Monday, April 28, 2025
Monday, April 28, 2025

Shivamogga District and Sessions Court ಶಿವಮೊಗ್ಗ ಜಿಲ್ಲಾ & ಸೆಷನ್ಸ್ ನ್ಯಾಯಾಲಯ ಘಟಕದ ವತಿಯಿಂದ ಪ್ರೋಸೆಸ್ ಸರ್ವರ್ & ಜವಾನ ಹುದ್ದೆಗಳಿಗೆ ಅರ್ಜಿ ಆಜ್ವಾನ

Date:

Shivamogga District and Sessions Court ಶಿವಮೊಗ್ಗ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಘಟಕದ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಇರುವ ಪ್ರೊಸೆಸ್ ಜಾರಿಕಾರ(ಪ್ರೊಸೆಸ್ ಸರ್ವರ್) ಹಾಗೂ ಜವಾನ(ಪ್ಯೂನ್) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಪ್ರೊಸೆಸ್ ಜಾರಿಕಾರ 05 ಹುದ್ದೆಗಳು ಹಾಗೂ ಜವಾನ 28 ಹುದ್ದೆಗಳು ಖಾಲಿ ಇದ್ದು ಅರ್ಜಿಗಳನ್ನು ಜಿಲ್ಲಾ ನ್ಯಾಯಾಲಯದ ವೆಬ್‍ಸೈಟ್ https://shivamogga.dcourts.gov.in/notice-category/recruitments ಅಥವಾ https://karnatakajudiciary.kar.nic.in/districtrecruitment.php ಇಲ್ಲಿ ಆನ್‍ಲೈನ್ ಮೂಲಕ ದಿ: 15-12-2023 ರಿಂದ 16-01-2024 ರ ರಾತ್ರಿ 11.59 ರವರೆಗೆ ಸಲ್ಲಿಸಬಹುದು.

Shivamogga District and Sessions Court ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯು ನಡೆಸುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ ಕನಿಷ್ಟ 18 ತುಂಬಿರಬೇಕು ಗರಿಷ್ಟ ಸಾಮಾನ್ಯ ವರ್ಗ 35 ವರ್ಷ, 2ಎ, 2ಬಿ, 3ಎ, 3ಬಿ 38 ವರ್ಷಗಳು, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1 ಕ್ಕೆ 40 ವರ್ಷ ಇರಬೇಕು. ಶುಲ್ಕ ಸಾಮಾನ್ಯ ವರ್ಗಕ್ಕೆ ರೂ.200, 2ಎ, 2ಬಿ, 3ಎ, 3ಬಿ ಗೆ ರೂ.100 ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1 ಶುಲ್ಕ ಇರುವುದಿಲ್ಲ ಎಂದು ತಿಳಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Chanakya Chess School ಮೇ 2 ರಿಂದ ಮುಕ್ತ ಚೆಸ್ ತರಬೇತಿ ಶಿಬಿರ

Chanakya Chess School ಚಾಣಕ್ಯ ಚೆಸ್ ಸ್ಕೂಲ್ ವತಿಯಿಂದ ಶಿವಮೊಗ್ಗ ನಗರದ...