BJP District SC ST Unit ದೇಶದ ಮೂರು ರಾಜ್ಯಗಳಲ್ಲಿ ಭಾರತೀಯ ಜನತಾ ಪಾರ್ಟಿ ಮುಖ್ಯ ಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸ್ಥಾನವನ್ನು ದಲಿತ ಹಾಗೂ ಹಿಂದುಳಿದ ವರ್ಗಕ್ಕೆ ಅವಕಾಶ ಮಾಡಿಕೊಟ್ಟಿರುವುದು ಸ್ವಾಗತಾರ್ಹ ಎಂದು ಬಿಜೆಪಿ ಜಿಲ್ಲಾ ಎಸ್ಸಿ, ಎಸ್ಟಿ ಘಟಕದ ಅಧ್ಯಕ್ಷ ಕುರುವಂಗಿ ವೆಂಕಟೇಶ್ ಹೇಳಿದ್ದಾರೆ.
ಈ ಸಂಬಂಧ ಪಕ್ಷದ ಚಿಕ್ಕಮಗಳೂರು ಕಚೇರಿಯಲ್ಲಿ ಹೇಳಿಕೆ ನೀಡಿರುವ ಅವರು ಛತ್ತಿಸ್‌ಗಡದಲ್ಲಿ ಬುಡಕಟ್ಟು ಸಮಾಜದ ನಾಯಕರಿಗೆ ಮುಖ್ಯಮಂತ್ರಿ ಸ್ಥಾನ, ಮಧ್ಯಪ್ರದೇಶದಲ್ಲಿ ದಲಿತ ಹಾಗೂ ಹಿಂದುಳಿದ ವರ್ಗಕ್ಕೆ ಹಾಗೂ ರಾಜಸ್ಥಾನದಲ್ಲಿ ಎಸ್ಸಿ ನಾಯಕರಿಗೆ ಉಪಮುಖ್ಯಮಂತ್ರಿ ಸ್ಥಾನ ಕಲ್ಪಿಸಿಕೊಟ್ಟು ಹಿಂದುಳಿದ ವರ್ಗದವರ ಏಳಿಗೆಗೆ ಬಿಜೆಪಿ ಶ್ರಮವಹಿಸಿದೆ ಎಂದಿದ್ದಾರೆ.
ಈಗಾಗಲೇ ಬಿಜೆಪಿ ಪಕ್ಷವು ಪಂಚಾಯಿತಿಯಿಂದ ಪಾರ್ಟಿಮೆಂಟ್‌ವರೆಗೂ ದಲಿತ ಹಾಗೂ ಹಿಂದುಳಿದ ವರ್ಗದವರಿಗೆ ಅವಕಾಶ ಮಾಡಿಕೊಟ್ಟು ಸಹಕರಿಸುತ್ತಿರುವ ನಿಟ್ಟಿನಲ್ಲಿ ಬಿಜೆಪಿ ಪಂಚರಾಜ್ಯ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಅಧಿಕಾರ ಹಿಡಿದಿರುವುದು ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷವು ರಾಜಕೀಯ ದುರುದ್ದೇಶದಿಂದ ಎಸ್ಸಿ, ಎಸ್ಟಿ ಸಮುದಾಯಗಳ ಮತ ಪಡೆದು ದ್ರೋಹವೆಸ ಗುತ್ತಿದೆ. ಇದನ್ನ ದೇಶದ ಜನತೆ ಸಮರ್ಪಕವಾಗಿ ಅರ್ಥೈಸಿಕೊಂಡಿದ್ದಾರೆ.
ರಾಜ್ಯದಲ್ಲೂ ಸಹ ಕಾಂಗ್ರೆಸ್ ದಲಿತ ವರ್ಗಕ್ಕೆ ಯಾವುದೇ ಉನ್ನತ ಸ್ಥಾನಮಾನ ನೀಡಿಲ್ಲ. ಆದರೆ ಯಡಿಯೂರಪ್ಪ ಕಾಲದಲ್ಲಿ ಗೋವಿಂದ ಕಾರಜೋಳ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಕಲ್ಪಿಸಿಕೊಡಲಾಗಿತ್ತು ಎಂದಿದ್ದಾರೆ.
BJP District SC ST Unit ಇದಲ್ಲದೇ ಬಿಜೆಪಿ ಹಂತ ಹಂತವಾಗಿ ಪಂಚಾಯಿತಿ, ನಗರಸಭೆ, ಎಪಿಎಂಸಿಗಳಲ್ಲಿ ದಲಿತರು, ಹಿಂದುಳಿದ ವರ್ಗಗಳ ಜನಾಂಗಕ್ಕೆ ಹೆಚ್ಚು ಆದ್ಯತೆ ನೀಡಿದ್ದು ಜಿಲ್ಲೆಯಲ್ಲೂ ಬಹಳಷ್ಟು ಮಂದಿ ಉನ್ನತ ಸ್ಥಾನಕ್ಕೇರಲು ಮಾಜಿ ಸಚಿವ ಸಿ.ಟಿ.ರವಿಯವರ ಸಾಮಾಜಿಕ ನ್ಯಾಯಬದ್ಧ ತೀರ್ಮಾನಗಳೇ ಕಾರಣ ಎಂದಿದ್ದಾರೆ.
ಡಾ|| ಬಿ.ಆರ್.ಅಂಬೇಡ್ಕರ್ ಸಹ ಅಂದಿನ ಸಮಯದಲ್ಲಿ ಕಾಂಗ್ರೆಸ್ ಸುಡುವ ಮನೆಯಿದ್ದಂತೆ ಎಂದಿದ್ದರು. ಅದು ಇಂದು ಸ್ಪಷ್ಟವಾಗುತ್ತಿದೆ ವ್ಯಕ್ತವಾಗುತ್ತಿದೆ. ಕೇವಲ ಸ್ವಾರ್ಥಕ್ಕಾಗಿ ರಾಜಕಾರಣ ಪಕ್ಷಗಳು ಮೇಲಂಕ್ತಿಯವರನ್ನೇ ಬೆಳೆಸಲು ಸಹಕರಿಸುತ್ತಾರೆ. ಆದರೆ ಬಿಜೆಪಿ ಮಾತ್ರ ಏಕೈಕ ಪಕ್ಷ ಎಲ್ಲಾ ಸಮುದಾಯಕ್ಕೆ ಆದ್ಯತೆ ನೀಡಿದೆ. ಜೊತೆಗೆ ದೇಶದ ರಾಷ್ಟ್ರಪತಿಯನ್ನು ಆದಿವಾಸಿ ಮಹಿಳೆಗೆ ನೀಡಿ ಗೌರವಿಸಿರುವುದು ಹೆಮ್ಮೆಯ ಸಂಗತಿ ಎಂದಿದ್ದಾರೆ.