜಯ್ ದಿವಸ್ 1971 ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ಐತಿಹಾಸಿಕ ಮಿಲಿಟರಿ ವಿಜಯವನ್ನು ಪ್ರತಿಬಿಂಬಿಸುತ್ತದೆ.
Vijay Diwas ಪ್ರತಿ ವರ್ಷ ಡಿಸೆಂಬರ್ 16ರಂದು ಬಾಂಗ್ಲಾದೇಶವು ವಿಜಯ ದಿವಸ ಆಚರಿಸುತ್ತದೆ. ಈ ವಿಶೇಷ ದಿನದಂದೇ 1971ರಲ್ಲಿ ಪೀಪಲ್ಸ್ ರಿಪಬ್ಲಿಕ್ ಆಫ್ ಬಾಂಗ್ಲಾದೇಶ ಉದಯವಾಯಿತು.
ಆ ನಿಟ್ಟಿನಲ್ಲಿ ಇದೊಂದು ಐತಿಹಾಸಿಕ ದಿನವೂ ಹೌದು. ಈ ಮಹತ್ವದ ಸಂದರ್ಭವನ್ನು ಭಾರತೀಯರು, ವಿಶೇಷವಾಗಿ ಬಂಗಾಳ ಪ್ರದೇಶದ “ಘೋಟಿ” ಜನಾಂಗ, ಬಾಂಗ್ಲಾದೇಶದ ವಿಜಯಕ್ಕೆ ಕೊಡುಗೆ ನೀಡಿದ ವಿಚಾರವಾಗಿ ಹೆಮ್ಮೆಯಿಂದ ಆಚರಿಸುತ್ತಾರೆ. ಇದರ ಹಿಂದೆ ಪೂರ್ವ ಪಾಕಿಸ್ತಾನದ (ಬಾಂಗ್ಲಾದೇಶ ಅಥವಾ ಬಂಗಾಲ್ಸ್) ಬಂಗಾಳಿಗಳ ವಿಜಯದ ಉತ್ಸಾಹದ ಪ್ರತಿಧ್ವನಿಯಿದೆ.