Krishna Janmabhoomi Case ಈಗ ಅಯೋಧ್ಯೆ ಪ್ರಕರಣ ತೀರ್ಮಾನವಾಗಿದೆ.
ಮುಂದಿನದು ಮಥುರಾ. ಶ್ರೀಕೃಷ್ಣ ಜನ್ಮಭೂಮಿ ಕಟ್ಟಡಕ್ಕೆ ಹೊಂದಿಕೋಡಂತೆ ಇರುವ ಶಾಹಿ ಈದ್ಗಾ ಮಸಿದಿಯ ಆವರಣದಲ್ಲಿ ಸಮೀಕ್ಷೆ ನಡೆಸಲು ಅಲಹಾಬಾದ್ ಹೈಕೋರ್ಟ್ ಒಪ್ಪಿಗೆ ನೀಡಿದೆ.
ಕೃಷ್ಣಜನ್ಮ ಭೂಮಿಯ ಮೇಲೆ ಮಸೀದಿ ನಿರ್ಮಾಣವಾಗಿದೆ ಎಂಬ ಅರ್ಜಿದಾರರ ದೂರಿನ ಮೇಲೆ ಹೈಕೋರ್ಟ್ ಸಮೀಕ್ಷೆ ನಡೆಸಲು ತಿಳಿಸಿದೆ.
ಸಮೀಕ್ಷೆಗೆ ಆಕ್ಷೇಪ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಿದ ಮಸೀದಿ ಆಡಳಿತ ಮಂಡಳಿಯ ಮನವಿಯನ್ನ ಹೈಕೋರ್ಟ್ ತಿರಸ್ಕರಿಸಿದೆ.
ಸಮೀಕ್ಷೆಯನ್ನ ಹೇಗೆ ಕೈಗೊಳ್ಳಬೇಕು ಎಂಬ ಸ್ವರೂಪದ ಬಗ್ಗೆ ಕೋರ್ಟ್ ವಿಚಾರಣೆ ನಡೆಸಿ ಹೇಳಲಿದೆ ಎಂದು ನ್ಯಾ.ಮಾಯಾಂಕ್ ಕುಮಾರ್ ಅವರಿದ್ದ ಏಕಸದಸ್ಯ ಪೀಠ ತಿಳಿಸಿದೆ.
ಹಿಂದೂ ಅರ್ಜಿದಾರರ ಪರ ವಿಷ್ಣು ಹರಿಶಂಕರ್ ಮತ್ತು ಆರು ವಕೀಲರು ಅರ್ಜಿ ಸಲ್ಲಿಸಿದ್ದರು.
13.37 ಎಕರೆ ಪ್ರದೇಶದ ವ್ಯಾಪ್ತಿಯ ಭೂಮಿಯ ಮಾಲೀಕತ್ವವು ಹಿಂದೂಗಳಿಗೆ ಸೇರಿದ್ದು ಎಂದು ,ಕೇಶವ ದೇವಾಲಯವನ್ನು ನಾಶಪಡಿಸಿ ಮಸೀದಿ ನಿರ್ಮಿಸಲಾಗಿದೆ.
ಮೊಘಲ್ ದೊರೆ ಔರಂಗಜೆರಬನ ಆದೇಶದಂತೆ ಕೃಷ್ಣನ ದೇವಾಲಯ ಧ್ವಂಸಮಾಡಲಾಗಿದೆ.
ಒಳಗಡೆ ಗೋಡೆಯ ಮೇಲೆ ಕಮಲದ ಕೆತ್ತನೆಗಳಿವೆ. ನಾಗರ ಆಕೃತಿಗಳಿವೆ. ಎಂದು ಅರ್ಜಿದಾರರ ವಾದವಾಗಿದೆ.
ನ್ಯಾಯಾಲಯ ಸಮಾಜದಲ್ಲಿ ಇಂತಹ ಕ್ಲಿಷ್ಟ ಸಂಗತಿಗಳಿಗೆ ಸರ್ವ ಸಮ್ಮತ ಪರಿಹಾರ ನೀಡುತ್ತಾ ಬಂದಿದೆ.
ಅದಕ್ಕೆ ಅಯೋಧ್ಯೆ ಪ್ರಕರಣವೇ ಸಾಕ್ಷಿ.
Krishna Janmabhoomi Case ಈಗ ಮಥುರಾ ಕೃಷ್ಣ ಜನ್ಮಭೂಮಿ
ಪ್ರಕರಣ ಬೇಗ ಇತ್ಯರ್ಥವಾಗಲಿ ಎಂಬುದೇ ಎಲ್ಲರ ಆಶಯ.